Home
ಸುದ್ದಿಜಾಲ

ವಿವೋ ಟಿ4 ಅಲ್ಟ್ರಾ: ಇಂದಿನಿಂದ ಖರೀದಿಗೆ ಲಭ್ಯ, ಭರ್ಜರಿ ಬ್ಯಾಂಕ್ ಆಫರ್!

ಕಳೆದ ವಾರವಷ್ಟೇ (ಜೂನ್ 11) ಭಾರತದ ಮೊಬೈಲ್ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಪರಿಚಯಗೊಂಡಿರುವ ಬಹುನಿರೀಕ್ಷಿತ ವಿವೋ ಟಿ4 ಅಲ್ಟ್ರಾ ಸ್ಮಾರ್ಟ್‌ಫೋನ್ ಇಂದು ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ಇಂದು (ಜೂನ್ 18) ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್, Vivo ಇಂಡಿಯಾ ಇ-ಸ್ಟೋರ್ ಮತ್ತು ಆಯ್ದ ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ವಿವೋ ಟಿ4 ಅಲ್ಟ್ರಾ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಬ್ಯಾಂಕ್ ಕೊಡುಗೆಗಳ ನಂತರ 34,999 ರೂ. ಆರಂಭಿಕ ಬೆಲೆಯಲ್ಲಿ ಈ ಫ್ಲಾಗ್‌ಶಿಪ್ ಫೋನ್ ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಗಾದರೆ, ಹೊಸ ವಿವೋ ಟಿ4 ಅಲ್ಟ್ರಾ ಸ್ಮಾರ್ಟ್‌ಫೋನ್ ಹೇಗಿದೆ?, ಸಂಪೂರ್ಣ ಬೆಲೆಗಳು ಎಷ್ಟು ಎಂಬ ಎಲ್ಲಾ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಭಾರತದಲ್ಲಿ ವಿವೋ ಟಿ4 ಅಲ್ಟ್ರಾ ಬೆಲೆ, ಲಭ್ಯತೆ
ಭಾರತದಲ್ಲಿ ವಿವೋ ಟಿ4 ಅಲ್ಟ್ರಾ ಫೋನ್ ಬೆಲೆ 8GB + 256GB ಆಯ್ಕೆಗೆ ರೂ. 37,999 ರಿಂದ ಪ್ರಾರಂಭವಾಗುತ್ತದೆ ಮತ್ತು ಮೀಟಿಯರ್ ಗ್ರೇ ಮತ್ತು ಫೀನಿಕ್ಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನ್ ಖರೀದಿಸುವ ಗ್ರಾಹಕರುವ SBI, HDFC ಬ್ಯಾಂಕ್ ಮತ್ತು Axis ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ತಕ್ಷಣ 3,000 ರೂ. ರಿಯಾಯಿತಿಯನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಈ ಬ್ಯಾಂಕ್‌ಗಳ ಕಾರ್ಡ್‌ಗಳನ್ನು ಹೊಂದಿರದ ಗ್ರಾಹಕರು T4 Ultra ನಲ್ಲಿ 5,000 ರೂ.ಗಳವರೆಗೆ ವಿನಿಮಯ ಬೋನಸ್ ಅನ್ನು ಆಯ್ಕೆ ಮಾಡಬಹುದು ಎಂದು ಕಂಪೆನಿಯು ತಿಳಿಸಿದೆ. ಬ್ಯಾಂಕ್ ಕೊಡುಗೆಯ ಹೊರತಾಗಿ, ಈ ವಿವೋ ಟಿ4 ಅಲ್ಟ್ರಾ ಫೋನ್ ಬೆಲೆಗಳು ಈ ಕೆಳಗಿನಂತಿವೆ.

8GB + 256GB ರೂಪಾಂತರ: ₹37,999
12GB + 256GB ರೂಪಾಂತರ: ₹39,999
12GB + 512GB ರೂಪಾಂತರ: ₹41,999

