Vivo ಕಂಪನಿಯ ಮತ್ತೊಂದು ಬಜೆಟ್ 5G ಫೋನ್ ಬಿಡುಗಡೆಗೆ ತಯಾರಾಗಿದೆ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ಮತ್ತೊಂದು ಬಜೆಟ್ ಬೆಲೆಯ 5G ಸ್ಮಾರ್ಟ್‌ಫೋನಿನ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚಿಗಷ್ಟೇ ಭಾರತದ ಮಾರುಕಟ್ಟೆಗೆ Vivo T4x ಎಂಬ ಸ್ಮಾರ್ಟ್‌ಫೋನನ್ನು 13,999 ರೂ. ಬೆಲೆಯಲ್ಲಿ ಪರಿಚಯಿಸಿದ್ದ ಕಂಪೆನಿಯು, ಈ Vivo T4x ಸ್ಮಾರ್ಟ್‌ಫೋನಿಗೆ ಹೋಲಿಸಿದರೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ Vivo T4 5G ಸ್ಮಾರ್ಟ್‌ಫೋನನ್ನು ಪರಿಚಯಿಸಲು ಮುಂದಾಗಿದೆ. ಈ ಹೊಸ ಮಾದರಿಯ ಸ್ಮಾರ್ಟ್‌ಫೋನ್ ಸಂಪೂರ್ಣ 5G ಬ್ಯಾಂಡ್‌ಗಳ ಬೆಂಬಲದ ಜೊತೆಗೆ ಅತ್ಯಂತ ದೊಡ್ಡ ಬ್ಯಾಟರಿ ಮತ್ತು ಆಕರ್ಷಕ ಕ್ವಾಡ್-ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
Vivo T4 5G ಸ್ಮಾರ್ಟ್‌ಫೋನಿನ ಫೀಚರ್ಸ್ ಮತ್ತು ಬೆಲೆ (ನಿರೀಕ್ಷಿಸಲಾಗಿದೆ)
ಪ್ರಮುಖ ಮಾಧ್ಯಮ ವರದಿಗಳ ಪ್ರಕಾರ, ಮುಂಬರುವ Vivo T4 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದರ AMOLED ಡಿಸ್ಪ್ಲೇ 5,000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿರುವ ನಿರೀಕ್ಷೆಯಿದೆ. ಕ್ಯಾಮೆರಾ ವಿಭಾಗದಲ್ಲಿ, ಡ್ಯುಯಲ್ ಸೆನ್ಸರ್‌ಗಳು ಮತ್ತು ರಿಂಗ್ LED ಫ್ಲ್ಯಾಷ್‌ನೊಂದಿಗೆ ವೃತ್ತಾಕಾರದ ಕ್ಯಾಮೆರಾ ಹೊಂದಿರಲಿರುವ ಈ ಸ್ಮಾರ್ಟ್‌ಫೋನ್, 90W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ, ಇದರಿಂದಾಗಿ ಇದು ತನ್ನ ವಿಭಾಗದಲ್ಲಿ ಉತ್ತಮ ಬ್ಯಾಟರಿ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ ಎನ್ನಲಾಗಿದೆ.

