Home
ಸುದ್ದಿಜಾಲ

ವಿವೋ ಅಬ್ಬರ ಶುರು! ಬರ್ತಿದೆ ಹೊಸ 5G ಫೋನ್.. 6500mAh ಬ್ಯಾಟರಿ.. ಕಡಿಮೆ ಬೆಲೆ.. ಲಾಂಚ್ ಯಾವಾಗ?

ವಿವೋ ಮೊಬೈಲ್ ಪ್ರಿಯರಿಗೆ ಡಬಲ್ ಗುಡ್‌ ನ್ಯೂಸ್‌ ಇದೆ. ಬಹುನಿರೀಕ್ಷಿತ ವಿವೋ V50 5G ಸ್ಮಾರ್ಟ್‌ಫೋನ್ ಫೆಬ್ರವರಿ 17 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮಧ್ಯಮ ಬಜೆಟ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಜೊತೆಗೆ, ಕಂಪನಿಯು ಮತ್ತೊಂದು ಹೊಸ ಫೋನನ್ನು ಪರಿಚಯಿಸಲಿದೆ. ಹೌದು, ಕಂಪನಿಯು ವಿವೋ T4x 5G (Vivo T4x 5G) ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇದನ್ನು ಮುಂದಿನ ತಿಂಗಳು ಅಂದರೆ ಮಾರ್ಚ್‌ನಲ್ಲಿ ಲಾಂಚ್ ಮಾಡಬಹುದು. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿವೋ T4x 5G ಫೋನಿನ ಹಲವು ಪ್ರಮುಖ ವಿಶೇಷತೆಗಳು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿವೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.72 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 128GB ಸ್ಟೋರೇಜ್, 6500mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

ಬರ್ತಿದೆ Vivo T4x 5G ಫೋನ್; 6500mAh ಬ್ಯಾಟರಿ.. ಕಡಿಮೆ ಬೆಲೆ.. ಲಾಂಚ್ ಯಾವಾಗ?

ವಿವೋ T4x 5G ಬಿಡುಗಡೆ ವಿವರ

ವಿವೋ T4x 5G ಫೋನ್ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ, ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ, ಇದು ಎರಡನೇ ಅಥವಾ ಮೂರನೇ ವಾರದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ವರದಿಯ ಪ್ರಕಾರ, ವಿವೋ T4x 5G ಬೆಲೆ ಸುಮಾರು 15 ಸಾವಿರ ರೂ. ಆಗಿರುತ್ತದೆ. ಇದನ್ನು ಪ್ರೊಂಟೊ ಪರ್ಪಲ್ ಮತ್ತು ಮೆರೈನ್ ಬ್ಲೂ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ವಿವೋ T3x 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ T3x 5G ಫೋನ್ 6.72 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿರುತ್ತದೆ. ಇದು 2408 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ T3x 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 1 ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ. ಈ ಫೋನಿನ 8 ಕೋರ್ ಸಿಪಿಯು ನಾಲ್ಕು ಕೋರ್‌ಗಳನ್ನು ಹೊಂದಿದೆ.

ಬರ್ತಿದೆ Vivo T4x 5G ಫೋನ್; 6500mAh ಬ್ಯಾಟರಿ.. ಕಡಿಮೆ ಬೆಲೆ.. ಲಾಂಚ್ ಯಾವಾಗ?

ಕ್ಯಾಮೆರಾ ಸೆಟಪ್

ವಿವೋ T3x 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ T3x 5G ಫೋನ್ 6000mAh ಅಥವಾ 6500mAh ಬ್ಯಾಟರಿ ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮೊಬೈಲ್ 44W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಿದ ಬಳಿಕ, ಈ ಫೋನನ್ನು 23.33 ಗಂಟೆಗಳ ಯೂಟ್ಯೂಬ್ ವಿಡಿಯೋ ಪ್ಲೇಬ್ಯಾಕ್ ಅಥವಾ 18.55 ಗಂಟೆಗಳ ಇನ್‌ಸ್ಟಾಗ್ರಾಮ್ ಶಾಟ್ ವಿಡಿಯೋ ಪ್ಲೇಬ್ಯಾಕ್ ಅಥವಾ 9.32 ಗಂಟೆಗಳ PUBG ಗಾಗಿ ಬಳಸಬಹುದು ಎಂದು ವಿವೋ ಹೇಳಿದೆ.

ವಿವೋ T3x 5G ಬೆಲೆ

ವಿವೋ T3x 5G ಫೋನಿನ 4GB RAM + 128GB ಸ್ಟೋರೇಜ್ ರೂಪಾಂತರವು 12,499 ರೂ.ಗೆ ಬಿಡುಗಡೆಯಾಗಿದೆ. 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 13,999 ರೂ. ಆಗಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ 15,499 ರೂ.ಗೆ ಮಾರಾಟವಾಗುತ್ತಿದೆ. ಅದರಂತೆ ಮುಂಬರುವ ವಿವೋ T4x 5G ಬೆಲೆಯು ಇದೇ ಬಜೆಟ್‌ನಲ್ಲಿ ಇರುವ ಸಾಧ್ಯತೆಯಿದೆ.

Best Mobiles in India

English summary
Vivo T4x 5G with 6500mAh battery india launch timeline leaked: check all details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+