ಮೊಬೈಲ್ ಉದ್ಯಮವನ್ನೇ ಬೆಚ್ಚಿಬೀಳಿಸಿವೆ 'ವಿವೊ' ಕಂಪೆನಿಯ ನೂತನ ಆವಿಷ್ಕಾರಗಳು!!

|

ನಮ್ಮ ಯೋಚನೆಗೂ ಮೀರಿ ಬೆಳವಣಿಗೆ ಕಾಣುತ್ತಿರುವ ಮೊಬೈಲ್ ಎಂಬ ಮಾಂತ್ರಿಕ ವಸ್ತು ಈಗ ಸ್ಮಾರ್ಟ್‌ಪೋನ್ ಆಗಿ ಬದಲಾಗಿದೆ. ಆದರೆ ನಿಮಗೆ ಗೊತ್ತಾ?, ಇನ್ನೆರಡು ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಕೇವಲ ಸ್ಮಾರ್ಟ್‌ಫೋನ್ ಆಗಿ ಇರುವುದಿಲ್ಲ. ಬದಲಾಗಿ ಸೂಪರ್ ಸ್ಮಾರ್ಟ್‌ಫೋನ್ ಆಗಿ ರೂಪುಗೊಳ್ಳುತ್ತದೆ.! ಹೌದು, ವಿನ್ಯಾಸ, ಕ್ಯಾಮೆರಾ, ಡಿಸ್‌ಪ್ಲೇ, ಆಡಿಯೋ, ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ ಸೇರಿದಂತೆ ಎಲ್ಲದರಲ್ಲಿಯೂ ಸ್ಮಾರ್ಟ್‌ಫೋನ್ ಸೂಪರ್ ತಂತ್ರಜ್ಞಾನವನ್ನು ಹೊಂದಲಿದೆ.

ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ವಿವೊ ಇನ್ನೇನು ಅದ್ಬುತ ಸೂಪರ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಸೂಪರ್ ಸ್ಮಾರ್ಟ್‌ಫೋನ್ ಹೊಂದಿರಬಹುದಾದ ಉನ್ನತ ತಂತ್ರಜ್ಞಾನವನ್ನು ಹೊಂದಿರುವ ವಿವೊ ಭವಿಷ್ಯದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುವ ನಿರೀಕ್ಷೆಯನ್ನು ಹುಟ್ಟಿಹಾಕಲು ಮೊಬೈಲ್ ಉದ್ಯಮವನ್ನೇ ಬೆಚ್ಚಿಬೀಳಿಸಿದ ಕೆಲವು ಇತ್ತೀಚಿನ ಕೆಲವು ಫೀಚರ್ಸ್‌ಗಳು ಸಾಕ್ಷಿಯಾಗಿವೆ.

ಮೊಬೈಲ್ ಉದ್ಯಮವನ್ನೇ ಬೆಚ್ಚಿಬೀಳಿಸಿವೆ 'ವಿವೊ' ಕಂಪೆನಿಯ ನೂತನ ಆವಿಷ್ಕಾರಗಳು!!

ಸೂಪರ್ ಸ್ಮಾರ್ಟ್‌ಫೋನ್ ಜಗತ್ತಿನ ಮೊಟ್ಟಮೊದಲ ಹೈ-ಫೈ ಆಡಿಯೊ ಚಿಪ್‌ಸೆಟ್, ವಿಶ್ವದ ಅತ್ಯಂತ ತೆಳುವಾದ ಸ್ಮಾರ್ಟ್‌ಫೋನ್ ವಿನ್ಯಾಸ, ಸ್ಕ್ರೀನ್‌ನಲ್ಲೇ ಇತ್ತೀಚಿನ ಫಿಂಗರ್ಪ್ರಿಂಟ್ ಸ್ಕ್ಯಾನರ್ ತಂತ್ರಜ್ಞಾನಗಳನ್ನು ಹೊತ್ತು ವಿವೊವಿನ ಹೊಸ ಸ್ಮಾರ್ಟ್‌ಪೋನ್ ಕಾಲಿಡುತ್ತಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಉದ್ಯಮ ಹೊಸ ಹೊಸ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮೂಲಕ ವಿವೊ ಕಂಪೆನಿ ಹೇಗೆ ಜನರನ್ನು ಮಂತ್ರಮುಗ್ದರನ್ನಾಗಿಸಿದೆ ಎಂಬುದನ್ನು ನೋಡೋಣ ಬನ್ನಿ.

