ವಿವೋ ಕಂಪೆನಿಯಿಂದ ಹೊಸ ಇಯರ್‌ಬಡ್ಸ್ ಲಾಂಚ್!..30 ಗಂಟೆಗಳ ಬ್ಯಾಟರಿ ಬ್ಯಾಕಪ್!
ವಿವೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ ಇಯರ್‌ಬಡ್ಸ್‌ಗಳಿಗೂ ಕೂಡ ಭಾರಿ ಡಿಮ್ಯಾಂಡ್ ಇದೆ. ತನ್ನ ವಿಭಿನ್ನ ಶ್ರೇಣಿಯ ಇಯರ್‌ಬಡ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಇದೀಗ ವಿವೋ ಕಂಪೆನಿ ತನ್ನ ಹೊಸ ವಿವೋ TWS ಏರ್ 2 ಅನ್ನು ಬಿಡುಗಡೆ ಮಾಡಿದೆ. ಇದು ಇನ್ ಇಯರ್ ಡಿಸೈನ್ ಹೊಂದಿದ್ದು, ಸಿಲಿಕಾನ್ ಇಯರ್ ಟಿಪ್ಸ್ ಹೊಂದಿಲ್ಲ.
ಹೌದು, ವಿವೋ TWS ಏರ್ 2 ಇಯರ್‌ಬಡ್ಸ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಆಪಲ್ ಏರ್‌ಪಾಡ್ ವಿನ್ಯಾಸವನ್ನು ಹೊಂದಿದ್ದು ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇನ್ನು ಈ ಇಯರ್‌ಬಡ್ಸ್ ಧೂಳು ಮತ್ತು ನೀರಿನ ಪ್ರತಿರೋಧದ ವಿರುದ್ಧ IP54 ಪ್ರಮಾಣೀಕರಣವನ್ನು ಹೊಂದಿದೆ. ಜೊತೆಗೆ ಪೆಬ್ಬಲ್-ಆಕಾರದ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ TWS ಏರ್ 2 ಇಯರ್‌ಬಡ್ಸ್
ವಿವೋ TWS ಏರ್ 2 ಇಯರ್‌ಬಡ್ಸ್ 14.2mm ಆಡಿಯೋ ಡ್ರೈವರ್ ಯೂನಿಟ್ ಅನ್ನು ಹೊಂದಿದೆ. ಇದು ಆಪಲ್ ಏರ್‌ಪಾಡ್ಸ್ ವಿನ್ಯಾಸವನ್ನು ಹೊಂದಿದ್ದು, ಗೋಲ್ಡನ್ ಇಯರ್ಸ್ ಪರಿಣಿತರಿಂದ ಸೌಂಡ್ ಟ್ಯೂನ್ ಮಾಡಲಾಗಿದೆ. ಇದರಲ್ಲಿ ತಲ್ಲೀನಗೊಳಿಸುವ ಆಲಿಸುವ ಅನುಭವಕ್ಕಾಗಿ 3D ಪನೋರಮಿಕ್ ಸೌಂಡ್ ಮತ್ತು ಡೀಪ್‌ಎಕ್ಸ್ 3.0 ಸ್ಟಿರಿಯೊ ಸೌಂಡ್ ಸಿಸ್ಟಂ ಅನ್ನು ನೀಡಲಾಗಿದೆ. ಜೊತೆಗೆ ಸ್ಪಷ್ಟ ಗುಣಮಟ್ಟಕ್ಕಾಗಿ AI ಕಾಲ್ ನಾಯ್ಸ್ ಬ್ಯಾಕ್‌ಗ್ರೌಂಡ್ ಸೌಂಡ್ ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಇಯರ್‌ಬಡ್ಸ್ ಬ್ಲೂಟೂತ್ 5.3 ಸಂಪರ್ಕವನ್ನು ಆನ್‌ಬೋರ್ಡ್ ಹೊಂದಿದೆ.
ಇನ್ನು ಈ TWS ಇಯರ್‌ಫೋನ್‌ಗಳು MonsterSound eSports ಗೇಮಿಂಗ್ ಸೌಂಡ್ ಎಫೆಕ್ಟ್‌ಗಳನ್ನು ಒಳಗೊಂಡಿವೆ. ಇದು 55ms ಅಲ್ಟ್ರಾ-ಲೋ ಲೇಟೆನ್ಸಿ ಮೋಡ್ ಹೊಂದಿದ್ದು, ಇಯರ್‌ಬಡ್ಸ್ ಸಿಂಗಲ್ ಚಾರ್ಜ್‌ನಲ್ಲಿ 6 ಗಂಟೆಗಳ ಬಾಳಿಕೆಯನ್ನು ನೀಡಲಿದೆ. ಜೊತೆಗೆ ಇದು 30 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ ಎಂದು ವರದಿಯಾಗಿದೆ. ಈ ಇಯರ್‌ಬಡ್ಸ್ ಅನ್ನು USB-C ಪೋರ್ಟ್ ಮೂಲಕ ಚಾರ್ಜ್ ಮಾಡಬಹುದಾಗಿದ್ದು, ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.
ವಿವೋ TWS ಏರ್ 2 ಇಯರ್‌ಬಡ್ಸ್ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರೆ ಇದರ ಬೆಲೆಯನ್ನು ಮಾತ್ರ ಇನ್ನು ಕೂಡ ಬಹಿರಂಗಪಡಿಸಿಲ್ಲ. ಈ ಇಯರ್‌ಬಡ್ಸ್ ಅನ್ನು ನೈಟ್ ಬ್ಲೂ ಮತ್ತು ಮಾರ್ನಿಂಗ್ ವೈಟ್ ಬಣ್ಣಗಳಲ್ಲಿ ನೀಡಲಾಗುತ್ತದೆ ಎಂದು ಕಂಪೆನಿ ಹೇಳಿದೆ. ಇದು ಭಾರತದ ಮಾರುಕಟ್ಟೆಗೂ ಕೂಡ ಎಂಟ್ರಿ ನೀಡಲಿದೆಯಾ ಅನ್ನೊದನ್ನ ಕಾದು ನೋಡಬೇಕಿದೆ.
ಇನ್ನು ವಿವೋ ಕಂಪೆನಿ ಚೀನಾದಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಸಹ ಬಿಡುಗಡೆ ಮಾಡಿದೆ. ಇದನ್ನು ವಿವೋ Y33t ಸ್ಮಾರ್ಟ್‌ಫೋನ್ ಎಂದು ಗುರುತಿಸಲಾಗಿದೆ. ಈ ಸ್ಮಾರ್ಟ್‌ಫೋನ್ 6.56 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 60Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ ಡ್ಯೂಡ್ರಾಪ್ ನಾಚ್ ಶೈಲಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ G85 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಮಧ್ಯಮ ಶ್ರೇಣಿಯ ಚಿಪ್‌ಸೆಟ್ ಆಗಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಡೀಪ್ ಸೆನ್ಸರ್ ಆಯ್ಕೆ ಹೊಂದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