ವಿವೋ ಟಿ4 ಅಲ್ಟ್ರಾ ವೈಶಿಷ್ಟ್ಯಗಳು
ಹೊಸ ವಿವೋ ಟಿ4 ಅಲ್ಟ್ರಾ ಸ್ಮಾರ್ಟ್‌ಫೋನ್ 6.67-ಇಂಚಿನ 1.5ಕೆ (1,260x2,800 ಪಿಕ್ಸೆಲ್‌ಗಳು) ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ದರ, 300Hz ಟಚ್ ಸ್ಯಾಂಪ್ಲಿಂಗ್ ದರ, 5,000 nits ಸ್ಥಳೀಯ ಗರಿಷ್ಠ ಹೊಳಪು, ಮತ್ತು 2,160Hz PWM ಡಿಮ್ಮಿಂಗ್ ದರವನ್ನು ಒದಗಿಸುತ್ತದೆ. ಪರದೆಯು HDR10+ ಅನ್ನು ಬೆಂಬಲಿಸುತ್ತದೆ ಮತ್ತು SGS ಕಡಿಮೆ ನೀಲಿ ಬೆಳಕಿನ ಪ್ರಮಾಣೀಕರಣವನ್ನು ಹೊಂದಿದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ, ಈ Vivo T4 ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇದು 4nm ಆಕ್ಟಾ-ಕೋರ್ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ 12GB ವರೆಗೆ LPDDR5 RAM ಮತ್ತು 512GB ವರೆಗೆ UFS 3.1 ಆನ್‌ಬೋರ್ಡ್ ಸ್ಟೋರೇಜ್ ಲಭ್ಯವಿದೆ. ಇದು Android 15 ಆಧಾರಿತ FuntouchOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.

ವಿವೋ ಟಿ4 ಅಲ್ಟ್ರಾ: ಇಂದಿನಿಂದ ಖರೀದಿಗೆ ಲಭ್ಯ, ಭರ್ಜರಿ ಬ್ಯಾಂಕ್ ಆಫರ್!

ಕ್ಯಾಮೆರಾ ವಿಭಾಗದಲ್ಲಿ, ವಿವೋ ಟಿ4 ಅಲ್ಟ್ರಾ ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದ್ದು, 50-ಮೆಗಾಪಿಕ್ಸೆಲ್ ಸೋನಿ IMX921 ಮುಖ್ಯ ಸಂವೇದಕವು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು f/1.88 ಅಪಾರ್ಚರ್ ಅನ್ನು ಹೊಂದಿದೆ. ಇದರಲ್ಲಿ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್-ಆಂಗಲ್ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಸೋನಿ IMX882 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, 3x ಆಪ್ಟಿಕಲ್ ಜೂಮ್, 10x ಟೆಲಿಫೋಟೋ ಮ್ಯಾಕ್ರೋ ಜೂಮ್, ಮತ್ತು 100x ಡಿಜಿಟಲ್ ಜೂಮ್ ಅನ್ನು ಒಳಗೊಂಡಿದೆ. ಎರಡನೆಯ ಕ್ಯಾಮೆರಾ OIS ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಅನ್ನು ಬೆಂಬಲಿಸುತ್ತದೆ. ಸೆಲ್ಫಿ ಕ್ಯಾಮೆರಾ ಮತ್ತು ವೀಡಿಯೊ ಕರೆಗಳಿಗೆ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ.

ವಿವೋ ಟಿ4 ಅಲ್ಟ್ರಾ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿತ 5,500mAh ಬ್ಯಾಟರಿಯೊಂದಿಗೆ ಬರುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್ ನ್ಯಾನೋ ಸಿಮ್, 5G, 4G, ಬ್ಲೂಟೂತ್ 5.4, Wi-Fi, OTG, NavIC ಮತ್ತು GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಹ್ಯಾಂಡ್‌ಸೆಟ್ Google ನ ಸರ್ಕಲ್ ಟು ಸರ್ಚ್, AI ನೋಟ್ ಅಸಿಸ್ಟ್, AI ಎರೇಸ್, AI ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್ ಮತ್ತು AI ಕಾಲ್ ಟ್ರಾನ್ಸ್‌ಲೇಷನ್ ಮುಂತಾದ ಇತರ AI ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಹೊಂದಿದೆ. ಮೀಟಿಯರ್ ಗ್ರೇ ಆವೃತ್ತಿಯ ಅಳತೆ 160.5 x 75.02 x 7.43 mm ಮತ್ತು ತೂಕ 192 ಗ್ರಾಂ. ಫೀನಿಕ್ಸ್ ಗೋಲ್ಡ್ ಮಾದರಿಯು 7.45 ಮಿಮೀ ದಪ್ಪ ಮತ್ತು 193 ಗ್ರಾಂ ತೂಕವಿದೆ.

Best Mobiles in India

English summary
Vivo T4 Ultra will be available for purchase in India today at 12 noon through Flipkart, the Vivo India e-store, and select offline retail locations. It is offered in two colors: Phoenix Gold and Meteor Grey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+