ವಿವೋ v19 ಸ್ಮಾರ್ಟ್‌ಫೋನ್‌ನಲ್ಲಿದೆ ವೃತ್ತಿಪರ ಫೋಟೋ ತಂತ್ರಜ್ಞಾನ!

|

ಚೀನಾ ಮೂಲದ ವಿವೊ ಸ್ಮಾರ್ಟ್‌ಫೋನ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಉತ್ತಮ ಮಾರುಕಟ್ಟೆಯನ್ನೇ ಹೊಂದಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ-ದರ್ಜೆಯ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಮೊಬೈಲ್ ಕ್ಯಾಮೆರಾ ಟೆಕ್ನಾಲಜಿಯಲ್ಲಿ ಇತರೆ ಕಂಪೆನಿಗಳಿಗಿಂತ ಮುಂಚೂಣಿಯಲ್ಲಿದೆ, ಅತ್ಯುತ್ತಮವಾದ ಹಾರ್ಡ್‌ವೇರ್ ಮತ್ತು ಅತ್ಯಾಧುನಿಕ AI ಸಾಫ್ಟ್‌ವೇರ್ ಅನ್ನು ಸಂಯೋಜಿಸುತ್ತಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಳ್ಳುತ್ತಿದೆ. ಇದೀಗ ವಿವೊ ಸ್ಮಾರ್ಟ್‌ಫೋನ್‌ ಕಂಪೆನಿ ವಿವೋ v19 ಸ್ಮಾರ್ಟ್‌ಫೋನ್‌ನಲ್ಲಿ ಅತ್ಯುತ್ತಮ ಸೆಲ್ಫಿ ಕ್ಯಾಮೆರಾವನ್ನ ನೀಡಿದ್ದು, ಹೊಸ ಸಂಚಲನ ಸೃಷ್ಟಿಸಿದೆ.

ಹೌದು

ಹೌದು, ವಿವೋ v19 ಸ್ಮಾರ್ಟ್‌ಫೋನ್‌ ಹಗಲ ಇರುಳು ಬೆಳಕನ್ನು ಲೆಕ್ಕಿಸದೆ ಪ್ರತಿ ಕ್ಯಾಮೆರಾ ಶಾಟ್ ಅನ್ನು ಪರಿಪೂರ್ಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 32 + 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಇದು ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, 48 ಮೆಗಾಪಿಕ್ಸೆಲ್‌ AI ಟೆಕ್ನಾಲಜಿಯ ಪ್ರೈಮರಿ ಕ್ಯಾಮೆರಾವನ್ನ ಒಳಗೊಂಡಿದೆ. ಈ ಕ್ಯಾಮೆರಾ ಸೆಟಪ್‌ಗಳನ್ನು ಬೆಳಕಿನ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ ನೀವು ಸ್ಟುಡಿಯೋ ದರ್ಜೆಯ ಸೆಲ್ಫಿಗಳನ್ನು ಸಹ ತೆಗೆಯಬಹುದಾಗಿದೆ. ಇದನ್ನ ಹೇಗೆ ಉಪಯೋಗಿಸಬಹುದು ಅನ್ನೊ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

ಸ್ಟುಡಿಯೋ-ಗ್ರೇಡ್ ಸೆಲ್ಫಿ

ಸ್ಟುಡಿಯೋ-ಗ್ರೇಡ್ ಸೆಲ್ಫಿ

ಇನ್ನು ವಿವೋ V19 ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ಬೆಳಕಿನಲ್ಲು ಸ್ಟುಡಿಯೀ ಗ್ರೇಡ್‌ ಸೆಲ್ಫಿಗಳನ್ನ ತೆಗೆದುಕೊಳ್ಳುವ ಸಾಮರ್ಥ್ಯವನ್ನ ನೀಡಲಾಗಿದೆ. ನಿವು ಯಾವುದೇ ಮಾದರಿಯ ಸೆಲ್ಫಿಗಳನ್ನ ತೆಗೆದುಕೊಳ್ಳುವಾಗ ಬೆಳಕಿನ ಪರಿಸ್ಥಿತಿಗಳ ಬಗ್ಗೆ ಯೋಚಿಸುವ ಅವಶ್ಯಕತೆ ಇಲ್ಲ. ಇದು ಕಡಿಮೆ-ಬೆಳಕಿನಲ್ಲೂ ಸಹ ಉತ್ತಮವಾದ ಫೋಟೊ ಕ್ಲಿಕ್ಕಿಸಬಹುದು. ಇದಕ್ಕಾಗಿ ಈ ಸ್ಮಾರ್ಟ್‌ಫೋನ್‌ನಲ್ಲಿ 'ಸೂಪರ್ ನೈಟ್ ಸೆಲ್ಫಿ' ಮೋಡ್‌ ಅನ್ನು ನೀಡಲಾಗಿದೆ. ಈ ಮೋಡ್ ಅನ್ನು ಆಕ್ಟಿವ್‌ ಮಾಡಿದ ನಂತರ ಸೆಲ್ಫಿ ಕ್ಲಿಕ್‌ ಮಾಡಿದರೆ ಉತ್ತಮ ಪೋಟೋ ಕ್ಲಿಕ್ಕಿಸಬಹುದಾಗಿದೆ. ಇದಲ್ಲದೆ ಇದರಲ್ಲಿ 'ಮಲ್ಟಿಪಲ್-ಎಕ್ಸ್‌ಪೋಸರ್' ಟೆಕ್ನಾಲಜಿಯನ್ನ ನಿಡಲಾಗಿದ್ದು, ಇದರ ಮೂಲಕ ಕಡಿಮೆ-ಬೆಳಕಿನ ಸೆಲ್ಫಿಗಳಲ್ಲಿ ಹೆಚ್ಚಿನ ಮಟ್ಟದ ಬೆಳಕನ್ನು ಕಾಣುವಂತೆ ಮಾಡಬಹುದಾಗಿದೆ.