ದಿ ಪರ್ಸ್ಯೂಟ್ ಆಫ್ ಸೂಪರ್ ಹೈ-ಕ್ವಾಲಿಟಿ ಸೆಲೆಟೀಸ್

ದಿ ಪರ್ಸ್ಯೂಟ್ ಆಫ್ ಸೂಪರ್ ಹೈ-ಕ್ವಾಲಿಟಿ ಸೆಲೆಟೀಸ್

ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಒಂದು ಪ್ರಮುಖ ಅಂಗವಿದ್ದಂತೆ, ಹೀಗಾಗಿ ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಗ್ರಾಹಕರು ಆಸಕ್ತಿ ತೋರಿಸುತ್ತಾರೆ. ಪ್ರಸ್ತುತ ಸೆಲ್ಫೀ ಕ್ಯಾಮೆರಾ ಟ್ರೆಂಡ್ ಚಾಲ್ತಿಯಿದ್ದು, ಯುವ ಸಮೂಹ ಸೆಲ್ಫೀ ಸೆರೆಹಿಡಿಯಲು ಇಷ್ಟಪಡುತ್ತಾರೆ. ಹೀಗಾಗಿ ವೀವೊ ಕಂಪನಿ ಕಳೆದ ವರ್ಷ(2018) 8 ಮೆಗಾಪಿಕ್ಸಲ್ ನಿಂದ 24 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾಗಳನ್ನು ಪರಿಚಯಿಸಿತ್ತು. ಇನ್ನೂ 2019ರ ಈ ವರ್ಷದಲ್ಲಿ ವೀವೊ ಕಂಪನಿ ಸೆಲ್ಫೀ ಕ್ಯಾಮೆರಾದಲ್ಲಿ ಮತ್ತಷ್ಟು ವಿಶೇಷತೆಗಳನ್ನು ಪರಿಚಯಿಸಲಿದ್ದು, ಇದರೊಂದಿಗೆ ಕ್ವಾಲಿಟಿ ಮತ್ತು ಕ್ಲಿಯರಿಟಿಗಳ ಬಗ್ಗೆಯು ಹೆಚ್ಚಿನ ಗಮನ ನೀಡಲಿದೆ.

ಹಿಡೆನ್ ಸೆಲ್ಫೀ ಕ್ಯಾಮೆರಾ

ಹಿಡೆನ್ ಸೆಲ್ಫೀ ಕ್ಯಾಮೆರಾ

ಮಾರುಕಟ್ಟೆಯಲ್ಲಿಯ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳ ಫ್ರಂಟ್‌ ಕ್ಯಾಮೆರಾಗಳು ಸ್ಕ್ರೀನಿನ್ ಮೆಲ್ಬಾಗದ ಮಧ್ಯದಲ್ಲಿರುತ್ತವೆ. ಇದರಿಂದ ಗ್ರಾಹಕರಿಗೆ ಫುಲ್‌ ಸ್ಕ್ರೀನ್ ಡಿಸ್‌ಪ್ಲೇಯ ಅನುಭವ ಆಗುವುದಿಲ್ಲ ಇದನ್ನರಿತ ವೀವೊ ಇದೀಗ ಮುಂಬರುವ ತನ್ನ ಹೊಸ ಸ್ಮಾರ್ಟ್‌ಫೋನ್‌ ಒಂದರಲ್ಲಿ ಎಲೆವೇಟಿಂಗ್ ಸೆಲ್ಫೀ ಕ್ಯಾಮೆರಾವನ್ನು ಪರಿಚಯಿಸಲಿದ್ದು, ಸೆಲ್ಫೀ ಕ್ಯಾಮೆರಾ ಮರೆಯಾಗಿರುತ್ತದೆ ಫೋಟೋ ಸೆರೆಹಿಡಿಯುವ ವೇಳೆ ಮಾತ್ರ ಮೆಲ್ಬಾಗದಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ವೀವೊ ಹೊಸ ಫೋನ್‌ಗಳಲ್ಲಿ ಗ್ರಾಹಕರು ಫುಲ್ಸ್ಕ್ರೀನ್ ಡಿಸ್‌ಪ್ಲೇ ಅನುಭವ ಪಡೆಯಬಹುದು.

