Home
ಸುದ್ದಿಜಾಲ

ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್‌ಫೋನಿನ ಲಾಂಚ್‌ ಡೇಟ್‌ ಬಹಿರಂಗ!

ವಿವೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಉತ್ತಮವಾದ ಮಾರುಕಟ್ಟೆಯಿದೆ. ತನ್ನ ಆಕರ್ಷಕ ಕ್ಯಾಮೆರಾ ಫೀಚರ್ಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರನ್ನು ಸೆಳೆದಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಭಾರತದಲ್ಲಿ ತನ್ನ "V" ಸರಣಿಯ ಹೊಸ ಸ್ಮಾರ್ಟ್‌ಫೋನ್‌ ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕ ಇದೀಗ ಅಧಿಕೃತವಾಗಿ ಬಹಿರಂಗವಾಗಿದೆ.

ವಿವೋ V25 ಪ್ರೊ

ಹೌದು, ವಿವೋ ಕಂಪೆನಿ ತನ್ನ ಹೊಸ ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌ ಡೇಟ್‌ ಫಿಕ್ಸ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಇದೇ ಆಗಸ್ಟ್ 17 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಎಂಟ್ರಿಯಾಗಲಿದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ ಪೂರ್ವವೀಕ್ಷಣೆ ಮಾಡುವ ಶಾರ್ಟ್‌ ವೀಡಿಯೊ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಮೀಸಲಾದ ವೆಬ್‌ಪೇಜ್‌ನಲ್ಲಿ ಆನ್‌ಲೈನ್ ಲಭ್ಯತೆಯನ್ನು ದೃಢೀಕರಿಸುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು? ಫೀಚರ್ಸ್‌ಗಳ ಬಗ್ಗೆ ಏನೆಲ್ಲಾ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ ಫುಲ್‌ HD+ 6.5 ಇಂಚಿನ ಬಾಗಿದ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2376 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಈ ಡಿಸ್‌ಪ್ಲೇ 88.96 % ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದ್ದು, ಡಿಸ್‌ಪ್ಲೇ 19.8:9 ರಚನೆಯ ಅನುಪಾತವನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ವಿವೋ V25 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ರನ್‌ ಆಗಲಿದೆ ಎಂದು ಹೇಳಲಾಗಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಬೆಂಬಲದೊಂದಿಗೆ ಬರಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಎರಡು ಇಂಟರ್‌ ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳಲ್ಲಿ ಬರುವ ನಿರೀಕ್ಷೆಯನ್ನು ಇಡಲಾಗಿದೆ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿರಲಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿರಲಿದೆ?

ಇನ್ನು ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ. ಇದು OIS ಮತ್ತು EIS ಎರಡನ್ನು ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಸೆಲ್ಫಿ ಮತ್ತು ವಿಡಿಯೊ ಕರೆಗಳಿಗಾಗಿ 32ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ಗಳೇನು?

ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ 66W ವೇಗದ ಚಾರ್ಜಿಂಗ್ ಬೆಂಬಲಿಸುವ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲುಟೂತ್‌, ವೈಫೈ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಫೋನ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, AI ಸೆಲ್ಫಿಗಳು, ಸೂಪರ್ ನೈಟ್ ಮೋಡ್, ಬಣ್ಣವನ್ನು ಬದಲಾಯಿಸುವ AG ಗ್ಲಾಸ್ ಬ್ಯಾಕ್ ಅನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ 40,000ರೂ. ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ ನಿಮಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಇದು ಫ್ಲಿಪ್‌ಕಾರ್ಟ್ ಮೂಲಕ ಸೇಲ್‌ ಪ್ರಾರಂಭಿಸಲಿದೆ ಎಂದು ಹೇಳಲಾಗಿದೆ.

Best Mobiles in India

English summary
Vivo V25 Pro launch date in India has been officially revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+