ಇನ್- ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇರುವ ವಿವೋ ಫೋನ್ ಮಾರುಕಟ್ಟೆಗೆ!
ವಿವೋ ವಿ11 ಪ್ರೋ ಇಂದು ಭಾರತದಲ್ಲಿ ಬಿಡುಗಡೆಗೊಂಡಿದ್ದು ಇದರ ಬೆಲೆ 25,990 ರುಪಾಯಿ ಆಗಿದೆ. ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಒಳಗೊಂಡು ಬರುತ್ತಿರುವ ಮಿಡ್ ರೇಂಜಿನ ಮೊದಲ ಫೋನ್ ವಿ11 ಪ್ರೋ. ಇದರ ವೈಶಿಷ್ಟ್ಯತೆಗಳ ವಿವರ ಇಲ್ಲಿದೆ
ವಿವೋ ವಿ11 ಪ್ರೋ ಇಂದು ಭಾರತದಲ್ಲಿ ಬಿಡುಗಡೆಗೊಂಡಿದ್ದು ಇದರ ಬೆಲೆ 25,990 ರುಪಾಯಿ ಆಗಿದೆ. ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಒಳಗೊಂಡು ಬರುತ್ತಿರುವ ಮಿಡ್ ರೇಂಜಿನ ಮೊದಲ ಫೋನ್ ವಿ11 ಪ್ರೋ. ಈ ಹಿಂದೆ ಎರಡು ವಿವೋ ಫೋನ್ ಗಳಾದ ಎಕ್ಸ್ 21 ಮತ್ತು ನೆಕ್ಸ್ ಗಳು ಅಂಡರ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಒಳಗೊಂಡು ಬಿಡುಗಡೆಗೊಂಡಿದ್ದವು.

ಟಾಪ್ ಎಂಡ್ ಫೋನ್ ಗಳಲ್ಲಿರುವಂತಹ ಕೆಲವು ವೈಶಿಷ್ಟ್ಯತೆಗಳನ್ನು ವಿ11 ಪ್ರೋ ಹೊಂದಿದ್ದು ಅವುಗಳಲ್ಲಿ IR ಫೇಸ್ ಅನ್ ಲಾಕ್ ಸಪೋರ್ಟ್, ಸೂಪರ್ AMOLED ಡಿಸ್ಪ್ಲೇ, ಎಐ- ಬೇಸ್ಡ್ ಕ್ಯಾಮರಾವನ್ನು ಹಿಂದೆ ಮತ್ತು ಮುಂದೆ ಎರಡು ಕಡೆಗಳಲ್ಲಿ ಹೊಂದಿರುವುದು ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯತೆಗಳು ಸೇರಿವೆ.
ಸೆಪ್ಟೆಂಬರ್ 12 ರಿಂದ ವಿವೋ ವಿ11 ಪ್ರೋ ಫೋನ್ ಭಾರತದಲ್ಲಿ ಮಾರಾಟವಾಗಲಿದೆ. ವಿವೋ ವಿ11 ಪ್ರೋ ಫೋನ್ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅನುಸಾರ ಭಾರತದಲ್ಲೇ ತಯಾರಾದ ಫೋನ್ ಗಳು ಎಂಬುದನ್ನು ವಿವೋ ಸಂಸ್ಥೆ ತಿಳಿಸಿದೆ.

ವಿವೋ ವಿ11 ಪ್ರೋ ಸ್ಟೋರೇಜ್ ಹೀಗಿದೆ-
ಸದ್ಯ ವಿ11 ಪ್ರೋ ಫೋನಿನ ಒಂದು ವೇರಿಯಂಟ್ ಮಾತ್ರ ಬಿಡುಗಡೆಗೊಂಡಿದ್ದು ಅದರಲ್ಲಿ 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಗ್ರಾಹಕರಿಗೆ ಅವಕಾಶವಿರುತ್ತದೆ.