ಅಂಚುರಹಿತ ಡಿಸ್‌ಪ್ಲೇ

ಅಂಚುರಹಿತ ಡಿಸ್‌ಪ್ಲೇ

2019 ರಲ್ಲಿ ಬಿಡುಗಡೆಯಾಗಲಿರುವ ವೀವೊ ಸ್ಮಾರ್ಟ್‌ಫೋನ್‌ ಸಂಪೂರ್ಣ ಅಂಚು ರಹಿತ ರಚನೆಯನ್ನು ಹೊಂದಿರಲಿದ್ದು, ಈ ಅಂಚು ರಹಿತ ಮತ್ತು ಪೂರ್ಣ ಡಿಸ್‌ಪ್ಲೇಯ(ನೊಚ್ ಮುಕ್ತ) ಕಲ್ಪನೆ ಮುಂಬರುವ ಮಿಡ್‌ ರೇಂಜ್ ಮತ್ತು ಫ್ಯಾಗ್ ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ. ವೀವೊ ಕಂಪನಿ ಸ್ಮಾರ್ಟ್‌ಫೋನ್‌ಗಳಗೆ ಅಂಚು ಮುಕ್ತ ಮಾಡಲು ಹೊರಟಿದ್ದು, ಡಿಸೈನಿನಲ್ಲಿ ಹೊಸ ಟ್ರೆಂಡ್ ಮೂಡಿಸಲಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಇದರ ಸಹಾಯದಿಂದ ಕ್ಯಾಮೆರಾ ಆಟೋ ಫೇಸ್‌ ರಿಕಗ್ನೈಸ್ ಮಾಡಿಕೊಳ್ಳುತ್ತದೆ ಮತ್ತು ಫೇಸ್ ಬ್ಯೂಟಿ ನಂತಹ ಆಯ್ಕೆಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ. ಈ ತಂತ್ರಜ್ಞಾನವನ್ನು ಮಿಡ್‌ ರೇಂಜ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಪರಿಚಯಿಸಿದರೆ ತಂತ್ರಜ್ಞಾನ ಹೆಚ್ಚಿನ ಗ್ರಾಹಕರನ್ನು ತಲುಪಲು ಸಾಧ್ಯ ಎನ್ನುತ್ತದೆ ವೀವೊ.