Aura ಸ್ಕ್ರೀನ್ ಲೈಟ್

Aura ಸ್ಕ್ರೀನ್ ಲೈಟ್

ಈ ಸ್ಮಾರ್ಟ್‌ಫೋನ್‌ ನಲ್ಲಿ Aura ಸ್ಕ್ರೀನ್ ಲೈಟ್ ಫೀಚರ್ಸ್‌ ಪ್ರಮುಖವಾಗಿದ್ದು, ಇದು ಫೋನ್‌ನ ಡಿಸ್‌ಪ್ಲೇ ಅನ್ನು ಇನ್ನಷ್ಟು ಅನುಕೂಲಕರ ಬೆಳಕಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ಫೋನ್‌ನ ಸೆನ್ಸಾರ್‌ ಕಡಿಮೆ-ಬೆಳಕನ್ನು ಪತ್ತೆ ಮಾಡಿದಾಗ, ಇದು ಪರಿಪೂರ್ಣ ಸೆಲ್ಫಿಯನ್ನು ತೆಗೆಯಲು ನಿಮಗೆ ಸಹಾಯ ಮಾಡಲು ಡಿಸ್ಪ್ಲೇ ಸುತ್ತಲೂ ಸಮತೋಲಿತ ಬ್ರೈಟ್‌ನೆಶ್‌ ಅನ್ನು ನಿಡುತ್ತದೆ. ಇದರಿಂದ ನೀವು ಅತ್ಯುತ್ತಮ ಸೆಲ್ಫಿ ಕ್ಲಿಕಿಸಲು ಸಾಧ್ಯವಾಗುತ್ತದೆ.

ಸೂಪರ್ ವೈಡ್-ಆಂಗಲ್ ಸೆಲ್ಫಿ (105 ಡಿಗ್ರಿ)

ಸೂಪರ್ ವೈಡ್-ಆಂಗಲ್ ಸೆಲ್ಫಿ (105 ಡಿಗ್ರಿ)

ಇನ್ನು ಇದರಲ್ಲಿ ಪ್ರಮುಕವಾದ ಮತ್ತೊಮದು ಅಂಶವೆಂದರೆ ಅದು ಅಲ್ಟ್ರಾ ವೈಡ್-ಆಂಗಲ್ ಸೆಲ್ಫಿ. ನಿಜ ಅಲ್ಟ್ರಾ ವೈಡ್‌ ಆಂಗಲ್‌ ಸೆಲ್ಪಿಗಳನ್ನು ತೆಗೆದುಕೊಳ್ಳುವುದಕ್ಕೆ ಉತ್ತಮ ಅವಕಾಶವನ್ನ ನೀಡಲಾಗಿದೆ ಈ ಸ್ಮಾರ್ಟ್‌ಫೋನ್‌ನ 8 ಮೆಗಾಪಿಕ್ಸೆಲ್‌ ವೈಡ್-ಆಂಗಲ್ ಲೆನ್ಸ್ ಕ್ಯಾಮೆರಾ ಪಕ್ಕಾ ಕ್ಲಿಯರೆನ್ಸ್ ಹೊಂದಿರುವ 105-ಡಿಗ್ರಿ ಫೀಲ್ಡ್-ಆಫ್-ವ್ಯೂ ಸೆಲ್ಫಿಗಳನ್ನು ಸೆರೆಹಿಡಿಯುತ್ತದೆ. ಇದು ನಿಮ್ಮ ಗ್ರೂಪ್‌ ಫೋಟೋಗಳನ್ನ ಸ್ಪಷ್ಟವಾಗಿ ಸೆರೆಹಿಡಿಯಲ್ಲು ಸೂಕ್ತವಾಗಿದೆ. ಇನ್ನು ಈ ಸೂಪರ್ ವೈಡ್-ಆಂಗಲ್ ಕ್ಯಾಮೆರಾ AI ಅಲ್ಗಾರಿದಮ್ ಅನ್ನು ಬೆಂಬಲಿಸುತ್ತದೆ.