ಯಾವ ಬಣ್ಣಗಳಲ್ಲಿ ವಿವೋ ವಿ11 ಪ್ರೋ ಲಭ್ಯ?
ಎರಡು ಬಣ್ಣಗಳ ವೇರಿಯಂಟ್ ನಲ್ಲಿ ಸ್ಮಾರ್ಟ್ ಫೋನ್ ಭಾರತದಲ್ಲಿ ಲಭ್ಯವಿರುತ್ತದೆ ಒಂದು ಸ್ಟೆರಿ ನೈಟ್ ಬ್ಲಾಕ್ ಮತ್ತು ಡ್ಯಾಜಲಿಂಗ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಫೋನಿನ ಬ್ಯಾಕ್ ಪೆನಲ್ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದ್ದು, ಅದರಲ್ಲಿ ಕಪ್ಪು, ನೀಲಿ ಮತ್ತು ನೇರಳೆ ಬಣ್ಣ ಮಿಶ್ರಿತ ಗ್ಲಿಟರ್ ನ್ನು ಸೇರಿಸಲಾಗಿದ್ದು ಫೋನಿಗೆ ವಿಭಿನ್ನ ಲುಕ್ ನೀಡಿದೆ.

ವಿವೋ ವಿ11 ಡಿಸೈನ್ ಹೇಗಿದೆ ಗೊತ್ತಾ?
ಓಪ್ಪೋ ಎಫ್ 9 ಪ್ರೋ ನಂತೆ ವಿವೋ 11 ಪ್ರೋ ಕೂಡ ಹೊಸ ಸ್ಲಿಮ್ಡ್ ಡೌನ್ ವರ್ಷನ್ ನಲ್ಲಿ ಲಭ್ಯವಿದ್ದು
ಐಫೋನ್ ಎಕ್ಸ್ ನಂತಹ ನಾಚ್ ನ್ನು ಹೊಂದಿರುತ್ತದೆ. ಒಪ್ಪೋ ಫೋನ್ ತನ್ನ ಹೊಸ ವರ್ಷನ್ ನ ನಾಚ್ ಡಿಸ್ಪ್ಲೇಯನ್ನು ವಾಟರ್ ಪ್ರೂಫ್ ಸ್ಕ್ರೀನ್ ಎಂದು ಕರೆದಿತ್ತು. ಆದರೆ ಅದೇ ರೀತಿಯ ಡಿಸ್ಪ್ಲೇಯನ್ನು "ಹ್ಯಾಲೋ ಫುಲ್ ವ್ಯೂ ಡಿಸ್ಪ್ಲೇ" ಎಂದು ಕರೆದಿದೆ.
ವಿವೋ 11 ಪ್ರೋ ವಿವೋ ಸಂಸ್ಥೆ ಹ್ಯಾಲೋ ಫುಲ್ ವ್ಯೂ ಡಿಸ್ಪ್ಲೇಯಲ್ಲಿ ತಯಾರಿಸಿರುವ ಮೊದಲ ಸ್ಮಾರ್ಟ್ ಪೋನ್ ಆಗಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಒಂದು ದಿನ ಪೂರ್ತಿ ಬಳಕೆ ಮಾಡಲು ಈ ಫೋನ್ ಯೋಗ್ಯವಾಗಿದೆ ಎಂದು ವಿವೋ ಸಂಸ್ಥೆ ಹೇಳಿದೆ. ಈ ಫೋನಿನ ಬ್ಯಾಟರಿ ಸಾಮರ್ಥ್ಯವು 3400mAh ಆಗಿದೆ ಮತ್ತು ಫಾಸ್ಟ್ ಚಾರ್ಜಿಂಗ್ ಗೆ ಇದು ಬೆಂಬಲವನ್ನು ನೀಡುತ್ತದೆ.

