Home
ಸುದ್ದಿಜಾಲ

ಇಂದು Vivo T4x 5G ಫಸ್ಟ್ ಸೇಲ್; 6500mAh ಬ್ಯಾಟರಿ.. 50MP ಕ್ಯಾಮೆರಾ.. ಬೆಲೆ, ಆಫರ್ ಏನಿದೆ?

ವಿವೋ ತನ್ನ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಈ ಮೂಲಕ ಪ್ರಸಿದ್ಧ ಕಂಪನಿಗಳ ಫೋನ್‌ಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ. ಇತ್ತೀಚೆಗೆ ಹೊಸ ವಿವೋ T4x 5G (Vivo T4x 5G) ಮೊಬೈಲ್ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದನ್ನು 13,000 ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ಪರಿಚಯಿಸಲಾಗಿದೆ. ಅಂದಹಾಗೆ, ಈ ಮೊಬೈಲ್ ಇಂದಿನಿಂದ (ಮಾರ್ಚ್ 12) ಫ್ಲಿಪ್‌ಕಾರ್ಟ್‌ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಮೊದಲ ದಿನವೇ, ಈ ಫೋನ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ಬೊಂಬಾಟ್ ಆಫರ್ ಘೋಷಿಸಿದೆ. ಈ ವಿವೋ ಫೋನಿನ ಬೆಲೆ, ವಿಶೇಷತೆಗಳು ಮತ್ತು ಇನ್ನಿತರ ಮಾಹಿತಿಗಳು ಇಲ್ಲಿವೆ.

ವಿವೋ T4x 5G ಮೊಬೈಲ್ ತನ್ನ ಸ್ಟೈಲಿಶ್ ಲುಕ್, ಕಾರ್ಯಕ್ಷಮತೆ ಮತ್ತು ವೈಶೀಷ್ಟ್ಯಗಳ ಮೂಲಕ ಗ್ರಾಹಕರ ಮನಸ್ಸು ಗೆದ್ದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.72 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್ 6.72 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಈ ಫೋನಿನ ವಿಶೇಷತೆ ಎಂದರೆ ಇದರಲ್ಲಿರುವ 6,500mAh ಸಾಮರ್ಥ್ಯದ ಬ್ಯಾಟರಿ. ಇದರೊಂದಿಗೆ 256GB ಸ್ಟೋರೇಜ್, 44W ಚಾರ್ಜಿಂಗ್ ಒಳಗೊಂಡಿದೆ.

ಇಂದು Vivo T4x 5G ಸೇಲ್; 6500mAh ಬ್ಯಾಟರಿ, 50MP ಕ್ಯಾಮೆರಾ.. ಬೆಲೆ ನೋಡಿ

ವಿವೋ T4x 5G ಬೆಲೆ ಮತ್ತು ಆಫರ್

6GB RAM + 128GB ಸ್ಟೋರೇಜ್ = 13,999 ರೂ.
8GB RAM + 128GB ಸ್ಟೋರೇಜ್ = 14,999 ರೂ.
8GB RAM + 256GB ಸ್ಟೋರೇಜ್ = 16,999 ರೂ.

ವಿವೋ T4x 5G ಫೋನ್ ಭಾರತದಲ್ಲಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ ಮೂಲ ರೂಪಾಂತರವನ್ನು ಕೇವಲ 13,999 ರೂ.ಗೆ ಖರೀದಿಸಬಹುದು. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ 1,000 ರೂ.ಗಳ ರಿಯಾಯಿತಿ ನೀಡುತ್ತಿದೆ. ನೀವು ರಿಯಾಯಿತಿಯೊಂದಿಗೆ ಈ ವಿವೋ ಫೋನನ್ನು 12,999 ರೂ.ಗೆ ಖರೀದಿಸಬಹುದು. ಇಂದು (ಮಾರ್ಚ್ 12) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಮೂಲಕ ಈ ಮೊಬೈಲ್ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಇದು ಮೆರೈನ್ ಬ್ಲೂ ಮತ್ತು ಪ್ರೋಟಾನ್ ಪರ್ಪಲ್ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

ವಿವೋ T4x 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ವಿವೋ T4x 5G ಸ್ಮಾರ್ಟ್‌ಫೋನ್ 6.72 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 2,408 × 1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ದರ ಮತ್ತು 1,050 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಯಾವುದು?

ವಿವೋ T4X 5G ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch ಓಎಸ್ 15 ಜೊತೆಗೆ ಕೆಲಸ ಮಾಡುತ್ತದೆ.

ಇಂದು Vivo T4x 5G ಸೇಲ್; 6500mAh ಬ್ಯಾಟರಿ, 50MP ಕ್ಯಾಮೆರಾ.. ಬೆಲೆ ನೋಡಿ

ಡ್ಯುಯಲ್ ಕ್ಯಾಮೆರಾ ಸೆಟಪ್

ವಿವೋ T4x 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಬ್ಯಾಕಪ್ ಹೇಗಿದೆ

ಹೊಸ ವಿವೋ T4X 5G ಮೊಬೈಲ್ 6,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಇದು OTG ಜೊತೆಗೆ ಬ್ಲೂಟೂತ್ 5.4 ಮತ್ತು ವೈ-ಫೈ 6 ಬೆಂಬಲ ಹೊಂದಿದೆ. ಇದು ಐಆರ್ ಬ್ಲಾಸ್ಟರ್ ಸಹ ಹೊಂದಿದ್ದು, ಟಿವಿ ರಿಮೋಟ್‌ನಂತೆ ಕೆಲಸ ನಿರ್ವಹಿಸುತ್ತದೆ.

Best Mobiles in India

English summary
vivo T4x 5G First Sale Start in india Today via Flipkart: check Price, offers, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+