Home
ಸುದ್ದಿಜಾಲ

Vivo: 6,500mAh ಬ್ಯಾಟರಿ.. 50MP ಕ್ಯಾಮೆರಾ.. ಭಾರತಕ್ಕೆ ಬರುತ್ತಿದೆ ವಿವೋ 5G ಫೋನ್

ವಿವೋ ಸಂಸ್ಥೆಯು ಹೊಸ ಮೊಬೈಲ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ಇದನ್ನು ತನ್ನ 'T' ಸರಣಿಯ ಅಡಿಯಲ್ಲಿ ಪರಿಚಯಿಸಲಿದೆ. ಹೌದು, ಹೊಸ ವಿವೋ T4x 5G (Vivo T4x 5G) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿಯು ತಿಳಿಸಿದೆ. ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಈ ವಿವೋ 5G ಫೋನಿನ ಮೈಕ್ರೋ ಸೈಟ್ ಲೈವ್ ಮಾಡಲಾಗಿದೆ. ಈ ಮೊಬೈಲ್‌ನ ಫೋಟೋ ಮತ್ತು ವೈಶಿಷ್ಟ್ಯಗಳನ್ನು ಹಂಚಿಕೊಳ್ಳಲಾಗಿದೆ. ಬಿಡುಗಡೆಯಾಗುವ ಮೊದಲೇ, ವಿವೋ ಫೋನಿನ ಫೀಚರ್ಸ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿವೋ T4x 5G ಮೊಬೈಲ್ ಬಿಡುಗಡೆ ದಿನಾಂಕವನ್ನು ಕಂಪನಿಯು ಈವರೆಗೆ ಘೋಷಿಸಿಲ್ಲ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.72 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 256GB ಸ್ಟೋರೇಜ್, 6500mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

Vivo: 6500mAh ಬ್ಯಾಟರಿ, 50MP ಕ್ಯಾಮೆರಾ.. ಬರ್ತಿದೆ ವಿವೋ 5G ಫೋನ್

ವಿವೋ T4x 5G ಬೆಲೆ (ನಿರೀಕ್ಷಿತ)

ವಿವೋ T4x 5G ಕಡಿಮೆ ಬಜೆಟ್ 5G ಫೋನ್ ಆಗಿದೆ. ಇದು 15 ಸಾವಿರ ರೂ. ನಿಂದ 20 ಸಾವಿರ ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ 6GB RAM ರೂಪಾಂತರದ ಬೆಲೆ 14,999 ರೂ. ಇರುವ ಸಾಧ್ಯತೆಯಿದೆ. ಟಾಪ್ ವೇರಿಯಂಟ್ 17,999 ರೂ.ಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ವಿವೋ T4x 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ T4x 5G ಮೊಬೈಲ್ 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ T4x 5G ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಆಕ್ಟಾ ಕೋರ್ ಪ್ರೊಸೆಸರ್‌ ಹೊಂದಿರಲಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ವಿವೋ 5G ಫೋನ್ ಆಂಡ್ರಾಯ್ಡ್‌ 15 ಆಧಾರಿತ Funtouch ಓಎಸ್‌ 15 ನೊಂದಿಗೆ ಕೆಲಸ ಮಾಡುತ್ತದೆ.

ಸ್ಟೋರೇಜ್‌ ಆಯ್ಕೆ

ವಿವೋ T4x 5G ಸ್ಮಾರ್ಟ್‌ಫೋನ್‌ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು 6GB RAM + 128GB ಸ್ಟೋರೇಜ್ ಹೊಂದಿರುತ್ತದೆ. ಹಾಗೆಯೇ ಇದು 8GB RAM + 128GB ಸ್ಟೊರೇಜ್ ಮತ್ತು 256GB ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ.

ಕ್ಯಾಮೆರಾ ಸೆಟಪ್

ವಿವೋ T4x 5G ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ T4x 5G ಮೊಬೈಲ್ 6,500mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 44W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರಲಿದೆ. ಇನ್ನೂ ವಿವೋ T3x 5G ಮೊಬೈಲ್ 6,000mAh ಬ್ಯಾಟರಿಯನ್ನು ಹೊಂದಿದೆ.

ಇತರೆ ವೈಶಿಷ್ಟ್ಯಗಳು

ವಿವೋ T4x 5G ಸ್ಮಾರ್ಟ್‌ಫೋನ್‌ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್‌ ಪಡೆದಿದೆ. ಈ ಮೊಬೈಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಕ್ಯಾಮೆರಾ ಮತ್ತು ಇಂಟರ್ಫೇಸ್‌ನೊಂದಿಗೆ ಕಾರ್ಯನಿರ್ವಹಿಸುವ ಎಐ (AI) ವೈಶಿಷ್ಟ್ಯಗಳನ್ನು ಸಹ ಲಭ್ಯವಿದೆ.

Best Mobiles in India

English summary
Vivo T4x 5G launch in india soon, specifications leaked: check all details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+