ವೃತ್ತಿಪರ ಫೋಟೋ ತೆಗೆಯುವ ಸಾಮರ್ಥ್ಯ

ವೃತ್ತಿಪರ ಫೋಟೋ ತೆಗೆಯುವ ಸಾಮರ್ಥ್ಯ

ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾದ ಫೊಟೋಗಳು ವೃತ್ತಿಪರ ಕ್ಯಾಮೆರಾದಲ್ಲಿ ತೆಗೆದಂತೆಯೇ ಕಾಣಿಸುತ್ತದೆ. ಆದರಿಂದ ನಿವು ಈ ಸ್ಮಾರ್ಟ್‌ಫೋನ್‌ ಮೂಲಕ ವೃತ್ತಿಪರ ದರ್ಜೆಯ ಫೋಟೋಗಳನ್ನ ಕ್ಲಿಕ್ಕಿಸಬಹುದಾಗಿದೆ. ಅಲ್ಲದೆ ಇಂತಹ ಫೋಟೋಗಳಿಗಾಗಿಯೇ ಫೋನ್‌ನ ಕ್ಯಾಮೆರಾ ಅಪ್ಲಿಕೇಶನ್ ನಲ್ಲಿ ಕೆಲವು ಅನನ್ಯ ಮೋಡ್‌ಗಳನ್ನು ನೀಡಲಾಗಿದೆ. ಇದು ನಿಮ್ಮ ಪೋಟೋಗ್ರಫಿ ಇನ್ನಷ್ಟು ಉತ್ತಮ ಗೊಳಿಸಲು ಸಹಾಯ ಮಾಡುತ್ತದೆ. ಫೋಟೊ ತೆಗೆಯುವಾಗ ಪರಿಪೂರ್ಣ ಬಾಡಿಯನ್ನ ಕವರ್‌ ಮಾಡಲು 'ಪೋಸ್ ಮಾಸ್ಟರ್' ನಿಮಗೆ ಮಾರ್ಗದರ್ಶನ ನೀಡುತ್ತದೆ. ಚಿತ್ರವನ್ನು ತೆಗೆದುಕೊಂಡ ನಂತರ ಬ್ಲರೆ್‌ ಆಗಿರುವುದನ್ನ ಸರಿಹೊಂದಿಸಲು 'ಶಾಟ್ ರಿಫೋಕಸ್' ನಿಮಗೆ ಅವಕಾಶ ನೀಡುತ್ತದೆ. ಅಲ್ಲದೆ ಪೋಟೋದ ಸೌಂದರ್ಯ ಹೆಚ್ಚಿಸಲು 'ಆರ್ಟ್ ಪೋರ್ಟ್ರೇಟ್' ಮೋಡ್ ನಿಮಗೆ ಸಹಾಯ ಮಾಡುತ್ತದೆ.

48 ಎಂಪಿ ಎಐ-ಕ್ವಾಡ್-ರಿಯರ್ ಕ್ಯಾಮೆರಾ

48 ಎಂಪಿ ಎಐ-ಕ್ವಾಡ್-ರಿಯರ್ ಕ್ಯಾಮೆರಾ

ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಕೇವಲ ಸೆಲ್ಫಿ ಕ್ಯಾಮೆರಾ ಮಾತ್ರ ವಿಶೇಷತೆಯನ್ನ ಹೊಂದಿಲ್ಲ. ಬದಲಿಗೆ ರಿಯರ್‌ಕ್ವಾಡ್‌ ಕ್ಯಾಮೆರಾ ಕೂಡ ಉತ್ತಮವಾದ ವಿನ್ಯಾಸವನ್ನ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 48ಮೆಗಾಪಿಕ್ಸೆಲ್ ಹೊಂದಿರುವ ಪ್ರೈಮರಿ ಕ್ಯಾಮೆರಾ, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಡಿಕೇಟೆಡ್ ಡೆಪ್ತ್ ಸೆನ್ಸಾರ್ ಹೊಂದಿದೆ. ಈ ಕ್ಯಾಮೆರಾಗಳು ನೀವು ಶಟರ್ ಬಟನ್ ಕ್ಲಿಕ್ ಮಾಡಿದಾಗಲೆಲ್ಲಾ ಫೋನ್‌ನ ಕ್ಯಾಮೆರಾ ಅಪ್ಲಿಕೇಶನ್ ಅತ್ಯುತ್ತಮ ಶಾಟ್ ಸಂಯೋಜಿಸಲು ಅಗತ್ಯವಿರುವ ಎಲ್ಲ ಅಂಶಗಳನ್ನು ನೀಡುತ್ತದೆ. ಇವುಗಳಲ್ಲಿ AI ಸೂಪರ್ ನೈಟ್ ಮೋಡ್, 120-ಡಿಗ್ರಿ ಅಲ್ಟ್ರಾ-ವೈಡ್-ಆಂಗಲ್ ಲ್ಯಾಂಡ್‌ಸ್ಕೇಪ್ ಶಾಟ್‌ಗಳು, ಮ್ಯಾಕ್ರೋ ಶಾಟ್‌ಗಳನ್ನು ನೀಡಲಾಗಿದೆ.