ವಿವೋ ವಿ11 ವೈಶಿಷ್ಟ್ಯತೆಗಳು:
ಈ ಸ್ಮಾರ್ಟ್ ಫೋನ್ ದೊಡ್ಡದಾದ ಅಂದರೆ 6.41-ಇಂಚಿನ ಸೂಪರ್ AMOLED ಡಿಸ್ಪ್ಲೇ ಜೊತೆಗೆ 2340x1080p ರೆಸಲ್ಯೂಷನ್ ನ್ನು ಹೊಂದಿದ್ದು ಅದರ ಅನುಪಾತ 19:5:9 ಆಗಿದೆ. ಮತ್ತು ಸ್ಕ್ರೀನ್ ಟು ಬಾಡಿ ಅನುಪಾತವು 91.27 ಶೇಕಡಾ ಆಗಿದೆ. ಇದು ಸದ್ಯ ವಿವೋ ಫೋನ್ ಗಳಲ್ಲೇ ಅತ್ಯಂತ ಹೆಚ್ಚಿನ ಮೊತ್ತವಾಗಿದೆ. ಇದುವರೆಗೂ ಇಷ್ಟು ಮೊತ್ತದಲ್ಲಿರುವ ಸ್ಕ್ರೀನ್ ನ್ನು ವಿವೋ ನಿರ್ಮಿಸಿರಲಿಲ್ಲ.
ಮುಂಭಾಗದಲ್ಲಿ ಸ್ಕ್ರೀನ್ ಜೊತೆಗೆ ನಾಚ್ ಇದ್ದು ಸೆಲ್ಫೀ ಕ್ಯಾಮರಾಕ್ಕೆ ಫಿಟ್ ಆಗುವಂತಿದೆ.ಎಡ ಮತ್ತು ಬಲಭಾಗದಲ್ಲಿ ಕ್ರಮವಾಗಿ ಪ್ರಾಕ್ಸಿಮಿಟಿ ಮತ್ತು ಆಂಬಿಯಂಟ್ ಲೈಟ್ ಸೆನ್ಸರ್ ಗಳನ್ನು ಕಾಣಿಸದಂತೆ ಹೋಲ್ ನಲ್ಲಿ ಅಳವಡಿಸಲಾಗಿದೆ. ಇಯರ್ ಪೀಸ್ ಕೂಡ ನಾಚ್ ನ ಮೇಲ್ಬಾಗದಲ್ಲಿ ಇದ್ದು, ಅದನ್ನು ಮೇಲಿನಿಂದ ನೋಡಿದರೆ ಕಾಣಿಸುವುದೇ ಇಲ್ಲ.ವಿವೋ ವಿ11 ಪ್ರೋ 3ಜಿ ಕರ್ವ್ಡ್ ಬ್ಯಾಕ್ ಡಿಸೈನ್ ನ್ನು ಹೊಂದಿದೆ.
ವಿವೋ ಪ್ರೋ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಂಜಿನ್ (ಎಐಇ) ಪ್ರೊಸೆಸರ್ ನ್ನು ಹೊಂದಿದ್ದು 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಡುಯಲ್ ನ್ಯಾನೋ ಸಿಮ್ ಕಾರ್ಡ್ ಗಳಿಗೆ ಬೆಂಬಲ ನೀಡುವ ಈ ಫೋನ್ ಮೈಕ್ರೋ ಎಸ್ ಡಿ ಕಾರ್ಡ್ ಸ್ಲಾಟ್ ನ್ನು ಕೂಡ ಒಳಗೊಂಡಿರುತ್ತೆ. ಈ ಫೋನ್ ಗೇಮ್ ಮೋಡ್ 4.0 ಹೊಂದಿದ್ದು ಗೇಮ್ ಆಡುವವರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ.

ವಿವೋ ವಿ11 ಸಾಫ್ಟವೇರ್ ಗಳು ಹೀಗಿವೆ:
ಸಾಫ್ಟ್ ವೇರ್ ವಿಚಾರಕ್ಕೆ ಬಂದರೆ ವಿವೋ ವಿ11 ಪ್ರೋ ವಿವೋಸ್ ಫನ್ ಟಚ್ ಓಎಸ್ 4.5 ನ ಮೇಲೆ ಆಂಡ್ರಾಯ್ಡ್ 8.1 ಓರಿಯೋದಲ್ಲಿ ರನ್ ಆಗುತ್ತದೆ. ಆದರೆ ಇದುವರೆಗೂ ಆಂಡ್ರಾಯ್ಡ್ 9 ಪೈ ಅಪ್ ಡೇಟ್ ನ್ನು ಇದು ಹೊಂದಲಿದೆಯಾ ಅಥವಾ ಇಲ್ಲವಾ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.
ಈ ಸ್ಮಾರ್ಟ್ ಫೋನ್ ನೇವಿಗೇಷನ್ ಗೆಷ್ಚರ್ ನ್ನು ಹೊಂದಿದ್ದು ನೋಕಿಯಾ 6.1 ಪ್ಲಸ್ ಮತ್ತು ಒನ್ ಪ್ಲಸ್ 6 ಹಾಗೂ ಇತರೆ ಫೋನ್ ಗಳಲ್ಲಿ ಬರುವಂತಹ ನಾಚ್ ಹೈಡ್ ಮಾಡುವ ಆಯ್ಕೆಯನ್ನು ಇದು ಒಳಗೊಂಡಿದೆ. ಐಫೋನ್ ಎಮೋಜಿಗಳಂತೆ ವಿ11 ಪ್ರೋ ನಲ್ಲೂ ಕೂಡ ಫನ್ಎಮೋಜಿಗಳು ಲಭ್ಯವಿದೆ.

