Home
ಸುದ್ದಿಜಾಲ

ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಎಂಟ್ರಿ ನೀಡಲಿದೆ ವಿವೋ V20 ಸರಣಿ!

ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ವಿವೋ ಸಂಸ್ಥೆ ಹೆಸರುವಾಸಿಯಾಗಿದೆ. ಹೊಸ ಮಾದರಿಯ ಕ್ಯಾಮೆರಾ ಫಿಚರ್ಸ್‌, ಡಿಸ್‌ಪ್ಲೇ ವಿನ್ಯಾಸ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ವಿವೋ ಸೈ ಎನಿಸಿಕೊಂಡಿದೆ. ಇನ್ನು ಈಗಾಗಳೇ ಹಲವು ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿರುವ ವಿವೋ ತನ್ನ ವಿವೋ V20 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ವಿವೋ V20 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಂಬಂದಿಸಿದಂತೆ ವಿವೋ ತನ್ನ ಟ್ವಿಟ್ಟರ್‌ ನಲ್ಲಿ ಶಾರ್ಟ್‌ ಟೀಸರ್ ವೀಡಿಯೊವನ್ನು ಪೋಸ್ಟ್ ಮಾಡಿದೆ.

ವಿವೋ

ಹೌದು, ವಿವೋ ಕಂಪೆನಿ ತನ್ನ ವಿವೋ V20 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಶೀಘ್ರದಲ್ಲೇ ಭಾರತದಲ್ಲಿ ಪರಿಚಯಿಸಲಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಫೋನ್‌ಗಳು "ಅಲ್ಟ್ರಾ-ಸ್ಲಿಮ್" ಆಗಿರುತ್ತವೆ ಎಂದು ವೀಡಿಯೊ ಟೀಸರ್ ಸೂಚನೆ ನೀಡಿದೆ. ಅಲ್ಲದೆ ಟೀಸರ್‌ ವೀಡಿಯೊದ ಟೈಟಲ್‌ ಕೂಡ ಸಾಕಷ್ಟು ಗಮನ ಸೆಳೆದಿದೆ. "Tick, tock. Tick, tock. ದೊಡ್ಡ ಸ್ಮಾರ್ಟ್‌ಫೋನ್‌ಗಳ ಸಮಯ ಮುಗಿದಿದೆ! ಅಲ್ಟ್ರಾ-ಸ್ಲಿಮ್ ಸ್ಮಾರ್ಟ್‌ಫೋನ್‌ಗಳ ಅನುಭವವನ್ನು ಪಡೆದುಕೊಳ್ಳಲು ನೀವು ಸಿದ್ಧರಿದ್ದೀರಾ? ಎಂದು ಹೇಳಲಾಗಿದೆ. ಈ ಮೂಲಕ ಈ ಸ್ಮಾರ್ಟ್‌ಫೋನ್‌ ಸಾಕಷ್ಟು ಅಲ್ಟ್ರಾ ಸ್ಲಿ ಮ್‌ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ವಿವೋ

ಇನ್ನು ವಿವೋ ತನ್ನ ಟ್ವಿಟ್ಟರ್ ಪ್ರೊಫೈಲ್ ಪೇಜ್‌ನಲ್ಲಿ ಕವರ್ ಫೋಟೋವನ್ನು ಸಹ ಬದಲಾಯಿಸಿದೆ. ಇದು ವಿವೋ V20 ಸರಣಿಯ ಸ್ಮಾರ್ಟ್‌ಫೋನ್‌ ಕಪ್ಪು, ಬಿಳಿ ಮತ್ತು ನೀಲಿ-ನೇರಳೆ ಗ್ರೇಡಿಯಂಟ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂಬುಂದನ್ನು ಸೂಚಿಸುತ್ತದೆ. ಸದ್ಯ ಲಭ್ಯ ಮಾಹಿತಿ ಪ್ರಕಾರ ವಿವೊ V20 ಸರಣಿಯು ವಿವೋ V20 ಪ್ರೊ, ವಿವೊ V20, ಮತ್ತು ವಿವೊ V 20SE ಎಂಬ ಮೂರು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ.

ವಿವೋ

ಇದರಲ್ಲಿ ವಿವೋ V20SE ಮತ್ತು ವಿವೊ V20 ಪ್ರೊ ಅನ್ನು ಈಗಾಗಲೇ ಕ್ರಮವಾಗಿ ಮಲೇಷ್ಯಾ ಮತ್ತು ಥೈಲ್ಯಾಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು 7.38 ಮಿಮೀ ಥಿಕ್‌ನೆಸ್‌ ಅನ್ನು ಹೊಂದಿವೆ. ಇದೀಗ ಭಾರತದಲ್ಲಿ ಇದೇ ರೂಪಾಂತರದಲ್ಲಿ ಬಿಡುಗಡೆ ಆಗಲಿದೆಯಾ ಅನ್ನೊ ಕುತೂಹಲ ಇದೆ.

ಟ್ರಿಪಲ್‌

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಇದರಲ್ಲಿ 44 ಮೆಗಾಪಿಕ್ಸೆಲ್‌ ಸೆನ್ಸಾರ್ ಸಾಮರ್ಥ್ಯದ ಐ ಆಟೋಫೋಕಸ್‌, ಸೂಪರ್‌ ನೈಟ್‌ ಮೋಡ್‌ ಮತ್ತು 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಹೊಂದಿರಲಿದೆ ಎಂದು ಊಹಿಸಲಾಗಿದೆ. ಇದಲ್ಲದೆ 4K ಸೆಲ್ಫಿ ವಿಡಿಯೋ ಐ ಆಟೋಫೋಕಸ್ ಅನ್ನು ಬೆಂಬಲಿಸುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್ ಮೂಲಕ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಆದರೆ ಈ ಡಿವೈಸ್‌ ಭಾರತದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
Vivo has teased the launch of the Vivo V20 series in India. On Twitter, Vivo India posted a short teaser video teasing the new series of smartphone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+