ಫೋರ್‌ ಪಂಚ್‌ ಹೋಲ್‌ ಕ್ಯಾಮೆರಾ ಡಿಸ್‌ಪ್ಲೇ ಫೋನ್‌ ಬಿಡುಗಡೆಗೆ ಸಜ್ಜಾದ ವಿವೋ!

|

ಇತ್ತೀಚಿನ ದಿನಗಳಲ್ಲಿ ಪಂಚ್ ಹೋಲ್ ಕ್ಯಾಮೆರಾ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ಗಳ ಭರಾಟೆ ಜಾಸ್ತಿ ಆಗ್ತಾ ಇದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ನಿಂದ ಹಿಡಿದು ಮೊಟೊರೊಲಾ ಒನ್ ವಿಷನ್ ಸ್ಮಾರ್ಟ್‌ವರೆಗೂ 2019 ರಲ್ಲಿ ಬಿಡುಗಡೆಯಾದ ಕೆಲವು ಸ್ಮಾರ್ಟ್‌ಫೋನ್‌ಗಳು ಪಂಚ್ ಹೋಲ್ ಕ್ಯಾಮೆರಾ ಡಿಸ್‌ಪ್ಲೇ ಯನ್ನ ಹೊಂದಿದ್ದವು. ಇದೀಗ ವಿವೋ ಕಂಪೆನಿ ನಾಲ್ಕು ಪಂಚ್ ಹೋಲ್ ಕ್ಯಾಮೆರಾ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಅನ್ನ ಪರಿಚಯಿಸಲು ಮುಂದಾಗಿದೆ.

ಹೌದು

ಹೌದು ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿಗಳಲ್ಲಿ ಒಂದಾದ ಒಪ್ಪೋ ಸ್ಮಾರ್ಟ್‌ಫೋನ್‌ ಕಂಪೆನಿ ಪಂಚ್‌ಹೋಲ್‌ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡೋದಕ್ಕೆ ತಯಾರಾಗಿದೆ. ಈಗಾಗಲೇ ವಿವೋ ಕಂಪೆನಿ ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ ನಾಲ್ಕು ಪಂಚ್ ಹೋಲ್ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಾಗಿ ಚೀನಾ ರಾಷ್ಟ್ರೀಯ ಬೌದ್ಧಿಕ ಆಸ್ತಿ ಆಡಳಿತ (ಸಿಎನ್ಐಪಿಎ) ಮಂಡಳಿಗೆ ಪೇಟೆಂಟ್ ಸಲ್ಲಿಸಿದೆ.

ಅಷ್ಟೇ

ಅಷ್ಟೇ ಅಲ್ಲ ಕಂಪನಿಯು ಈ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಮೂರು ವಿಭಿನ್ನ ರೀತಿಯಲ್ಲಿ ವಿನ್ಯಾಗೊಳಿಸಲು ಪ್ಲ್ಯಾನ್‌ ರೂಪಿಸಿದೆ ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲ ಒಂದೊಂದು ಮಾದರಿಯ ಸ್ಮಾರ್ಟ್‌ಫೋನ್‌ ಕೂಡ ವಿಶೇಷ ರೀತಿಯ ವಿನ್ಯಾಸದಲ್ಲಿ ರೂಪುಗೊಳ್ಳಿದೆ ಎಂದು ಹೇಳಲಾಗ್ತಿದೆ. ವಿವೋ ಕಂಪೆನಿಯ ಈ ಸ್ಮಾರ್ಟ್‌ಫೋನ್‌ ವಿನ್ಯಾಸ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹೊಸ ರೀತಿಯ ಅನುಭವ ನೀಡಲಿದೆ ಎಂದು ಅಂದಾಜಿಸಲಾಗಿದೆ.

