Home
ಸುದ್ದಿಜಾಲ

ಬಹು ನಿರೀಕ್ಷಿತ ''ವಿವೋ Nex 3s 5G'' ಸ್ಮಾರ್ಟ್‌ಫೋನ್‌ ಲಾಂಚ್‌!

ವಿವೋ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಂದಲೇ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಪ್ರತಿಭಾರಿಯೂ ಹೊಸತನದ ಫೀಚರ್ಸ್‌ಗಳನ್ನ ಹೊಂದಿರುವ ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಇನ್ನು ತನ್ನ Nex 3ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸೌಂಡ್‌ ಮಾಡಿದ್ದ ವಿವೋ ಕಂಪೆನಿ ಇದೀಗ ಅದರ ಮುಂದುವರೆದ ಆವೃತ್ತಿ ವಿವೋ Nex 3s 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿ ವಿವೋ ತನ್ನ ಹೊಸ ಆವೃತ್ತಿಯ ವಿವೋ Nex 3s 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು ಕಳೆದ ವರ್ಷ ಬಿಡುಗಡೆ ಮಾಡಿದ್ದ ವಿವೋ Nex 3 ಸ್ಮಾರ್ಟ್‌ಫೋನ್‌ನ ಮುಂದುವರೆದ ಆವೃತ್ತಿಯಾಗಿದ್ದು, ವಿವೋ Nex 3s 5G ತನ್ನ ಹಿಂದಿನ ವಿನ್ಯಾಸವನ್ನು ಉಳಿಸಿಕೊಂಡಿದೆ. ಆದರೆ ಹೊಸ ಸ್ನ್ಯಾಪ್‌ಡ್ರಾಗನ್ 865 ಚಿಪ್, ಪ್ರೊಸೆಸರ್‌ ವೇಗವನ್ನು ಹೊಂದಿದೆ. ಜೊತೆಗೆ ಅಮೋಲೆಡ್‌ ವಾಟರ್‌ಫಾಲ್‌ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್‌ 1080x2256 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರುವ 6.89 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಡಿಸ್‌ಪ್ಲೇಯು HDR10+ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ವಾಟರ್‌ಫಾಲ್‌ ಡಿಸ್‌ಪ್ಲೇ ಆಗಿದೆ. ಇನ್ನು ಈ ಅಮೋಲೆಡ್‌ ವಾಟರ್‌ಫಾಲ್ ಡಿಸ್‌ಪ್ಲೇಯು 18.8: 9 ರಷ್ಟು ರಚನೆಯ ಅನುಪಾತವನ್ನು ಒಳಗೊಂಡಿದ್ದು, ಬಾಡಿ ಟು ಸ್ಕ್ರೀನ್‌ 99.6% ಅನುಪಾತವನ್ನು ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ವಿವೋ Nex 3s 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 865 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಒಎಸ್‌ ಬೆಂಬಲಿತ ಆಂಡ್ರಾಯ್ಡ್‌ ಫೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 256GB, ಹಾಗೂ 12GB RAM ಮತ್ತು 256GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿರುವ ಎರಡು ವೇರಿಯೆಂಟ್‌ ಆಯ್ಕೆಯನ್ನ ಹೊಂದಿದೆ. ಇದರಲ್ಲಿ ಮೆಮೊರಿ ಕಾರ್ಡ್‌ ಮೂಲಕ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಲು ಅವಕಾಶ ನೀಡಲಾಗಿಲ್ಲ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸ್ಪೋರ್ಟಿಂಗ್‌ ಟೆಲಿಫೋಟೊ ಲೆನ್ಸ್‌ ಹಾಗೂ ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಪಾಪ್ ಹಾಪ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಇದು ಎಲ್‌ಇಡಿ ಪ್ಲ್ಯಾಶ್‌ ಅನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ವಿವೋ Nex 3s 5G ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 44W ಫಾಸ್ಟ್‌ ಚಾರ್ಜಿಂಗ್‌ ಟೆಕ್ನಾಲಜಿಯನ್ನ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಸ್ಮಾರ್ಟ್‌ಫೋನ್‌ 5G, 4G LTE, ಬ್ಲೂಟೂತ್‌ v5.1, ವೈಫೈ, ಹಾಟ್‌ಸ್ಪಾಟ್‌, ಡ್ಯುಯೆಲ್‌ ಫ್ರಿಕ್ವೇನ್ಸಿ GPS, 3.5mm ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಆಕ್ಸಿಲೆರೋ ಮೀಟರ್‌, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ವಿವೊ Nex 3s 5G 8GB RAM + 256GB ಸಾಮರ್ಥ್ಯದ ಆಯ್ಕೆಯ ಸ್ಮಾರ್ಟ್‌ಫೋನ್‌ ಬೆಲೆ CNY 4,998 ( ಅಂದಾಜು 50,000 ರೂ.) ಆಗಿದ್ದು, 12GB RAM + 256GB ಮಾದರಿಯ ಸ್ಮಾರ್ಟ್‌ಫೋನ್‌ ಬೆಲೆ CNY 5,298 (ಸುಮಾರು 53,000 ರೂ. )ಆಗಿದೆ. ಇದು ಸ್ಕೈ ಬ್ಲೂ, ಬ್ಲ್ಯಾಕ್‌, ಆರೇಂಜ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೇ ಮಾರ್ಚ್ 14 ರಿಂದ ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ,

Best Mobiles in India

English summary
Vivo Nex 3S 5G features an HDR10+ waterfall AMOLED display with an impressive 99.6 percent screen-to-body ratio.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+