ಇತ್ತೀಚಿಗಷ್ಟೆ ಲೀಕ್ ಆಗಿರುವ ಎಮರಾಲ್ಡ್ ಬ್ಲೇಜ್ ರೂಪಾಂತರದ Vivo T4 5G ಸ್ಮಾರ್ಟ್‌ಫೋನಿನ ಕ್ಯಾಮೆರಾ ಸುತ್ತ ಚಿನ್ನದ ಅಲಂಕಾರವನ್ನು ಒಳಗೊಂಡಿತ್ತು. ಇದರಿಂದ ಈ ಸ್ಮಾರ್ಟ್‌ಫೋನ್ ವಿನ್ಯಾಸ ಅತ್ಯುತ್ತಮವಾಗಿರಲಿದೆ ಎಂದು ಹೇಳಬಹುದು. ಇನ್ನು ಈ Vivo T4 5G ಸ್ಮಾರ್ಟ್‌ಫೋನ್ ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಕಳೆದ ವರ್ಷದ Vivo T3 ಬೆಲೆ 19,999 ರೂ. ಆಗಿದ್ದರಿಂದ, ಹೊಸ Vivo T4 5G ಬೆಲೆ 20,000 ರೂ.ಗಳಿಗಿಂತ ಕಡಿಮೆ ಇರುತ್ತದೆ ಎಂದು ನಾವು ನಿರೀಕ್ಷಿಬಹುದು. ಇದರಿಂದ Realme P3 5G ನಂತಹ ಸ್ಮಾರ್ಟ್‌ಫೋನಿಗೆ ಇದು ಸ್ಪರ್ಧಿಯಾಗಬಹುದು
ಈ ಮೇಲಿನ ವೈಶಿಷ್ಟ್ಯಗಳೊಂದಿಗೆ, Vivo ಕಂಪೆನಿಯು ಭಾರತದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಆಯ್ಕೆಯನ್ನು ಒದಗಿಸಲು ಉದ್ದೇಶಿಸಿದೆ ಎನ್ನಬಹುದು. ಗ್ರಾಹಕರು Vivo T4 5G ಸ್ಮಾರ್ಟ್‌ಫೋನಿನ ಬಿಡುಗಡೆಗಾಗಿ ಕಾಯುತ್ತಿರುವಾಗ, ಈ ಹಿಂದಿನ ಮಾದರಿಗಳಿಗಿಂತ ಉತ್ತಮ ಕಾರ್ಯಕ್ಷಮತೆ ಮತ್ತು ವಿನ್ಯಾಸವನ್ನು ನಿರೀಕ್ಷಿಸುತ್ತಿದ್ದಾರೆ. Vivo T4 5G ಕುರಿತಾದ ಎಲ್ಲಾ ಇತ್ತೀಚಿನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಸಂಪರ್ಕದಲ್ಲಿರಿ. ಮತ್ತು ಈ ಮುಂದೆ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ Vivo T4x ಸ್ಮಾರ್ಟ್‌ಫೋನಿನ ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ಸಹ ನೋಡಿ.
Vivo T4x ಸ್ಮಾರ್ಟ್‌ಫೋನಿನ ಫೀಚರ್ಸ್
Vivo T4x ಫೋನ್ 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ, ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 2408 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ, 120Hz ರಿಫ್ರೆಶ್ ದರ ಮತ್ತು 1050 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಒದಗಿಸುತ್ತದೆ. ಈ ಮೊಬೈಲ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಆಕ್ಟಾಕೋರ್ ಪ್ರೊಸೆಸರ್ ಅನ್ನು ಬಳಸುತ್ತದೆ ಮತ್ತು ಆಂಡ್ರಾಯ್ಡ್ 15 ಆಧಾರಿತ Funtouch ಓಎಸ್ 15 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನ್ 50 ಮೆಗಾಪಿಕ್ಸೆಲ್ ಎಐ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ, ಜೊತೆಗೆ ಎಲ್ಇಡಿ ಫ್ಲ್ಯಾಷ್ ಸಹ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. 6,500mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಈ ಫೋನ್ 44W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಈ Vivo T4x ಫೋನ್ ಒಟ್ಟು 8 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ, ಕನೆಕ್ಟಿವಿಟಿ ಆಯ್ಕೆಗಳಲ್ಲಿ, OTG, ಬ್ಲೂಟೂತ್ 5.4 ಮತ್ತು ವೈ-ಫೈ 6 ಬೆಂಬಲವಿದೆ. ಈ ಫೋನಿನಲ್ಲಿಐಆರ್ ಬ್ಲಾಸ್ಟರ್ ಕೂಡ ಇದೆ, ಇದು ಫೋನ್ ಅನ್ನು ಟಿವಿ ರಿಮೋಟ್‌ಗಾಗಿ ಬಳಸಲು ಅನುಕೂಲವಾಗಿಸುತ್ತದೆ. ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಹೊಂದಿದೆ.


Click it and Unblock the Notifications








