ಬಹುನಿರೀಕ್ಷಿತ Vivo S30 ಮತ್ತು Vivo S30 Pro Mini ಫೋನ್‌ಗಳು ಬಿಡುಗಡೆ!
ಚೀನಾ ಮೂಲದ ಜನಪ್ರಿಯ ಟೆಕ್ ಬ್ರ್ಯಾಂಡ್ ವಿವೋ ತನ್ನ ವಿನೂತನ Vivo S30 ಮತ್ತು Vivo S30 Pro Mini ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಅನಾವರಣಗೊಳಿಸಿದೆ. ನಿರೀಕ್ಷೆಯಂತೆಯೇ ಈ ಹೊಸ S ಸರಣಿಯ ಫೋನ್‌ಗಳು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ವಿಶೇಷವಾಗಿ ಈ ಎರಡೂ ಸ್ಮಾರ್ಟ್‌ಫೋನ್‌ಗಳು 6,500mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬಂದಿವೆ ಮತ್ತು ಸುಮಾರು ₹32,000 ರೂ. ಆರಂಭಿಕ ಬೆಲೆಯಲ್ಲಿ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿವೆ. ಹಾಗಾದರೆ, ಹೊಸ Vivo S30 ಮತ್ತು Vivo S30 Pro Mini ಸ್ಮಾರ್ಟ್‌ಫೋನ್‌ಗಳು ಹೇಗಿವೆ ಮತ್ತು ಬೆಲೆಗಳು ಎಷ್ಟು ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಬೆಲೆ ಮತ್ತು ಲಭ್ಯತೆ
Vivo S30 ಸ್ಮಾರ್ಟ್‌ಫೋನ್‌ನ 12GB RAM + 256GB ಸ್ಟೋರೇಜ್ ಮಾದರಿಯು CNY 2,699 (ಸುಮಾರು ₹32,000) ಬೆಲೆಯನ್ನು ಹೊಂದಿದೆ. ಇದರ 12GB + 512GB ಮತ್ತು 16GB + 512GB ಮಾದರಿಗಳು ಕ್ರಮವಾಗಿ CNY 2,999 (ಸುಮಾರು ₹35,000) ಮತ್ತು CNY 3,299 (ಸುಮಾರು ₹38,000) ಬೆಲೆಗಳಲ್ಲಿ ಲಭ್ಯವಿವೆ. ಇದು ಕೋಕೋ ಬ್ಲಾಕ್, ಲೆಮನ್ ಯೆಲ್ಲೋ, ಮಿಂಟ್ ಗ್ರೀನ್ ಮತ್ತು ಪೀಚ್ ಪಿಂಕ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಇತ್ತ Vivo S30 Pro Miniಬೆಲೆಯು 12GB + 256GB ಮಾದರಿಗೆ CNY 3,499 ರಿಂದ (ಸುಮಾರು ₹41,000) ಪ್ರಾರಂಭವಾಗುತ್ತದೆ. ಇದರ 12GB + 512GB ಮತ್ತು 16GB + 512GB ಆವೃತ್ತಿಗಳು ಕ್ರಮವಾಗಿ CNY 3,799 (ಸುಮಾರು ₹45,000) ಮತ್ತು CNY 3,999 (ಸುಮಾರು ₹47,000) ಬೆಲೆಗಳಲ್ಲಿ ಲಭ್ಯವಿದೆ. ಇದು ಕೂಲ್ ಬೆರ್ರಿ ಪೌಡರ್, ಕೋಕೋ ಬ್ಲಾಕ್, ಮಿಂಟ್ ಗ್ರೀನ್ ಮತ್ತು ಲೆಮನ್ ಯೆಲ್ಲೋ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
Vivo S30 ವೈಶಿಷ್ಟ್ಯಗಳು
Vivo S30 ಸ್ಮಾರ್ಟ್‌ಪೋನ್ ಡ್ಯುಯಲ್-ಸಿಮ್ ಬೆಂಬಲದೊಂದಿಗೆ Android 15-ಆಧಾರಿತ OriginOS 5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.67-ಇಂಚಿನ 1.5K (1,260x2,800 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್, 5000nits ಪೀಕ್ ಬ್ರೈಟ್‌ನೆಸ್ ಮತ್ತು 94.10% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಈ ಫೋನ್ ಆಕ್ಟಾ-ಕೋರ್ 4nm ಸ್ನಾಪ್‌ಡ್ರಾಗನ್ 7 Gen 4 SoC ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12GB RAM ಮತ್ತು 512GB ವರೆಗಿನ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, Vivo S30 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಹೊಂದಿರುವ 50-ಮೆಗಾಪಿಕ್ಸೆಲ್ ಸೋನಿ LYT700V 1/1.56-ಇಂಚಿನ ಪ್ರೈಮರಿ ಸೆನ್ಸರ್, OIS ಹೊಂದಿರುವ 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, ಮತ್ತು 106-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿರುವ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಸೇರಿವೆ. ಸೆಲ್ಫಿಗಾಗಿ, ಇದು 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೋಲ್-ಪಂಚ್ ಡಿಸ್‌ಪ್ಲೇ ಕಟೌಟ್‌ನಲ್ಲಿ ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ 5G, ಬ್ಲೂಟೂತ್ 5.4, GPS, Wi-Fi, OTG ಮತ್ತು USB Type-C ಪೋರ್ಟ್ ಸೇರಿವೆ. ಬಯೋಮೆಟ್ರಿಕ್ದೃಢೀಕರಣಕ್ಕಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವೂ ಇದೆ.

Vivo S30 Pro Mini ವೈಶಿಷ್ಟ್ಯಗಳು
ಇತ್ತ Vivo S30 Pro Mini ಕೂಡ Vivo S30 ನಂತೆಯೇ ಸಿಮ್, ಆಪರೇಟಿಂಗ್ ಸಿಸ್ಟಮ್, RAM ಮತ್ತು ಸ್ಟೋರೇಜ್ ವಿಶೇಷಣಗಳನ್ನು ಹೊಂದಿದೆ. ಇದು 6.31-ಇಂಚಿನ 1.5K (1,260x2,800 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು 120Hz ರಿಫ್ರೆಶ್ ರೇಟ್ ಮತ್ತು 5000 nits ಪೀಕ್ ಬ್ರೈಟ್‌ನೆಸ್‌ನೊಂದಿಗೆ ಹೊಂದಿದೆ. ಈ ಕಾಂಪ್ಯಾಕ್ಟ್ ಫೋನ್ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.ಕ್ಯಾಮೆರಾ ವಿಭಾಗದಲ್ಲಿ, Vivo S30 Pro Mini 1/1.56-ಇಂಚಿನ ಸೋನಿ IMX921 ಸೆನ್ಸರ್ ಹೊಂದಿರುವ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68+IP69 ರೇಟಿಂಗ್‌ಗಳನ್ನು ಹೊಂದಿದೆ. Vivo S30 Pro Mini ಯ ಸಂವೇದಕಗಳು ಮತ್ತು ಸಂಪರ್ಕ ಆಯ್ಕೆಗಳು ಸ್ಟ್ಯಾಂಡರ್ಡ್ Vivo S30 ಮಾದರಿಯನ್ನು ಹೋಲುತ್ತವೆ. ಇದರ ಅಳತೆ 150.83x71.76x7.99mm ಮತ್ತು ತೂಕ 186 ಗ್ರಾಂಇದೆ.


Click it and Unblock the Notifications








