ಭಾರತಕ್ಕೆ ಎಂಟ್ರಿ ನೀಡಲು ವಿವೋ T2 ಪ್ರೊ ತಯಾರಿ.. ಏನೆಲ್ಲಾ ನಿರೀಕ್ಷಿಸಬಹುದು?
ಮೊಬೈಲ್ ಮಾರುಕಟ್ಟೆಯಲ್ಲಿ ವಿವೋ ಕಂಪೆನಿಯ ಫೋನ್‌ಗಳಿಗೆ ಎಲ್ಲಿಲ್ಲದ ವ್ಯಾಮೋಹವಿದೆ. ಕ್ಯಾಮೆರಾ ಕೇಂದ್ರಿತ ಫೀಚರ್ಸ್‌ಗಳೇ ವಿವೋ ಸ್ಮಾರ್ಟ್‌ಫೋನ್‌ಗಳ ಡಿಮ್ಯಾಂಡ್ ಹೆಚ್ಚಾಗುವಂತೆ ಮಾಡಿವೆ. ಇದೀಗ ಮುಂದುವರೆದು ವಿವೋ ಕಂಪೆನಿ ಭಾರತದಲ್ಲಿ ಹೊಸ ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಪರಿಚಯಿಸಲು ಮುಂದಾಗಿದೆ.
ಹೌದು, ವಿವೋ ಕಂಪೆನಿ ವಿವೋ T2 ಲೈನ್‌ಆಫ್‌ನಲ್ಲಿ ಹೊಸದಾಗಿ ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಪರಿಚಯಿಸುವುದಾಗಿ ಹೇಳಿದೆ. ಈ ಸ್ಮಾರ್ಟ್‌ಫೋನ್ ಇದೇ ತಿಂಗಳ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಫೀಚರ್ಸ್ ಏನಿರಲಿದೆ ಅನ್ನೊದು ಇದೀಗ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ವಿವೋ T2 ಪ್ರೊ ಸ್ಮಾರ್ಟ್‌ಫೋನ್ 6.44 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿರಲಿದೆ. ಇನ್ನು ಡಿಸ್‌ಪ್ಲೇ 1200Hz ಟಚ್ ಸ್ಯಾಪ್ಲಿಂಗ್ ರೇಟ್ ಬೆಂಬಲಿಸಲಿದೆ. ಇದು 120Hz ರಿಫ್ರೆಶ್ ರೇಟ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 3D ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ.
ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಪ್ರೊಸೆಸರ್
ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಬರುವ ನಿರೀಕ್ಷೆಯಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯ ವಿಸ್ತರಣೆಗೆ ಅವಕಾಶ ನೀಡಲಾಗುವುದು ಎನ್ನಲಾಗಿದೆ.
ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಕ್ಯಾಮೆರಾ ಸೆಟ್‌ಅಪ್
ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.
ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಇತರೆ
ವಿವೋ T2 ಪ್ರೊ ಸ್ಮಾರ್ಟ್‌ಫೋನ್ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಇದು 67W ಫ್ಲ್ಯಾಶ್ ಚಾರ್ಜ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್, ಹಾಟ್‌ಸ್ಪಾಟ್ ಅನ್ನು ಹೊಂದಿರಲಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೋ ಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಹೊಂದಿರುವ ನಿರೀಕ್ಷೆಯಿದೆ.
ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ
ವಿವೋ T2 ಪ್ರೊ ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಲಿದೆ ಅನ್ನೊದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಇದೇ ತಿಂಗಳ ಅಂತ್ಯದಲ್ಲಿ ಎಂಟ್ರಿ ನೀಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಕಲರ್ ಆಯ್ಕೆಗಳಲ್ಲಿ ಬರಲಿದೆ ಎಂಬುದರ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ.
ಇದಲ್ಲದೆ ವಿವೋ ಕಂಪೆನಿ ಇತ್ತೀಚಿಗೆ ವಿವೋ V29e ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 6.73 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 2400x1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದೆ. ಇದಲ್ಲದೆ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ ಓಎಸ್ ಅನ್ನು ರನ್ ಮಾಡಲಿದೆ.


Click it and Unblock the Notifications








