Home
ಸುದ್ದಿಜಾಲ

ವಿವೋ TWS ಏರ್ ಇಯರ್‌ಬಡ್ಸ್‌ ಬಿಡುಗಡೆ! ಸಿಂಗಲ್‌ ಚಾರ್ಜ್‌ನಲ್ಲಿ 4.8 ಗಂಟೆಗಳ ಬ್ಯಾಟರಿ ಬ್ಯಾಕಪ್ !

ವಿವೋ ಕಂಪೆನಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ ಇಯರ್‌ಬಡ್ಸ್‌ ವಲಯದಲ್ಲಿಯೂ ಪ್ರಾಬಲ್ಯ ಸಾಧಿಸಿದೆ. ತನ್ನ ಭಿನ್ನ ಶ್ರೇಣಿಯ ಇಯರ್‌ಬಡ್ಸ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಗುರುತಿಸಿಕೊಂಡಿದೆ. ಇದೀಗ ಹೊಸದಾಗಿ ವಿವೋ TWS ಏರ್ ವಾಯರ್‌ಲೆಸ್‌ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಿದೆ.

ಹೌದು, ವಿವೋ ಕಂಪೆನಿ ಭಾರತದಲ್ಲಿ ಹೊಸ ವಿವೋ TWS ಏರ್ ಇಯರ್‌ಬಡ್ಸ್‌ ಅನ್ನು ಪರಿಚಯಿಸಿದೆ. ಈ ಇಯರ್‌ಬಡ್ಸ್‌ ಬ್ಲೂಟೂತ್ 5.2 ಆವೃತ್ತಿ ಯನ್ನು ಬೆಂಬಲಿಸಲಿದೆ. ಜೊತೆಗೆ ಇಯರ್‌ಬಡ್ಸ್‌ 14.2mm ಡೈನಾಮಿಕ್ ಆಡಿಯೋ ಡ್ರೈವರ್‌ ಅನ್ನು ಒಳಗೊಂಡಿದೆ. ಹಾಗಾದ್ರೆ ಈ ಹೊಸ ವಿವೋ ಇಯರ್‌ಬಡ್ಸ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿವೋ TWS ಏರ್ ಇಯರ್‌ಬಡ್ಸ್‌ ಬಿಡುಗಡೆ! 4.8 ಗಂಟೆಗಳ ಬ್ಯಾಟರಿ ಬ್ಯಾಕಪ್ !

ವಿವೋ TWS ಏರ್ ಹೇಗಿದೆ ಫೀಚರ್ಸ್‌?

ವಿವೋ TWS ಏರ್ ಇಯರ್‌ಬಡ್ಸ್‌ ಅತ್ಯಾಕರ್ಷಕ ವಿನ್ಯಾಸವನ್ನು ಪಡೆದಿದೆ. ಈ ಇಯರ್‌ಬಡ್ಸ್‌ ಬ್ಲೂಟೂತ್‌ 5.2 ಆವೃತ್ತಿಯನ್ನು ಬೆಂಬಲಿಸಲಿದ್ದು, 14.2mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇನ್ನು ಇಯರ್‌ಬಡ್ಸ್‌ ಬಯೋ-ಕಾರ್ಬನ್ ಫೈಬರ್ ಕಾಂಪೋಸಿಟ್ ಡಯಾಫ್ರಾಮ್‌ನೊಂದಿಗೆ ಬರುತ್ತದೆ. ಇದು ಗೂಗಲ್ ಫಾಸ್ಟ್ ಪೇರ್ ಬೆಂಬಲವನ್ನು ಸಹ ಪಡೆದಿದೆ.

