ನಾಳೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ 'ವಿವೋ ಎಸ್‌1ಪ್ರೊ' ಸ್ಮಾರ್ಟ್‌ಫೋನ್‌!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿ ವಿವೊ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಕ್ವಾಡ್-ಕ್ಯಾಮೆರಾ ಸೆಟಪ್ ಸ್ಮಾರ್ಟ್‌ಫೋನ್ ವಿವೊ ಎಸ್ 1 ಪ್ರೊ ಅನ್ನು ಇದೇ ಜನವರಿ 4 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು 48ಎಂಪಿ ಎಐ ಕ್ವಾಡ್ ಕ್ಯಾಮೆರಾ ಸೆಟಪ್ ಮತ್ತು 32 ಎಂಪಿ ಎಐ ಸೆಲ್ಫಿ ಕ್ಯಾಮೆರಾವನ್ನ ಒಳಗೊಂಡಿರುವುದು ಈ ಸ್ಮಾರ್ಟ್‌ಫೋನ್‌ನ ವಿಶೇಷತೆಯಾಗಿದೆ.

ಹೌದು

ಹೌದು, ವಿವೋ ಸ್ಮಾರ್ಟ್‌ಫೋನ್‌ ಕಂಪೆನಿ ಹೊಸ ವರ್ಷದ ಪ್ರಯುಕ್ತ ಇದೇ ಜನವರಿ 4ರಂದು ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ವಿವೊ ಎಸ್ 1 ಪ್ರೊ ಸ್ಮಾರ್ಟ್‌ಫೋನ್‌ ಅನ್ನ ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸಿದೆ. ಈ ಸ್ಮಾರ್ಟ್‌ಫೋನ್‌ ಬಿಳಿ, ಕಪ್ಪು ಮತ್ತು ನೀಲಿ ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದ್ದು ನಾಳೆಯಿಂದ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡುವ ನಿರೀಕ್ಷೆಯಿದೆ. ಲಭ್ಯ ಮಾಹಿತಿಯ ಪ್ರಕಾರ ವಿವೊ ಎಸ್ 1 ಪ್ರೊ ಸ್ಮಾರ್ಟ್‌ಫೊನ್‌ ಒಳಗೊಂಡಿರುವ ವಿಶೇಷತೆಗಳೇನು ಅನ್ನೊದನ್ನ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ .

ಡಿಸ್‌ಪ್ಲೇ

ಡಿಸ್‌ಪ್ಲೇ

ವಿವೊ ಎಸ್ 1 ಪ್ರೊ ಸ್ಮಾರ್ಟ್‌ಫೋನ್‌ ಬಿಳಿ ಮತ್ತು ನೀಲಿ ಬಣ್ಣದ ಗ್ರೇಡಿಯಂಟ್ ಫಿನಿಶ್ ಹೊಂದಿದ್ದು, 1080 x 2340ಫಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿದ್ದು 6.38-ಇಂಚಿನ ಫುಲ್‌ ಎಚ್ಡಿ + ಸೂಪರ್ ಅಮೋಲ್ಡ್‌ ಡಿಸ್‌ಪ್ಲೇ ಅನ್ನ ಹೊಂದಿರಲಿದ್ದು, ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನ ಹೊಂದಿದೆ. ಬಾಡಿ ಟು ಬಾಡಿ ಅನುಪಾತ 19.5:9 ಆಗಿದೆ. ಸ್ಕ್ರೀನ್‌ ಟು ಬಾಡಿ ರೇಶಿಯೋ 83.39 % ರಷ್ಟಿದೆ. ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಅನ್ನ ಸಹ ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್ ಒಳಗೊಂಡಿದ್ದು ಆಂಡ್ರಾಯ್ಡ್‌9ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 8GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 256GB ವರೆಗೂ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ವಿವೊ ಎಸ್ 1 ಪ್ರೊ ಕ್ವಾಡ್‌ ಕ್ಯಾಮೆರಾ ಸೆಟ್‌ ಆಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಎರಡನೇ ಕ್ಯಾಮೆರಾ 8ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮೂರು ಮತ್ತು ನಾಲ್ಕನೇ ಕ್ಯಾಮೆರಾ 2ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿದ್ದು ವೈಡ್‌ ಆಂಗಲ್‌ ಲೆನ್ಸ್‌ ಅನ್ನ ಹೊಂದಿದೆ. ಅಲ್ಲದೆ ಡಿಜಿಟಲ್‌ ಜೂಮ್‌ ಅನ್ನ ಹೊಂದಿದ್ದು ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನ ಒಳಗೊಂಡಿದೆ. ಅಲ್ಲದೆ ಉತ್ತಮ ವಿಡಿಯೋ ಚಿತ್ರೀಕರಣಕ್ಕೆ ಅನುವು ಮಾಡಿಕೊಡುತ್ತದೆ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ಈ ಸ್ಮಾರ್ಟ್‌ಫೋನ್‌ 4,500MAH ಬ್ಯಾಟರಿ ಪ್ಯಾಕ್‌ಆಪ್‌ ಅನ್ನ ಹೊಂದಿದ್ದು, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 22.5W ವೇಗದ ಚಾರ್ಜಿಂಗ್ ಬೆಂಬಲವನ್ನ ಪಡೆಯಲಿದೆ. ಇನ್ನು ವಿವೊ ಎಸ್ 1 ಪ್ರೊ ಸ್ಮಾರ್ಟ್‌ಫೋನ್‌ ವೈಫೈ, ಬ್ಲೂಟೂತ್‌ ಕನೆಕ್ಟಿವಿಟಿಯನ್ನ ಹೊಂದಿದ್ದು 4G ನೆಟ್‌ವರ್ಕ್‌ ಅನ್ನ ಬೆಂಬಲಿಸಲಿದೆ. ಸದ್ಯ ಬಿಳಿ, ಕಪ್ಪು ಮತ್ತು ನೀಲಿ ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದ್ದು ಭಾರತದಲ್ಲಿ ಇದರ ಬೆಲೆ 22,500.ರೂ ಇರಲಿದೆ ಎಂದು ಅಂದಾಜಿಸಲಾಗಿದೆ.

Most Read Articles
Best Mobiles in India

English summary
Chinese smartphone maker Vivo is all set to launch its latest quad-camera setup smartphone -- Vivo S1 Pro in India on January 4, 2020. The smartphone will be available online on Amazon India website. As teased by the company the smartphone will feature a 48MP AI quad camera setup and a 32MP AI selfie camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X