ಪ್ರೋಫೆಶನಲ್ ಕ್ವಾಲಿಟಿ

ಪ್ರೋಫೆಶನಲ್ ಕ್ವಾಲಿಟಿ

ಪ್ರಸ್ತುತ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೋ ಸೆರೆಹಿಡಿದಾಗ ಬ್ಲರ್ನ್ ಆಗುವುದು, ಇಲ್ಲವೇ ಫೋಟೋ ಕ್ವಾಲಿಟಿ ಡಲ್ ಆಗಿರುವುದು, ಅಥವಾ ಕಡಿಮೆ ರೆಸಲ್ಯೂಶನ್ ನಿಂದ ಕೂಡಿರುವುದು ಆಗಿರುತ್ತದೆ. ಕೃತಕ ಬುದ್ಧಿಮತ್ತೆಯ IA ತಂತ್ರಜ್ಞಾನದ ಹೊಸ ಆಲೊಗ್ರಾಮ್ ಸಹಾಯದಿಂದ ಈ ಅಡೆತಡೆಗಳು ಕಂಡುಬರುವುದಿಲ್ಲ. ಮತ್ತು ಪೋಟೋಗಳು ಪ್ರೋಫೆಶನಲ್ ಫೋಟೋಗ್ರಫರ್ ಸೆರೆಹಿಡಿದಂತೆ ಅತ್ಯುತ್ತಮ ಮೂಡಿಬರಲಿದ್ದು, ಈ ತಂತ್ರಜ್ಞಾನವನ್ನು ವೀವೊ ಪರಿಚಯಿಸಲಿದೆ.

ಎಲಿವೇಟಿಂಗ್ ಕ್ಯಾಮೆರಾ ಎಂಟ್ರಿ

ಎಲಿವೇಟಿಂಗ್ ಕ್ಯಾಮೆರಾ ಎಂಟ್ರಿ

ಕಳೆದ ವರ್ಷ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಹಲವು ಹೊಸ ಉತ್ಸಾಹದಾಯಕ ಫೀಚರ್ಸ್‌ಗಳು ಪರಿಚಯವಾಗಿದ್ದು, ಈ ವರ್ಷ2019 ಮತ್ತಷ್ಟು ಹೊಸ ಫೀಚರ್ಸ್‌ಗಳು ಗ್ರಾಹಕರನ್ನು ತಲುಪಲಿವೆ ಎನ್ನುವ ಭರವಸೆ ಇದೆ. ಸಂಪೂರ್ಣ ಅಂಚು ರಹಿತ ಪರದೆ ಮತ್ತು ಎಲೆವೇಟಿಂಗ್ ಫ್ರಂಟ್ ಸೆಲ್ಫೀ ಕ್ಯಾಮೆರಾಗಳು ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳಲಿವೆ. ಈ ನಿಟ್ಟಿನಲ್ಲಿ ವೀವೊ ಕಂಪನಿ ಹೊಸ ಹೆಜ್ಜೆ ಇಡಲು ಸಿದ್ದವಾಗಿದೆ.

ಪ್ರದರ್ಶನದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್

ಪ್ರದರ್ಶನದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್

2018ನೇ ವರ್ಷ ಖಂಡಿತವಾಗಿಯೂ ವಿವೋ ವರ್ಷವಾಗಿತ್ತು ಎನ್ನಬೇಕು. ಏಕೆಂದರೆ, ವಿವೊ ಕಂಪನಿಯು ಇನ್-ಡಿಸ್ಪ್ಲೇ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ಸ್ಮಾರ್ಟ್‌ಫೋನ್ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಪಡೆಯಿತು. , X21 ಯ ಪ್ರದರ್ಶನದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಪ್ರದರ್ಶಕಕ್ಕೆ ಬಯೋಮೆಟ್ರಿಕ್ ದೃಢೀಕರಣವನ್ನು ಸಂಯೋಜಿಸುವ ಮೂಲಕ ಗ್ರಾಹಕರು ಸ್ಮಾರ್ಟ್‌ಫೋನನ್ನು ಲಾಕ್ ಮಾಡಲು ಅವಕಾಶ ಮಾಡಿಕೊಟ್ಟಿತು. ಇನ್ನು ಕೆಲವು ಮೊಬೈಲ್ ಕಂಪೆನಿಗಳು ಈಗಲೂ ಹಿಂಬಾಗದಲ್ಲೇ ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿವೆ.

Most Read Articles
Best Mobiles in India

English summary
Today we take a look at top innovations introduced by Vivo in past few years which were simply destructive and cutting-edge. These innovations suggest how Vivo is creating the smartphones of the future by turning never before seen features into reality for masses. Let's have a look.to know more visit to kannada.gizbot.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more