ವಿವೋ TWS ನಿಯೋ ಟ್ರೂಲಿ ವಾಯರ್‌ಲೆಸ್ ಇಯರ್ ಫೋನ್ ಬಿಡುಗಡೆ!
ಟೆಕ್ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಇಯರ್‌ಫೋನ್‌ಗಳಿಗೆನೂ ಭರವಿಲ್ಲ. ಈಗಾಗಲೇ ಹಲವು ವೈವಿದ್ಯಮಯ ಇಯರ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿ ವಿವೋ ಕಂಪೆನಿ ಕೂಡ ಒಂದಾಗಿದ್ದು, ತನ್ನ ವಿವಿಧ ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಮಾದರಿಯ ಇಯರ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ.

ಹೌದು, ವಿವೋ TWS ನಿಯೋ ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ಗಳು ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದ್ದು, 14.2mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನ ಒಳಗೊಂಡಿದೆ ಎನ್ನಲಾಗ್ತಿದೆ. ಇನ್ನು ಈ ಇಯರ್ ಫೋನ್ ಏರ್‌ಪಾಡ್ಸ್ ತರಹದ ಹೊರ ಕಿವಿ ವಿನ್ಯಾಸವನ್ನು ಒಳಗೊಂಡಿದೆ. ಇನ್ನು ಈ ಇಯರ್ ಫೋನ್ ವಿನ್ಯಾಸ ಹೇಗಿದೆ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

ಇನ್ನು ಈ ವಿವೋ TWS ನಿಯೋ ಟ್ರೂಲಿ ವಾಯರ್‌ಲೆಸ್ 14.2mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನ ಒಳಗೊಂಡಿದೆ. ಇದಲ್ಲದೆ ಬ್ಲೂಟೂತ್ 5.2 ಅನ್ನು ಸಹ ಹೊಂದಿದೆ, ಜೊತೆಗೆ ಈ ಇಯರ್‌ಫೋನ್ ಕ್ವಾಲ್ಕಾಮ್ ಆಪ್ಟಿಎಕ್ಸ್ ಬ್ಲೂಟೂತ್ ಕೊಡೆಕ್ ಅನ್ನು ಬೆಂಬಲಿಸುತ್ತದೆ. ಗೇಮಿಂಗ್ ಮತ್ತು ವಿಡಿಯೋ ಕರೆಗಳಿಗಾಗಿ ಕಡಿಮೆ-ಲೇಟೆನ್ಸಿ ಮೋಡ್ ಮತ್ತು ವಾಯ್ಸ್ ಕರೆಗಳಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ಎರಡು ಮೈಕ್ರೊಫೋನ್ ಸಿಸ್ಟಮ್ ಸಹ ಇದೆ. ಜೊತೆಗೆ ಈ ಇಯರ್‌ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ54-ರೇಟೆಡ್ ಆಗಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜಿಂಗ್ ಮಾಡಬಹುದಾಗಿದೆ. ಇದರ ಬ್ಯಾಟರಿ ಅವಧಿಯು ಒಟ್ಟು 27 ಗಂಟೆಗಳಿರುತ್ತವೆ ಎನ್ನಲಾಗ್ತಿದೆ.

ಇದಲ್ಲದೆ ಈ ಇಯರ್‌ಫೋನ್ AAC ಕೋಡೆಕ್ ಬಳಸುವಾಗ ಈ ಇಯರ್‌ಫೋನ್‌ಗಳಲ್ಲಿನ ಬ್ಯಾಟರಿ ಅವಧಿಯು 5.5 ಗಂಟೆಗಳಿರುತ್ತದೆ ಎಂದು ವಿವೊ ಹೇಳಿಕೊಂಡಿದೆ, ಇದು ಆಪ್ಟಿಎಕ್ಸ್ ಕೊಡೆಕ್‌ನೊಂದಿಗೆ ಸುಮಾರು 4.2 ಗಂಟೆಗಳವರೆಗೆ ಇರುತ್ತದೆ. ಜೊತೆಗೆ ವಾಯ್ಸ್ ಅಸಿಸ್ಟೆಂಟ್ ಅನ್ನು ಸಹ ಬೆಂಬಲಿಸಲಿದೆ. ಸದ್ಯ ಈ ಇಯರ್‌ಫೋನ್‌ಗಳು ಯುವಜನತೆಯ ಆಶಯಕ್ಕೆ ತಕ್ಕಂತೆ ತನ್ನ ವಿನ್ಯಾಸವನ್ನ ಒಳಗೊಂಡಿದೆ. ಅಲ್ಲದೆ ಈ ಇಯರ್‌ಫೊನ್‌ಗಳು ಭಾರತೀಯ ಬಳಕೆದಾರರಿಗೆ ಸೂಕ್ತವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇನ್ನು ಈ ಇಯರ್‌ಫೋನ್ ಕಡಿಮೆ ಲೆಟೆನ್ಸಿ ಮೋಡ್ ಹೊಂದಿದ್ದು, ಉತ್ತಮ ಆಡಿಯೋ ಅನುಭವವನ್ನ ನೀಡಲಿದೆ ಎನ್ನಲಾಗ್ತಿದೆ. ಸದ್ಯ ಈ ವಿವೋ TWS ನಿಯೋ ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್ CNY 499 (ಅಂದಾಜು 5,300 ರೂ.) ಬೆಲೆಯನ್ನ ಹೊಂದಿದ್ದು, ಈ ಹೆಡ್‌ಸೆಟ್ ಇಂಟರ್ ಸ್ಟೆಲ್ಲಾರ್ ಬ್ಲೂ ಮತ್ತು ವೈಟ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications




