Home
ಸುದ್ದಿಜಾಲ

ಬರ್ತಿದೆ Vivo T4x 5G ಫೋನ್; 6500mAh ಬ್ಯಾಟರಿ.. 50MP ಕ್ಯಾಮೆರಾ.. ಬೆಲೆಯೂ ಕಮ್ಮಿ

ವಿವೋ ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇದು ವಿವೋ T4x 5G (Vivo T4x 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೌದು, ಶೀಘ್ರದಲ್ಲೇ ಈ ಬಜೆಟ್ ಸ್ನೇಹಿ ವಿವೋ ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದನ್ನು ವಿವೋ T3x 5G ( Vivo T3x 5G) ಫೋನಿನ ಉತ್ತರಾಧಿಕಾರಿಯಾಗಿ ಪರಿಚಯಿಸಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಬಜೆಟ್ ವಿಭಾಗದಲ್ಲಿ ಈವರೆಗಿನ ಬಿಗ್ ಬ್ಯಾಟರಿ ಹೊಂದಿರುತ್ತದೆ. ಈ ಮಧ್ಯೆ, ಫೋನಿನ ಕ್ಯಾಮೆರಾ ವಿವರಗಳು, ಎಐ (AI) ಫೀಚರ್ಸ್‌ ಬಹಿರಂಗವಾಗಿದೆ.

ವಿವೋ T4x 5G ಮೊಬೈಲ್ ಮುಂದಿನ ತಿಂಗಳು ಅಂದರೆ, ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಮೊಬೈಲ್ 6.72 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಹಾಗೆಯೇ 8GB RAM + 128GB ಸ್ಟೋರೇಜ್, 6500mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಬರ್ತಿದೆ Vivo T4x 5G ಫೋನ್; 6500mAh ಬ್ಯಾಟರಿ.. 50MP ಕ್ಯಾಮೆರಾ.. ಬೆಲೆ ನೋಡಿ

ವಿವೋ T4x 5G ಬೆಲೆ (ನಿರೀಕ್ಷಿತ)

ವಿವೋ T4x 5G ಫೋನ್ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ, ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ, ಇದು ಎರಡನೇ ಅಥವಾ ಮೂರನೇ ವಾರದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ವರದಿಯ ಪ್ರಕಾರ, ಭಾರತದಲ್ಲಿಈ ಫೋನಿನ ಬೆಲೆ 15,000 ರೂ.ಗಿಂತ ಕಡಿಮೆ ಇರಲಿದೆ.

ಕಳೆದ ವರ್ಷವಿವೋ T3x 5G ಮೊಬೈಲ್‌ 13,999 ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆಯಾಗಿತ್ತು. ಇದನ್ನು ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಆದರೆ, ವಿವೋ T4x 5G ಫೋನ್ ಈ ವರ್ಷ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದನ್ನು ಪ್ರೊಂಟೊ ಪರ್ಪಲ್ ಮತ್ತು ಮೆರೈನ್ ಬ್ಲೂ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ವಿವೋ T3x 5G ಬೆಲೆ

ವಿವೋ T3x 5G ಫೋನಿನ 4GB RAM + 128GB ಸ್ಟೋರೇಜ್ ರೂಪಾಂತರವು 12,499 ರೂ.ಗೆ ಬಿಡುಗಡೆಯಾಗಿದೆ. 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 13,999 ರೂ. ಆಗಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ 15,499 ರೂ.ಗೆ ಮಾರಾಟವಾಗುತ್ತಿದೆ.

ಬರ್ತಿದೆ Vivo T4x 5G ಫೋನ್; 6500mAh ಬ್ಯಾಟರಿ.. 50MP ಕ್ಯಾಮೆರಾ.. ಬೆಲೆ ನೋಡಿ

ವಿವೋ T4x 5G ವೈಶಿಷ್ಟ್ಯಗಳು

ವಿವೋ T4x 5G ಫೋನಿನ ಕ್ಯಾಮೆರಾ ವಿವರಗಳು ಸೋರಿಕೆಯಾಗಿವೆ. ವರದಿ ಪ್ರಕಾರ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಎಐ (AI) ಪ್ರಾಥಮಿಕ ಕ್ಯಾಮೆರಾ ಇರುತ್ತದೆ. ವಿವೋ T3x ಮೊಬೈಲ್ ಸಹ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಮುಂಬರುವ ಫೋನಿನಲ್ಲಿ ಎಐ ಎರೇಸ್, ಎಐ ಫೋಟೋ ವರ್ಧನೆ ಮತ್ತು ಎಐ ಡಾಕ್ಯುಮೆಂಟ್ ಮೋಡ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ವಿವೋ T4x 5G ಮೊಬೈಲ್ 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರಲಿದೆ. ಇದು ಈ ಬಜೆಟ್ ವಿಭಾಗದಲ್ಲಿ ಮೊದಲನೆಯ ಸ್ಮಾರ್ಟ್‌ಫೋನ್ ಆಗಿರಲಿದೆ. ಇದು ವಿವೋ T3x ಪೋನಿಗಿಂತ 500mAh ದೊಡ್ಡ ಬ್ಯಾಟರಿಯಾಗಿದೆ. ವಿವೋT3x ಮೊಬೈಲ್‌ನ 44W ವೈರ್ಡ್ ಚಾರ್ಜರ್‌ಗಿಂತ ಅಪ್‌ಗ್ರೇಡ್‌ ಇರಲಿದೆ. ಈ ವಿವೋ ಫೋನ್ 7,28,000 ಕ್ಕಿಂತ ಹೆಚ್ಚಿನ AnTuTu ಸ್ಕೋರ್‌ ಪಡೆದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್ ಹೊಂದಿರುತ್ತದೆ. ಇದು ವಿವೋ T3x ಫೋನಿನಲ್ಲಿರುವ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ಗಿಂತ ವೇಗವಾದ ಪ್ರೊಸೆಸರ್ ಆಗಿದೆ.

ವಿವೋ T3x 5G ಸ್ಮಾರ್ಟ್‌ ಫೋನ್ 6.72 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 2408 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಫೋನನ್ನು 23.33 ಗಂಟೆಗಳ ಯೂಟ್ಯೂಬ್ ವಿಡಿಯೋ ಪ್ಲೇಬ್ಯಾಕ್ ಅಥವಾ 18.55 ಗಂಟೆಗಳ ಇನ್‌ಸ್ಟಾಗ್ರಾಮ್ ಶಾಟ್ ವಿಡಿಯೋ ಪ್ಲೇಬ್ಯಾಕ್ ಅಥವಾ 9.32 ಗಂಟೆಗಳ PUBG ಗಾಗಿ ಬಳಸಬಹುದು ಎಂದು ವಿವೋ ಹೇಳಿದೆ.

Best Mobiles in India

English summary
Vivo T4x 5G with 6500mAh and 50mp camera details leaked: check all details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+