ಬರಲಿದೆ 'ವಿವೋ ಯು20' 8GB RAM ಸ್ಮಾರ್ಟ್‌ಫೋನ್!
ಚೀನಾ ಮೂಲದ ಜನಪ್ರಿಯ ಕಂಪೆನಿ ವಿವೋ ತನ್ನ ಹೊಸ ಆವೃತ್ತಿಯಾದ ವಿವೋ ಯು20 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಈಗಾಗ್ಲೆ ಬಿಡುಗಡೆ ಮಾಡಿದೆ. ಇದೀಗ 8 ಜಿಬಿ RAM 128 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ವಿವೋ ಯು20 ಸ್ಮಾರ್ಟ್‌ಫೋನ್‌ನನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಕಳೆದ ವಾರವಷ್ಟೇ ದೇಶಿ ಮಾರುಕಟ್ಟೆಗೆ ಬಂದಿದ್ದ ವಿವೋ ಯು20 ಇದೀಗ 8GB RAM ವೇರಿಯೆಂಟ್ ಆಯ್ಕೆಯಲ್ಲಿ ತನ್ನ ಕಮಾಲ್ ತೋರಿಸಲು ಬರುತ್ತಿದೆ.

ಹೌದು ವಿವೋ ಯು 20 8GB RAM ಸ್ಮಾರ್ಟ್‌ಫೋನ್ ಡಿಸೆಂಬರ್ 12 ರಂದು ಭಾರತದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ 18,990 ರೂ. ಎನ್ನಲಾಗ್ತಿದ್ದು ಭಾರತ ದೇಶಾದ್ಯಂತ ಆಫ್‌ಲೈನ್ ಮಳಿಗೆಗಳ ಮೂಲಕ ಮಾರಾಟವಾಗಲಿದೆ. ಜೊತೆಗೆ ಅಮೆಜಾನ್ ಇಂಡಿಯಾ ಮತ್ತು ವಿವೋ ಇಂಡಿಯಾ ಇ-ಶಾಪ್ ಸೇರಿದಂತೆ ಇ-ಕಾಮರ್ಸ್ ತಾಣಗಳ ಮೂಲಕವೂ ಪ್ರತ್ಯೇಕವಾಗಿ ಲಭ್ಯವಿರಲಿದೆ. ಹಾಗಾದ್ರೆ ಭಾರತದಲ್ಲಿ ಬಿಡುಗಡೆಯಾಗಲಿರುವ 8GB RAM ಸಾಮರ್ಥ್ಯದ ವಿವೊ ಯು 20 ಸ್ಮಾರ್ಟ್‌ಫೋನ್‌ನ ವಿಶೇಷತೆಗಳು ಇಲ್ಲಿವೆ ನೋಡಿ.

ಡಿಸ್‌ಪ್ಲೇ ಮಾದರಿ
ವಿವೋ ಯು20 8 ಜಿಬಿ RAM ವೆರಿಯೆಂಟ್ ಆಯ್ಕೆಯ ಸ್ಮಾರ್ಟ್‌ಫೋನ್ 6.53 ಇಂಚಿನ ಫುಲ್ ಹೆಚ್‌ಡಿ ಡಿಸ್ ಪ್ಲೇ ಹೊಂದಿದ್ದು, 1080x2340 ಪಿಕ್ಸಲ್ ರೆಸಲ್ಯೂಶನ್ ಒಳಗೊಂಡಿದೆ. ಇನ್ನು ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತ 90.3% ಆಗಿದೆ, ಅಲ್ಲದೆ ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಬ್ರೈಟ್ ನೆಸ್ 480 ನಿಟ್‌ಗಳಷ್ಟು ಇದೆ.

ಪ್ರೊಸೆಸರ್ ಸಿಸ್ಟಮ್
ವಿವೊ ಯು20 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 675 SoC ಆಗಿದ್ದು ಆಂಡ್ರಾಯ್ಡ್ 9 ಓಎಸ್ ಇರಲಿದೆ. ಜೊತೆಗೆ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಇರಲಿದೆ.

ಕ್ಯಾಮೆರಾ ವಿಶೇಷತೆ
ವಿವೊ ಯು 20 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರ ಮುಖ್ಯಕ್ಯಾಮೆರಾ 16 ಮೆಗಾಪಿಕ್ಸೆಲ್ Sony IMX499 ಹೊಂದಿದ್ದು F/ 1.8 ಲೆನ್ಸ್ ಆಗಿದ್ದು ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ವೈಡ್ ಆಂಗಲ್‌ಆಗಿದ್ದು F/ 2.2 ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 2ಮೆಗಾಪಿಕ್ಸಲೆ್ ಮ್ಯಾಕ್ರೋ ಸೆನ್ಸಾರ್ ಆಗಿದ್ದು F/2.4 ಲೆನ್ಸ್ ಹೊಂದಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದ್ದು F/ 2.0 ಲೆನ್ಸ್ ಹೊಂದಿದೆ.

ಬ್ಯಾಟರಿ ಮತ್ತು ಇತರೆ
ವಿವೋ ಯು20 ಸ್ಮಾರ್ಟ್‌ಫೋನ್‌ನಲ್ಲಿ 18W ಡ್ಯುಯಲ್ ಎಂಜಿನ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿ ಇದೆ. ಇನ್ನು ವಿವೊ ಯು20 64GB ಯುಎಫ್ಎಸ್ 2.1 ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ, ಇದನ್ನು ಮೆಮೊರಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಬಹುದಾಗಿದೆ.

ಭಾರತದಲ್ಲಿ ವಿವೋ ಯು 20 ಬೆಲೆ
ಭಾರತದಲ್ಲಿ ವಿವೋ ಯು 20 8GB RAM ಸ್ಮಾರ್ಟ್‌ಫೋನ್ 18,990 ರೂ.ನಿಗಧಿಯಾಗುವ ಸಾಧ್ಯತೆ ಇದ್ದು. ಈಗಾಗ್ಲೆ ವಿವೋ ಯು 20 4GB RAM ಸ್ಮಾರ್ಟ್‌ಫೋನ್ ಬೆಲೆ 10,990 ರೂ. ಹಾಗೂ ವಿವೋ ಯು 20 6GB RAM ಸ್ಮಾರ್ಟ್‌ಫೋನ್‌ಗೆ 11,990 ರೂ ಬೆಲೆ ಇದೆ. ಈ ಎರಡೂ ಮಾದರಿಗಳು ಬ್ಲೇಜ್ ಬ್ಲೂ ಮತ್ತು ರೇಸಿಂಗ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಸಿಗಲಿದ್ದು ಅಮೆಜಾನ್ ಇಂಡಿಯಾ ಮತ್ತು ವಿವೋ ಇಂಡಿಯಾ ಇ-ಶಾಪ್ ಮೂಲಕ ಖರೀದಿಸಲು ಲಭ್ಯವಿದೆ.


Click it and Unblock the Notifications








