ಇಂದು Vivo T4 5G ಸೇಲ್; ಖರೀದಿಗೆ ಕ್ಯೂ ಖಚಿತ.. ಭರ್ಜರಿ ಆಫರ್ ಘೋಷಣೆ.. ಏನುಂಟು, ಏನಿಲ್ಲ?
ವಿವೋ ಮೊಬೈಲ್ ಪ್ರಿಯರಿಗೆ ಸಂತಸದ ಸುದ್ದಿ ಇದು. ಇತ್ತೀಚೆಗೆ ಬಿಡುಗಡೆಯಾಗಿದ್ದ 5G ಮೊಬೈಲ್ ಇಂದು ಅಧಿಕೃತವಾಗಿ ಗ್ರಾಹಕರ ಕೈ ಸೇರಲಿದೆ. ಹೌದು, ಬಹುನಿರೀಕ್ಷಿತ ವಿವೋ T4 5G (Vivo T4 5G) ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿತ್ತು. ಈ ಸ್ಮಾರ್ಟ್‌ಫೋನ್ ಇಂದು (ಏಪ್ರಿಲ್ 29) ತನ್ನ ಮೊದಲ ಮಾರಾಟವನ್ನು ಶುರು ಮಾಡಲಿದೆ. ನೀವು, ಮೊದಲ ದಿನವೇ ಈ ಮೊಬೈಲ್ ಖರೀದಿಸಿದರೆ ಬೊಂಬಾಟ್ ಆಫರ್ ನಿಮ್ಮದಾಗಿಸಿಕೊಳ್ಳಬಹುದು. ಬನ್ನಿ, ತಡ ಮಾಡದೇ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ವಿವೋ T4 5G ಫೋನನ್ನು ಬಜೆಟ್ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಪ್ರೀಮಿಯಂ ವಿನ್ಯಾಸ, ಶಕ್ತಿಶಾಲಿ ಬ್ಯಾಟರಿ ಮತ್ತು ಸುಗಮ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 7300mAh ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಅಳವಡಿಸಲಾಗಿದೆ. ಇದು 6.77 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದಲ್ಲದೆ 12GB RAM + 256GB ಸ್ಟೋರೇಜ್ ಒಳಗೊಂಡಿದೆ. ಈ ಫೋನಿನ ಆಫರ್ ಮತ್ತು ಇನ್ನಿತರ ವಿಶೇಷತೆಗಳು ಈ ಕೆಳಗಿನಂತಿವೆ.

ವಿವೋ T4 5G: ಟಾಪ್ 5 ಫೀಚರ್ಸ್
ವಿವೋ T4 5G ಡಿಸ್ಪ್ಲೇ
ವಿವೋ T4 5G ಫೋನ್ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,392 × 1,080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ, 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಇನ್ಫ್ರಾರೆಡ್ ಸೆನ್ಸರ್ ತಂತ್ರಜ್ಞಾನ ಸಹ ಹೊಂದಿದೆ.
ವಿವೋ T4 5G ಪ್ರೊಸೆಸರ್
ವಿವೋ T4 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿದೆ. ಇದು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾದ ಆಕ್ಟಾ-ಕೋರ್ ಪ್ರೊಸೆಸರ್ ಆಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಕೆಲಸ ಮಾಡುತ್ತದೆ.
ವಿವೋ T4 5G ಕ್ಯಾಮೆರಾ
ವಿವೋ T4 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ವಿವೋ T4 5G ಬ್ಯಾಟರಿ
ವಿವೋ T4 5G ಫೋನ್ 7300mAh ದೊಡ್ಡ ಬ್ಯಾಟರಿ ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ. ಈ ಫೋನ್ 8GB RAM ಮತ್ತು 12GB RAM ಹೊಂದಿದೆ. ಇದಕ್ಕೆ ಪೂರಕವಾಗಿ 128GB ಮತ್ತು 256GB ಸ್ಟೋರೇಜ್ ಲಭ್ಯವಿದೆ.
ಇತರೆ ಫೀಚರ್ಸ್
ವಿವೋ T4 5G ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗೆ IP65 ರೇಟಿಂಗ್ ಪಡೆದಿದೆ. ಇದರೊಂದಿಗೆ ಯುಎಸ್‌ಬಿ ಟೈಪ್ ಸಿ ಆಡಿಯೋ, ಬಾಟಮ್ ಪೋರ್ಟೆಡ್ ಸ್ಪೀಕರ್ ಸಹ ಲಭ್ಯವಿದೆ. ಈ ಮೊಬೈಲ್ 5G SA/NSA, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.

ವಿವೋ T4 5G ಬೆಲೆ
8GB RAM + 128GB ಸ್ಟೋರೇಜ್ = 21,999 ರೂ.
ರಿಯಾಯಿತಿ ಬೆಲೆ = 19,999 ರೂ.
12GB RAM + 256GB ಸ್ಟೋರೇಜ್ = 25,999 ರೂ.
ರಿಯಾಯಿತಿ ಬೆಲೆ = 23,999 ರೂ.
ವಿವೋ T4 5G ಫೋನ್ ಎಮರಾಲ್ಡ್ ಬ್ಲೇಜ್ ಮತ್ತು ಫ್ಯಾಂಟಮ್ ಗ್ರೇ ಬಣ್ಣಗಳಲ್ಲಿ ಮಾರಾಟವಾಗಿಲಿದೆ. ಆರಂಭಿಕ ಮಾರಾಟದಲ್ಲಿ ಈ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಕಂಪನಿಯು, 2000 ರೂ.ಗಳ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತದೆ. ನೀವು ಇಂದು ಮಧ್ಯಾಹ್ನ 12 ಗಂಟೆಯಿಂದ (ಏಪ್ರಿಲ್ 29) ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಈ ಫೋನನ್ನು ಖರೀದಿಸಬಹುದು ಅಥವಾ ಬುಕ್ ಮಾಡಬಹುದು.


Click it and Unblock the Notifications








