ಮಾ.5ಕ್ಕೆ ಲಾಂಚ್! 6500mAh ಬ್ಯಾಟರಿ.. ಟ್ರಿಪಲ್ ಕ್ಯಾಮೆರಾ ಸೆಟಪ್.. 14,500ಕ್ಕಿಂತ ಕಡಿಮೆ; ಯಾವ ಫೋನ್?
ವಿವೋ ಸಂಸ್ಥೆಯು ಬಜೆಟ್ ಬೆಲೆಯಲ್ಲಿ ಹೊಸ ಫೋನ್ ಖರೀದಿಸುವವರಿಗೆ ಒಳ್ಳೆಯ ಸುದ್ದಿ ನೀಡಿದೆ. ಕಳೆದ ವಾರ ಭಾರತದಲ್ಲಿ ತನ್ನ 'T' ಸರಣಿಯ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹೌದು, ವಿವೋ T4x 5G (Vivo T4x 5G) ಹೆಸರಿನಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಈ ಅಗ್ಗದ 5G ಫೋನಿನ ಬಿಡುಗಡೆ ದಿನಾಂಕವನ್ನು ಸಹ ಪ್ರಕಟಿಸಿದೆ. ಈ ಫೋನ್ ಬಿಡುಗಡೆ ದಿನಾಂಕ, ನಿರೀಕ್ಷಿತ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.
ವಿವೋ T4x 5G ಮೊಬೈಲ್ 15 ಸಾವಿರ ರೂ.ಗಳ ಬಜೆಟ್ ಒಳಗಡೆ ಬಿಡುಗಡೆಯಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದರೊಂದಿಗೆ 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿವೋ T4x 5G ಬಿಡುಗಡೆ ದಿನಾಂಕ
ವಿವೋ T4x 5G ಫೋನನ್ನು ಇದೇ ಮಾರ್ಚ್ 5 ರಂದು ಬುಧವಾರ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಘೋಷಿಸಿದೆ. ಅಂದು ವಿವೋ ಕಂಪನಿಯು ಅದ್ದೂರಿ ಲಾಂಚ್ ಈವೆಂಟ್ ಆಯೋಜಿಸುವುದಾಗಿ ತಿಳಿಸಿದೆ. ವಿವೋ T4x 5G ಬೆಲೆ ಮತ್ತು ಮಾರಾಟದ ವಿವರಗಳನ್ನು ಅಂದು ಮಧ್ಯಾಹ್ನ 12 ಗಂಟೆಗೆ ಬಹಿರಂಗಪಡಿಸಲಾಗುವುದು. ಮಾಹಿತಿಯ ಪ್ರಕಾರ, ಈ ವಿವೋ 5G ಫೋನ್ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.
ಈ ಸುದ್ದಿ ಓದಿದ್ದೀರಾ?: iQOO Neo 10R: ಬಿಡುಗಡೆಯಾಗುವ ಮೊದಲೇ ಫೀಚರ್ಸ್ ಬಹಿರಂಗ; ಬೆಲೆಯೂ ಲೀಕ್.. ಲಾಂಚ್ ಯಾವಾಗ?
ವಿವೋ T4x 5G ವೈಶಿಷ್ಟ್ಯಗಳು (ನಿರೀಕ್ಷಿತ)
ಕ್ಯಾಮೆರಾ ಸೆಟಪ್
ವಿವೋ T4x 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ ಎಂದು ಹೇಳಲಾಗಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ ವೈಡ್ ಆಂಗಲ್ ಲೆನ್ಸ್ ಮತ್ತು ಎಐ ಕ್ಯಾಮೆರಾ ಸಹ ಹೊಮದಿರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ವರದಿಯ ಪ್ರಕಾರ, ವಿವೋ T4x 5G ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇದು 2.5GHz ವರೆಗಿನ ಗಡಿಯಾರದ ವೇಗದಲ್ಲಿ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಸೂಪರ್ ಬ್ಯಾಟರಿ ಬ್ಯಾಕಪ್
ವಿಶೇಷವೆಂದರೆ, ವಿವೋ T4X 5G ಫೋನಿನ ಬ್ಯಾಟರಿ ಅದರ ಅತಿದೊಡ್ಡ ಯುಪಿಎಸ್ ಆಗಿದೆ. ವರದಿಯ ಪ್ರಕಾರ, ಈ ಮೊಬೈಲ್ ಅನ್ನು ಭಾರತದಲ್ಲಿ 6500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗುವುದು. ವಿವೋ T ಸರಣಿಯ ಯಾವುದೇ ಫೋನ್ ಇಷ್ಟು ದೊಡ್ಡ ಬ್ಯಾಟರಿಯನ್ನು ಹೊಂದಿದೆ.
ವಿವೋ T4x 5G ಬೆಲೆ (ನಿರೀಕ್ಷಿತ)
ವಿವೋ T4x 5G (Vivo T4X 5G) ಕಡಿಮೆ ಬಜೆಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಮುಂಬರುವ ವಿವೋ T4x 5G ಫೋನಿನ ಬೆಲೆ ಸುಮಾರು 15 ಸಾವಿರ ರೂ.ಗಳು ಆಗಿರುತ್ತದೆ. ಇದನ್ನು 14,499 ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಇದು ಆಫರ್ ಬೆಲೆ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವರದಿಯ ಪ್ರಕಾರ, ನೀವು ಈ ವಿವೋ 5G ಮೊಬೈಲ್ ಅನ್ನು ಪ್ರೊಂಟೊ ಪರ್ಪಲ್ ಮತ್ತು ಮೆರೈನ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.


Click it and Unblock the Notifications








