Home
ಸುದ್ದಿಜಾಲ

Vivo S30 Pro Mini ಎಂಬ ಹೊಸ ಫೋನ್ ಬಿಡುಗಡೆ ಖಚಿತ!..ಅಧಿಕೃತ ಫೀಚರ್ಸ್ ನೋಡಿ!

ಮೊಬೈಲ್ ಮಾರುಕಟ್ಟೆಯಲ್ಲಿ Vivo ತನ್ನ S-ಸರಣಿಯನ್ನು ವಿಸ್ತರಿಸಲು ಸಜ್ಜಾಗಿದ್ದು, ಕಂಪನಿಯು ಶೀಘ್ರದಲ್ಲೇ Vivo S30 Pro Mini ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ. Vivo ಕಂಪೆನಿಯ ಉತ್ಪನ್ನ ಉಪಾಧ್ಯಕ್ಷರಾದ ಔಯಾಂಗ್ ವೀಫೆಂಗ್ ಅವರು ಈ ಮಾಹಿತಿಯನ್ನು Weibo ಪೋಸ್ಟ್ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದು, ಈ ಹೊಸ Vivo S30 Pro Mini ಸ್ಮಾರ್ಟ್‌ಫೋನಿನ ಬಿಡುಗಡೆ ಸಮಯದೊಂದಿಗೆ, ಮುಂಬರುವ ಫೋನ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. ಇದು ಗ್ರಾಹಕರಲ್ಲಿ ಕುತೂಹಲವನ್ನು ಉಂಟುಮಾಡಿದೆ.

Vivo S30 Pro Mini ಸ್ಮಾರ್ಟ್‌ಫೋನಿನ ಬಿಡುಗಡೆಯ ದಿನಾಂಕದ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಔಯಾಂಗ್ ವೀಫೆಂಗ್ ಅವರು, Vivo S30 Pro Mini ಈ ತಿಂಗಳ ಅಂತ್ಯದ ವೇಳೆಗೆ ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಫೋನಿನ ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ, ಈ Vivo S30 Pro Mini ಸ್ಮಾರ್ಟ್‌ಫೋನ್ Vivo X200 Pro Mini ಯಂತೆಯೇ 6.31-ಇಂಚಿನ ಫ್ಲಾಟ್ OLED ಡಿಸ್ಪ್ಲೇಯನ್ನು ಹೊಂದಿರಲಿದೆ. ಮತ್ತು ಈ ಪರದೆಯು 1.5K ರೆಸಲ್ಯೂಶನ್ ಸಾಮರ್ಥ್ಯವನ್ನು ನೀಡಲಿದೆ ಎಂಬುದನ್ನು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ, ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ, ಈ ಸಾಧನವು ಬೃಹತ್ 6,500mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ ಎಂದು ದೃಢಪಡಿಸಲಾಗಿದೆ. ಮಿನಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿಇಂತಹ ದೊಡ್ಡ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವುದು ಗಮನಾರ್ಹ ಸಂಗತಿಯಾಗಿದೆ, ಇದು ಬಳಕೆದಾರರಿಗೆ ದೀರ್ಘಕಾಲದವರೆಗೆ ಪವರ್ ಬ್ಯಾಕಪ್ ಅನ್ನು ಖಚಿತಪಡಿಸುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಕಾಂಪ್ಯಾಕ್ಟ್ ಗಾತ್ರದಲ್ಲಿ ಅತ್ಯುತ್ತಮ ದೃಶ್ಯ ಅನುಭವವನ್ನು ದೀರ್ಘಕಾಲದವರೆಗೂ ಒದಗಿಸುವ ನಿಟ್ಟಿನಲ್ಲಿ ವಿವೋ ಕಂಪೆನಿಯು ಈ Vivo S30 Pro Mini ಫೋನನ್ನು ಪರಿಚಯಿಸುತ್ತಿದೆ ಎನ್ನಲಾಗಿದೆ.

Vivo S30 Pro Mini ಎಂಬ ಹೊಸ ಫೋನ್ ಬಿಡುಗಡೆ ಖಚಿತ!..ಅಧಿಕೃತ ಫೀಚರ್ಸ್ ನೋಡಿ!

ಕ್ಯಾಮೆರಾ ವಿಭಾಗದಲ್ಲಿಯೂ ಸಹ Vivo S30 Pro Mini ಗಮನಾರ್ಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಹಿಂದಿನ ಸೋರಿಕೆಗಳ ಪ್ರಕಾರ, ಈ ಫೋನ್ 50MP ಸೋನಿ IMX882 ಸೆನ್ಸಾರ್‌ನೊಂದಿಗೆ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ಇದರೊಂದಿಗೆ, ಮುಂಭಾಗದಲ್ಲಿ 50MP ಕ್ಯಾಮೆರಾವನ್ನು ಸಹ ನೀಡಲಾಗುವುದು, ಇದು ಉತ್ತಮ ಗುಣಮಟ್ಟದ ಸೆಲ್ಫಿ ಮತ್ತು ವೀಡಿಯೊ ಕರೆಗಳನ್ನು ಸಕ್ರಿಯಗೊಳಿಸುತ್ತದೆ. ಛಾಯಾಗ್ರಹಣದ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು, ಈ ಫೋನ್ ಫ್ಯೂಜಿ-ಶೈಲಿಯ ಇಮೇಜ್ ಫಿಲ್ಟರ್‌ಗಳನ್ನು ಬೆಂಬಲಿಸುವ ಸಾಧ್ಯತೆ ಇದೆ.

ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ, Vivo S30 Pro Mini ಸ್ನಾಪ್‌ಡ್ರಾಗನ್ 7 Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ಅಂದಾಜಿಸಲಾಗಿದೆ, ಇದು ಸುಗಮ ಮತ್ತು ದಕ್ಷ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ. ಮತ್ತೊಂದು ಸಿಹಿಸುದ್ದಿ ಏನೆಂದರೆ, Vivo S30 Pro Mini ಜುಲೈ ತಿಂಗಳಲ್ಲಿ Vivo X200 FE ಎಂಬ ಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸುತ್ತವೆ. ಭಾರತದಲ್ಲಿ Vivo X200 FE ಯ ಬೆಲೆಯು ಸುಮಾರು ರೂ. 50,000 ರಿಂದ ರೂ. 60,000 ರ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಭಾರತದಲ್ಲಿ ಬಿಡುಗಡೆಯಾಗಲಿರುವ X200 FE ಮುಂಬರುವ ಡೈಮೆನ್ಸಿಟಿ 9400e ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ, ಆದರೆ ಚೀನಾದಲ್ಲಿ ಬಿಡುಗಡೆಯಾಗುವ S30 Pro Mini ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಬಳಸುವ ನಿರೀಕ್ಷೆಯಿದೆ .ಒಟ್ಟಾರೆಯಾಗಿ, Vivo S30 Pro Mini ಕಾಂಪ್ಯಾಕ್ಟ್ ವಿನ್ಯಾಸ, ಪ್ರಬಲ ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ದಕ್ಷ ಕಾರ್ಯಕ್ಷಮತೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿದೆ. ಚೀನಾದಲ್ಲಿಇದರ ಬಿಡುಗಡೆಯ ನಂತರ, ಭಾರತೀಯ ಮಾರುಕಟ್ಟೆಯಲ್ಲಿಯೂ ಇದು ಯಾವ ರೀತಿಯ ಪ್ರತಿಕ್ರಿಯೆ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.

Best Mobiles in India

English summary
The Vivo S30 Pro Mini is set to launch by the end of May, boasting an impressive 6,500mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+