ಕ್ಯಾಮರಾ ವೈಶಿಷ್ಟ್ಯತೆಗಳು:
ಇನ್- ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಜೊತೆಗೆ ವಿವೋ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಅತ್ಯುತ್ತಮ ಕ್ಯಾಮರಾಗಳನ್ನು ಇದು ಒಳಗೊಂಡಿದೆ. ವಿ11 ಪ್ರೋ ನ ಹಿಂಭಾಗದ ಪೆನಲ್ ನಲ್ಲಿ ಡುಯಲ್ ಪಿಕ್ಸಲ್ ಕ್ಯಾಮರಾವಿದ್ದು ಪ್ರೈಮರಿ ಕ್ಯಾಮರಾವು 12MP ಜೊತೆಗೆ f/1.8 ಎಪರ್ಚರ್ ಮತ್ತು 1.28-micron ಪಿಕ್ಸಲ್ ನ್ನು ಹೊಂದಿದೆ. ಆದರೆ ಕ್ಯಾಮರಾ ವೈಶಿಷ್ಟ್ಯತೆಗಳಲ್ಲಿ ನೀವು 24MP ಗೆ ಸ್ವಿಚ್ ಆಗಬಹುದು ಎಂದು ಹೇಳಲಾಗಿದೆ. ಹೆಚ್ಚುವರಿ ವಿವರಗಳನ್ನು ಸೇರಿಸುವ ಮೂಲಕ ಛಾಯಾಚಿತ್ರದ ರೆಸಲ್ಯೂಷನ್ ಬಗೆಗಿನ ವಿವರ ಇದಾಗಿರುವ ಸಾಧ್ಯತೆ ಇದೆ.
ಸೆಕೆಂಡರಿ ಕ್ಯಾಮರಾವು 5MP ಸೆನ್ಸರ್ ಜೊತೆಗೆ f/2.4 ಅಪರ್ಚರ್ ನಲ್ಲಿ ಪೊಟ್ರೈಟ್ ಶಾಟ್ ಗಳಿಗೆ ನೆರವು ನೀಡುತ್ತದೆ.ಇದರಲ್ಲಿ ಹಲವು ಕ್ಯಾಮರಾ ಮೋಡ್ ಗಳು ಲಭ್ಯವಿದ್ದು ಎಆರ್ ಸ್ಟಿಕ್ಕರ್ಸ್, ಪನೋರಮಾ, HDR ಮತ್ತು Doc - ಇದು ನಿಮಗೆ ಪಿಕ್ಚರ್ ನಲ್ಲಿ ಟೆಕ್ಸ್ಟ್ ಆಡ್ ಮಾಡಲು ಮತ್ತು ಎಡಿಟ್ ಮಾಡಲು ಅನುಕೂಲ ಮಾಡುತ್ತದೆ.
ಕ್ಯಾಮರಾ ಆಪ್ ಗಳು ಗೂಗಲ್ ಲೆನ್ಸ್ ಸಪೋರ್ಟ್ ನೊಂದಿಗೆ ಬರುತ್ತದೆ. ಇನ್ನು ಮುಂಭಾಗದಲ್ಲಿ ವಿವೋ 11 ಪ್ರೋ ನಲ್ಲಿ 25ಎಂಪಿ ಕ್ಯಾಮರಾವಿದ್ದು ಅದರ ಎಪರ್ಚರ್ f/0.2 ಆಗಿದೆ. ಇದು ಕೂಡ ಹಲವು ಮೋಡ್ ಗಳಿಗೆ ಬೆಂಬಲ ನೀಡುತ್ತದೆ ಉದಾಹರಣೆಗೆ ಗ್ರೂಪ್ ಸೆಲ್ಫೀ, ಪ್ರೊಫೆಷನಲ್, ಎಐ ಸ್ಟಿಕ್ಕರ್ಸ್, ಸೆಲ್ಫೀ ಲೈಟಿಂಗ್ ಮತ್ತು ಇತ್ಯಾದಿ.


Click it and Unblock the Notifications