ಬೆಸ್ಟ್-ಇನ್-ಕ್ಲಾಸ್ ಡಿಸ್‌ಪ್ಲೇ

ಬೆಸ್ಟ್-ಇನ್-ಕ್ಲಾಸ್ ಡಿಸ್‌ಪ್ಲೇ

ಇದರಲ್ಲಿ ಸೆಲ್ಪಿ ಕ್ಯಾಮೆರಾ ಉತ್ತಮವಾಗಿ ಮೂಡಿಬರಲು ಡಿಸ್‌ಪ್ಲೇ ಕೂಡ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ 'ಡ್ಯುಯಲ್ ಐವ್ಯೂ ಡಿಸ್ಪ್ಲೇ' ಅನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 6.44-ಇಂಚಿನ ಎಲ್ಐವಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಇದು 100% DCI-P3 ಕಲರ್‌ ಹರವುಗಳೊಂದಿಗೆ ಬರುತ್ತದೆ. ಇದರಲ್ಲಿ HDR10- ಹೊಂದಿರುವ 800 ನಿಟ್‌ ಬ್ರೈಟ್‌ನೆಶ್‌ ರೇಟ್‌ ಅನ್ನು ಹೊಂದಿದೆ. ಇದರಲ್ಲಿ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಸಾಟಿಯಿಲ್ಲದ ವೀಕ್ಷಣೆಯ ಅನುಭವಕ್ಕಾಗಿ ಗರಿಷ್ಠ ಹೊಳಪಿನ ಮಟ್ಟವು 1200 ನಿಟ್‌ಗಳಷ್ಟು ಮುಟ್ಟುತ್ತದೆ.

ಪವರ್‌ ಫುಲ್‌ ಪ್ರೊಸೆಸರ್‌

ಪವರ್‌ ಫುಲ್‌ ಪ್ರೊಸೆಸರ್‌

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 712 AIE S0C ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು 8GB RAM ಮತ್ತು 128GB / 256GB ಆನ್-ಬೋರ್ಡ್ ಸ್ಟೋರೇಜ್‌ ಅನ್ನು ಹೊಂದಿದೆ. ಇವುಗಳಿಂದಾಗಿ ಯಾವುದೇ ಕಾರ್ಯಕ್ಷಮತೆ ಮಂದಗತಿಯಿಲ್ಲದೆ ನೀವು ಅನೇಕ ಅಪ್ಲಿಕೇಶನ್‌ಗಳನ್ನು ಚಲಾಯಿಸಬಹುದು ಮತ್ತು ವಿ 19 ನಲ್ಲಿ ಅತ್ಯಂತ ಜನಪ್ರಿಯ ಆಟದ ಶೀರ್ಷಿಕೆಗಳನ್ನು ಪ್ಲೇ ಮಾಡಬಹುದು. ಮಂದಗತಿಯಿಲ್ಲದ ಕಾರ್ಯಕ್ಷಮತೆಗೆ ಪೂರಕವಾಗಿ 33W ವಿವೋ ಫ್ಲ್ಯಾಶ್‌ಚಾರ್ಜ್ 2.0 ತಂತ್ರಜ್ಞಾನವಿದೆ. ಫಾಸ್ಟ್ ಚಾರ್ಜ್ ತಂತ್ರಜ್ಞಾನವು ಫೋನ್‌ನ 4,500 ಎಮ್‌ಎಹೆಚ್ ಬ್ಯಾಟರಿ ಸೆಲ್ ಅನ್ನು ಕೇವಲ 30 ನಿಮಿಷಗಳಲ್ಲಿ 0% ರಿಂದ 54% ಗೆ ರೀಚಾರ್ಜ್ ಮಾಡಲು ಸಮರ್ಥವಾಗಿದೆ.

Most Read Articles
Best Mobiles in India

English summary
The vivo V19 has been crafted to perfect every camera shot, irrespective of the light situations.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X