ವಿವೋ

ಇನ್ನು ವಿವೋ ಕಂಪೆನಿಯ ಫೋರ್‌ ಪಂಚ್‌ಹೋಲ್‌ ಡಿಸ್‌ ಪ್ಲೇ ಕ್ಯಾಮೆರಾ ಸ್ಮಾರ್ಟ್‌ಫೋನ್‌ನ ಮೂರು ಮಾದರಿಯನ್ನ ಗಮನಿಸೋದಾದ್ರೆ ಒಂದಕ್ಕಿಂತ ಒಂದು ಬಿನ್ನವಾಗಿದ್ದು ಮೊದಲನೆ ವಿನ್ಯಾಸದ ಮಾದರಿಯಲ್ಲಿ ಫೋನ್‌ನ ಡಿಸ್‌ಪ್ಲೇಯ ನಾಲ್ಕು ಮೂಲೆಗಳಲ್ಲಿ ಪಂಚ್ ಹೋಲ್ ಕ್ಯಾಮೆರಾ ಇರುವಂತೆ ವಿನ್ಯಾಸ ಮಾಡಲು ಯೋಜಿಸಲಾಗಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಎರಡನೆಯದಾಗಿ ಫೋನ್‌ನ ಬಲ ಮತ್ತು ಎಡ ಮೂಲೆಗಳಲ್ಲಿ ಎರಡು ಪಂಚ್ ಹೋಲ್ ಕ್ಯಾಮೆರಾಗಳನ್ನು ಇಡಲು ಯೋಜಸಿದೆ.

ಸ್ಮಾರ್ಟ್‌ಫೋನ್‌

ಇನ್ನು ಮೂರನೇಯ ಮಾದರಿ ಎಂದರೆ ಸ್ಮಾರ್ಟ್‌ಫೋನ್‌ನ ಎರಡು ತುದಿಗಳಲ್ಲಿ ಎರಡು ಪಂಚ್ ಹೋಲ್ ಕ್ಯಾಮೆರಾಗಳನ್ನು ಇರಿಸುವಂತೆ ವಿನ್ಯಾಸ ಮಾಡಲು ಯೋಜಿಸಿದ್ದು, ಈ ಸ್ಮಾರ್ಟ್‌ಫೋನ್‌ ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ ಎಂದು ಹೇಳಲಾಗ್ತಿದೆ. ಆದರೆ ವಿವೊ ಕಂಪೆನಿಯ ಈ ಹೊಸ ಕ್ಯಾಮೆರಾ ವಿನ್ಯಾಸವು ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿರಬೇಕೇ? ಅನ್ನೊ ಪ್ರಶ್ನೆಯನ್ನ ಸಹ ಉಂಟು ಮಾಡುತ್ತದೆ.

ಪೇಟೆಂಟ್

ಸದ್ಯ ವಿವೋ ಕಂಪೆನಿಯು ಪೇಟೆಂಟ್ ಪಡೆಯಲು ಅರ್ಜಿಯನ್ನ ಸಲ್ಲಿಸಿದ್ದು ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳು ಯಾವಾಗ ಬರಲಿದೆ ಎಂದು ನಿರ್ದಿಷ್ಟವಾಗಿ ಹೇಳೊದಕ್ಕೆ ಆಗೊದಿಲ್ಲ ಆದರೆ ಫೋರ್‌ ಪಂಚ್‌ಹೋಲ್‌ ಕ್ಯಾಮೆರಾ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ ಹೇಗಿರಲಿದೆ ಅನ್ನೊ ಕುತೂಹಲ ಅಂತೂ ಇದ್ದೆ ಇರುತ್ತೆ. ಅಷ್ಟೇ ಅಲ್ಲ ಈಗಾಗ್ಲೆ ಸ್ಮಾರ್ಟ್‌ಫೋನ್‌ ವಲಯದಲ್ಲಿ ಹಲವಾರು ಮಾದರಿಯ ಸ್ಮಾರ್ಟ್‌ಫೋನ್‌ಗಳಿರೋದ್ರಿಂದ ಈ ಮಾದರಿಯ ಸ್ಮಾರ್ಟ್‌ಫೋನ್‌ಗಾಗಿ ಸಾಕಷ್ಟು ನಿರೀಕ್ಷೆ ಸಹಜವಾಗಿಯೇ ಇರಲಿದೆ.

Most Read Articles
Best Mobiles in India

Read more about:
English summary
Punch hole camera displays have become somewhat ubiquitous these days. From Samsung Galaxy Note 10 to Motorola One Vision, the trend of a punch hole camera display has been seen in some of the most interesting smartphones launched in 2019. Now, word is that Vivo intends to take this trend a step further by introducing a smartphone with multiple punch hole cameras.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more