Home
ಸುದ್ದಿಜಾಲ

ವಿವೋ V29e ಫೋನ್‌ನ ಕ್ಯಾಮೆರಾ ಡಿಟೇಲ್ಸ್‌ ಬಹಿರಂಗ; ಸೆಲ್ಫಿ ಕ್ಯಾಮೆರಾಗೆ ಫಿದಾ ಆಗೋದು ಗ್ಯಾರಂಟಿ!

ವಿವೋ ಕಂಪೆನಿ ಶೀಘ್ರದಲ್ಲೇ ಹೊಸ ವಿವೋ V29e ಸ್ಮಾರ್ಟ್‌ಫೋನ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಅಧಿಕೃತ ಬಿಡುಗಡೆ ದಿನಾಂಕ ಇನ್ನು ಕೂಡ ಬಹಿರಂಗವಾಗಿಲ್ಲ, ಆದರೆ ಈ ಸ್ಮಾರ್ಟ್‌ಫೋನ್‌ ಕುರಿತ ವಿವರಗಳು ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದೀಗ ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಫೀಚರ್ಸ್‌ ಬಹಿರಂಗವಾಗಿದೆ.

ಹೌದು, ವಿವೋ V29e ಸ್ಮಾರ್ಟ್‌ಫೋನ್‌ ಕ್ಯಾಮೆರಾ ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ. ಈ ಮೂಲಕ ವಿವೋ ಸೆಲ್ಫಿ ಪ್ರಿಯರನ್ನು ಸೆಳೆಯುವುದಕ್ಕೆ ಭರ್ಜರಿ ತಯಾರಿ ನಡೆಸಿದೆ. ಇದಿಷ್ಟೇ ಅಲ್ಲ ಕ್ಯಾಮೆರಾ ವಿಭಾಗದಲ್ಲಿ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಸಹ ನೀಡಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ವಿವೋ V29e ಸ್ಮಾರ್ಟ್‌ಫೋನ್‌ ಕ್ಯಾಮೆರಾ ಫೀಚರ್ಸ್‌ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ V29e ಫೋನ್‌ನ ಕ್ಯಾಮೆರಾ ಡಿಟೇಲ್ಸ್‌ ಬಹಿರಂಗ; ಸೆಲ್ಫಿಗೆ ಫಿದಾ ಗ್ಯಾರಂಟಿ!

ಬಹಿರಂಗವಾಯ್ತು ವಿವೋ V29e ಕ್ಯಾಮೆರಾ ಡಿಟೇಲ್ಸ್‌
ವಿವೋ V29e ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ನೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇರಲಿದೆ. ಇದರ ಎರಡನೇ ಕ್ಯಾಮೆರಾ ಸೆನ್ಸಾರ್‌ ಬಗ್ಗೆ ಮಾಹಿತಿಯಿಲ್ಲ. ಆದರೆ ಇದು ಮ್ಯಾಕ್ರೋ ಲೆನ್ಸ್‌ ನೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಮೇನ್‌ ಹೈಲೈಟ್‌ ಅಂದರೆ ಇದರ ಸೆಲ್ಫಿ ಕ್ಯಾಮೆರಾ. ಈ ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ ಎನ್ನಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಸೆಲ್ಫಿ ಕ್ಯಾಮೆರಾ ಅತ್ಯುತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಫೋಕಸ್‌ಗಾಗಿ "ಐ ಆಟೋ ಫೋಕಸ್" ಅನ್ನು ಬೆಂಬಲಿಸುತ್ತದೆ ಎಂದು Vivo ಹೇಳಿಕೊಂಡಿದೆ. ಇದರಿಂದ ರಾತ್ರಿ ಸಮಯದಲ್ಲಿ ತೆಗೆದ ಸೆಲ್ಫಿ ಫೋಟೋಗಳು ಕೂಡ ಅತ್ಯುತ್ತಮವಾಗಿ ಮೂಡಿ ಬರಲಿವೆ. ಇದಲ್ಲದೆ ರಾತ್ರಿ ಸಮಯದಲ್ಲಿ ರಿಯರ್‌ ಕ್ಯಾಮೆರಾ ಮೂಲಕ ಕೂಡ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಸಾಧ್ಯವಾಗಲಿದೆ ಎಂದು ವಿವೋ ಕಂಪೆನಿ ಹೇಳಿಕೊಂಡಿದೆ.

ವಿವೋ V29e ಸ್ಮಾರ್ಟ್‌ಫೋನ್‌ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ ಎಂದು ವಿವೋ ಹೇಳಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನ ಆರ್ಟಿಸ್ಟಿಕ್ ರೆಡ್ ಆವೃತ್ತಿಯು "ಬಣ್ಣ ಬದಲಾಯಿಸುವ ಗ್ಲಾಸ್‌" ಹೊಂದಿದೆ. ಅಂದರೆ ಹೆಸರೇ ಸೂಚಿಸುವಂತೆ, ಬಣ್ಣ ಬದಲಾಯಿಸುವ ಗ್ಲಾಸ್‌ ಇರುವ ಫೋನ್‌ಗೆ ಅದರ ಶ್ಯಾಡೋವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಲು ಅನುಮತಿಸಲಿದೆ. ಆದರೆ ರಿಯರ್‌ ಪ್ಯಾನಲ್‌ನಲ್ಲಿ UV ಲೈಟ್‌ ಆನ್‌ ಆದಾಗ ಮಾತ್ರ ಇದು ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ವಿವೋ V29e ಸ್ಮಾರ್ಟ್‌ಫೋನ್‌ ಫೀಚರ್ಸ್‌ ನಿರೀಕ್ಷೆ ಏನು?
ವಿವೋ V29e ಸ್ಮಾರ್ಟ್‌ಫೋನ್‌ 6.73 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಇದರ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 480 Plus SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆಯನ್ನು ಕೂಡ ನೀಡಲಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ 4,600mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ. ಇದು 80W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಯುಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 25,000ರೂ. ಹಾಗೂ ಇದರ ಮತ್ತೊಂದು ಆಯ್ಕೆಯು 30,000 ರೂ. ಬೆಲೆಯಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Vivo company has now revealed the vivo V29e phone camera specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+