Home
ಸುದ್ದಿಜಾಲ

ಇಂದು Vivo T3 Pro ಸೇಲ್: ಮೊದಲ ದಿನ ಖರೀದಿಸಿದ್ರೆ 7,500 ಆಫರ್‌!

ವಿವೋ (Vivo) ಕಂಪನಿಯು ಇತ್ತೀಚೆಗೆ ಹೊಸ ವಿವೋ T3 ಪ್ರೊ 5G (Vivo T3 Pro 5G) ಫೋನನ್ನು ಬಿಡುಗಡೆ ಮಾಡಿದೆ. ಬಜೆಟ್‌ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಗ್ರಾಹಕರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿದೆ. ಅಂದಹಾಗೆ, ಈ ಮೊಬೈಲ್ ಇಂದು (ಸೆಪ್ಟೆಂಬರ್ 3) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಪ್ರಾರಂಭಿಸಲಿದೆ. ಕಂಪನಿಯು ಈ ಫೋನಿನ ಖರೀದಿಸುವ ಗ್ರಾಹಕರಿಗೆ ಭರ್ಜರಿ ಬ್ಯಾಂಕ್ ಆಫರ್‌ಗಳನ್ನು ಘೋಷಿಸಿದೆ.

ವಿವೋ T3 ಪ್ರೊ 5G ಫೋನ್‌ ಸ್ಯಾಂಡ್‌ಸ್ಟೋನ್‌ ಆರೇಂಜ್‌ ಲೆದರ್‌ ಹಾಗೂ ಎಮರಾಲ್ಡ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 6.77 ಇಂಚಿನ AMOLED ಡಿಸ್ಲ್ಪೇ, 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್‌ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 16 ಮೆಗಾಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಇದೆ. ಬನ್ನಿ, ಈ ಫೋನಿನ ಬೆಲೆ, ರಿಯಾಯಿತಿ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಇಂದು Vivo T3 Pro ಸೇಲ್: ಮೊದಲ ದಿನ ಖರೀದಿಸಿದ್ರೆ 7,500 ಆಫರ್‌!

ವಿವೋ T3 ಪ್ರೊ 5G ಫೋನಿನ ಬೆಲೆ ಮತ್ತು ಆಫರ್

8GB ಮತ್ತು 128GB = 24,999 ರೂ.
ಡಿಸ್ಕೌಂಟ್ ಬೆಲೆ = 21,999 ರೂ.

8GB ಮತ್ತು 128GB = 26,999 ರೂ.
ಡಿಸ್ಕೌಂಟ್ ಬೆಲೆ = 23,999 ರೂ.

ವಿವೋ T3 ಪ್ರೊ 5G ಫೋನ್ ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಎರಡೂ ರೂಪಾಂತರಗಳ ಮೊದಲ ಮಾರಾಟವು ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗುತ್ತಿದೆ. ಮೊದಲ ದಿನವೇ, ನೀವು ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಯ ಮೇಲೆ 3,000 ರೂ. ರಿಯಾಯಿತಿಯನ್ನು ಪಡೆಯಬಹುದು.

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಪಾವತಿ ಮೂಲಕ ಈ ಫೋನ್‌ ಖರೀದಿಸಿದರೆ, ನೀವು ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಾಭವನ್ನು ಪಡೆಯಬಹುದು. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ, ನೀವು 3,000 ರೂ. ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ, 4,500 ರೂ.ಗಳ ಮಾಸಿಕ ಇಎಂಐನಲ್ಲಿ ಈ ಫೋನನ್ನು ಖರೀದಿಸಬಹುದು.

ವಿವೋ T3 ಪ್ರೊ 5G ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ: ವಿವೋ T3 ಪ್ರೊ 5G ಮೊಬೈಲ್ 6.67 ಇಂಚಿನ 3D ಕರ್ವ್ಡ್‌ ಅಮೋಲೆಡ್‌ ಡಿಸ್ಲ್ಪೇಯನ್ನು ಹೊಂದಿದೆ. ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಜೊತೆಗೆ, 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಸೌಲಭ್ಯ ಸಹ ಒಳಗೊಂಡಿದೆ.

ಪ್ರೊಸೆಸರ್: ವಿವೋ T3 ಪ್ರೊ 5G ಫೋನ್‌ ಸ್ನಾಪ್‌ಡ್ರಾಗನ್ 7 ಜೆನ್‌ 3 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಸಹ ಪಡೆದಿದೆ. ಇದು Adreno 720 ಚಿಪ್‌ಸೆಟ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಇದು 8GB RAM ಮತ್ತು 128GB ಸ್ಟೋರೇಜ್, 8GB ಮತ್ತು 256GB ಇಂಟರ್ನಲ್ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ: ವಿವೋ T3 ಪ್ರೊ 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಇದು 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹೊಂದಿದೆ. ಈ ಫೋನಿನ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ಇದೆ.

ಬ್ಯಾಟರಿ: ವಿವೋ T3 ಪ್ರೊ 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್‌ ಮಾಡಲು 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇದೆ. ಕೇವಲ 21 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಆಗುತ್ತದೆ. ಇದು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

ಇತರೆ ವೈಶಿಷ್ಟ್ಯಗಳು: ಈ ಫೋನ್ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್ 4G VoLTE, ವೈ-ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಇನ್-ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Vivo T3 Pro 5G goes on first sale in India Today: Check Offer Price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+