ಭಾರತದಲ್ಲಿ ವಿವೋ ವಿ17 ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ 22,990ರೂ.!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ವಿವೂ ತನ್ನ ಹೊಸ ಆವತರಣಿಕೆಯಾದ ವಿವೋ ವಿ 17 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಟೆಕ್‌ ಲೋಕದಲ್ಲಿ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್ ಎಂಬ ಖ್ಯಾತಿ ಗಳಿಸಿರೋ ವಿವೋ ಸ್ಮಾರ್ಟ್‌ಫೋನ್‌ ಪ್ರಿಯರ ನಿರೀಕ್ಷೆಯಂತೆಯೆ ವಿವೋ ವಿ 17 ಪ್ರೊ ನೂತನ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ.

ವಿವೋ

ಹೌದು ವಿವೋ ಕಂಪೆನಿ ತನ್ನ ಹೊಸ ಆವೃತ್ತಿಯಾದ ವಿವೋ ವಿ 17 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ವಿವೋ ಕಂಪೆನಿ ಭಾರತದಲ್ಲಿ ಈಗಾಗ್ಲೆ ಯಶಸ್ವಿ ಐದು ವರ್ಷಗಳನ್ನ ಪೂರೈಸಿದ್ದು ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ನೀಡುತ್ತಲೇ ಬಂದಿದೆ. ಸದ್ಯ ವಿವೋ ವಿ17 ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದು 8GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನ ಒಳಗೊಂಡಿದೆ. ಹಾಗಾದ್ರೆ ವಿವೋವಿ17 ಸ್ಮಾರ್ಟ್‌ಫೋನ್‌ನ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ

ಡಿಸ್‌ಪ್ಲೇ

ಡಿಸ್‌ಪ್ಲೇ

ವಿವೋ ವಿ17 ಸ್ಮಾರ್ಟ್‌ಫೋನ್‌ 2400 x 1080 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಪ್ಲಾಸ್ಟಿಕ್ ಫ್ರೇಮ್ ಹೊಂದಿದ 6.44-ಇಂಚಿನ ಫುಲ್‌ ಎಚ್‌ಡಿ +ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಪಂಚ್-ಹೋಲ್ ಡಿಸ್ಪ್ಲೇ ವಿನ್ಯಾಸವನ್ನ ಹೊಂದಿದ್ದು, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೆ ಡಿಸ್‌ಪ್ಲೇ 20: 9 ಅನುಪಾತವನ್ನು ಹೊಂದಿದೆ. ಅಷ್ಟೇ ಅಲ್ಲ ಸೂಪರ್‌ AMOLED ಡಿಸ್‌ಪ್ಲೇ ಇದಾಗಿರೊದ್ರಿಂದ ಉತ್ತಮ ವಿಡಿಯೋ ಪ್ರದರ್ಶನವನ್ನ ಕಾಣಬಹುದಾಗಿದೆ.ಇದು 20: 9 ಆಕಾರ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ವಿವೋ ವಿ17 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 675 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು ಫಂಟೌಚ್‌ ಒಎಸ್9.2 ಬೆಸ್ಟ್‌ ಆಂಡ್ರಾಯ್ಡ್‌9OS ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 8GB of RAM ಮತ್ತು 128GB ಶೇಖರಣಾ ಸಾಮರ್ಥ್ಯ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ ಮೂಲಕ 128GB ರವೆರಗೂ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಆಯ್ಕೆಯನ್ನು ನೀಡಿದೆ.

ಕ್ಯಾಮೆರಾ

ಕ್ಯಾಮೆರಾ

ವಿವೋ ವಿ 17 ಕ್ವಾಡ್ ಕ್ಯಾಮೆರಾ ಸೆಟ್‌ಆಪ್ ಅನ್ನು ಹೊಂದಿದ್ದು ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು f/ 1.8 ಲೆನ್ಸ್‌ ಮತ್ತು ಫೇಸ್ ಡಿಟೆಕ್ಷನ್ ಆಟೋಫೋಕಸ್ ನೀಡುತ್ತದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಹೊಂದಿದ್ದು ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಲೆನ್ಸ್‌ ಹೊಂದಿದೆ, ಇನ್ನು 3 ಮತ್ತು 4ನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿದೆ. ಅಲ್ಲದೆ ಸೆಲ್ಫಿ ಕ್ಯಾಮೆರಾ 32ಮೆಗಾಫಿಕ್ಸೆಲ್‌ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಪ್ಯಾಕ್ಆಪ್‌ ಹೊಂದಿದೆ. ಜೊತೆಗೆ ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ಉಪಯೋಗಿಸಲು ಆಂಟಿ-ಫ್ಲಿಕರ್ ತಂತ್ರಜ್ಞಾನವೂ ಇದೆ. ಅಲ್ಲದೆ ಸೂಪರ್ ನೈಟ್ ಮೋಡ್, 4 ಜಿ VoLTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಕನೆಕ್ಟಿವಿಟಿ ಆಯ್ಕೆಗಳು ಲಭ್ಯವಿದೆ. ಅಲ್ಲದೆ ಅಲ್ಟ್ರಾ ಸ್ಟೇಬಲ್ ವಿಡಿಯೋ, ಪೋರ್ಟ್ರೇಟ್ ಬೊಕೆ, ಪೋರ್ಟ್ರೇಟ್ ಲೈಟ್ ಎಫೆಕ್ಟ್ಸ್, ಎಆರ್ ಸ್ಟಿಕ್ಕರ್‌ಗಳು, ಪೋಸ್ ಮಾಸ್ಟರ್, ಎಐ ಮೇಕಪ್ ಮತ್ತು ಎಐ ಎಚ್‌ಡಿಆರ್ ಅವಕಾಶವಿದೆ ಜೊತೆಗೆ ಸೂಪರ್ ನೈಟ್ ಸೆಲ್ಫಿ, ಎಐ ಎಚ್‌ಡಿಆರ್, ಮತ್ತು ಲಿಂಗ ಪತ್ತೆ ಮುಂತಾದ ಸೆಲ್ಫಿ-ಫೋಕಸ್ಡ್ ವೈಶಿಷ್ಟ್ಯಗಳಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ವಿವೋ ವಿ17 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್, ಅಮೆಜಾನ್ ಇಂಡಿಯಾ, ಮತ್ತು ಇತರ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಇದರ ಬೆಲೆ 22,990 ರೂ ಆಗಿದ್ದು. ಗ್ಲೇಸಿಯರ್‌ ಐಸ್‌ ಮತ್ತು ಮಿಡ್‌ನೈಟ್‌ ಓಸಿಯನ್‌ ಬಣ್ಣಗಳಲ್ಲಿ ದೊರೆಯಲಿದೆ.

Best Mobiles in India

English summary
Vivo V17 comes with a punch hole display and is powered by Qualcomm Snapdragon 675 SoC. With V17, Vivo wants to expand its market share in the mid-range price segment.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X