ಈ ಇಯರ್‌ಬಡ್ಸ್‌ ಸ್ಪೋರ್ಟ್ಸ್‌ ಡ್ಯುಯಲ್‌ ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ. ಈ ಮೈಕ್ರೊಫೋನ್‌ಗಳು AI ಕಾಲ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅಲ್ಗಾರಿದಮ್‌ ಅನ್ನು ಹೊಂದಿದೆ. ಇದರೊಂದಿಗೆ ಈ ಇಯರ್‌ಬಡ್ಸ್‌ನಲ್ಲಿ ಎಲ್-ಆಕಾರದ ಆಂಟಿ-ವಿಂಡ್ ನಾಯ್ಸ್‌ ಕ್ಯಾನಲ್‌ಗಳನ್ನು ನೀಡಲಾಗಿದೆ. ಇದರಿಂದ ಹಠಾತ್ ಗಾಳಿ ಶಬ್ದವನ್ನು ನಿಖರವಾಗಿ ಗುರುತಿಸುವ ಮತ್ತು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ನೀಡಲಾಗಿದೆ ಎಂದು ವಿವೋ ಕಂಪನಿ ಹೇಳಿದೆ.

ವಿವೋ TWS ಏರ್ ಇಯರ್‌ಬಡ್ಸ್‌ ಬಿಡುಗಡೆ! 4.8 ಗಂಟೆಗಳ ಬ್ಯಾಟರಿ ಬ್ಯಾಕಪ್ !

ಇವೋ TWS ಏರ್‌ ವಾಯರ್‌ಲೆಸ್‌ ಇಯರ್‌ಬಡ್ಸ್‌ IP54 ರೇಟಿಂಗ್‌ ಅನ್ನು ಹೊಂದಿದ್ದು, ವಾಟರ್‌ ಪ್ರೋಫ್‌ ವ್ಯವಸ್ಥೆಯನ್ನು ಪಡೆದಿದೆ. ಇದಲ್ಲದೆ ಪ್ರತಿ ಇಯರ್‌ಬಡ್‌ನಲ್ಲಿ 29mAh ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 4.8 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ ಎಂದು ವಿವೋ ಕಂಪನಿ ಹೇಳಿಕೊಂಡಿದೆ. ಇನ್ನು ಇಯರ್‌ಬಡ್ಸ್‌ 10 ನಿಮಿಷಗಳ ಚಾರ್ಜ್‌ನಲ್ಲಿ 1.5 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡಲಿದೆ.

ವಿವೋ TWS ಏರ್ ಇಯರ್‌ಬಡ್ಸ್‌ ಬಿಡುಗಡೆ! 4.8 ಗಂಟೆಗಳ ಬ್ಯಾಟರಿ ಬ್ಯಾಕಪ್ !

ವಿವೋ TWS ಏರ್ ಬೆಲೆ ಮತ್ತು ಲಭ್ಯತೆ

ವಿವೋ TWS ಏರ್ ಇಯರ್‌ಬಡ್ಸ್‌ ಭಾರತದಲ್ಲಿ 3,999ರೂ. ಬೆಲೆಯನ್ನು ಹೊಂದಿದೆ. ಇದನ್ನು ನೀವು ಬಬಲ್‌ ವೈಟ್‌ ಮತ್ತು ಬಬಲ್‌ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ವಿವೋ ಕಂಪೆನಿ ಅಧಿಕೃತ ತಾಣ ವಿವೋ.ಕಾಮ್‌ ಮತ್ತು ಆಫ್‌ಲೈನ್‌ನಲ್ಲಿ ದೇಶದ ಅಧಿಕೃತ ರಿಟೇಲ್‌ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. ಇದಲ್ಲದೆ ವಿವೋ V27 ಅಥವಾ V27 ಪ್ರೊ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು ವಿವೋ TWS ಏರ್‌ನಲ್ಲಿ 1,000ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ ವಿವೋ ಕಂಪೆನಿ ಭಾರತದಲ್ಲಿ ತನ್ನ ವಿವೋ V27 ಸರಣಿಯನ್ನು ಪರಿಚಯಿಸಿದೆ. ಈ ಸರಣಿಯಲ್ಲಿ ವಿವೋ V27 ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಫೀಚರ್ಸ್‌ಗಳ ಮೂಲಕ ಎಲ್ಲರ ಗಮನಸೆಳೆದಿದೆ. ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 120Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ ಫನ್‌ಟಚ್‌ OS 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಅನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ.

Best Mobiles in India

English summary
Vivo TWS Air comes with 14.2mm dynamic drivers and a Bio-carbon fiber composite diaphragm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+