ವಿವೋ V29 5G ಸರಣಿ ಕ್ಯಾಮೆರಾ ಫೀಚರ್ಸ್ ಬಹಿರಂಗ.. ಸೆಲ್ಫಿ ಪ್ರಿಯರಿಗೆ ಇಷ್ಟವಾಗೋದು ಪಕ್ಕಾ!
ವಿವೋ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ವಿವೋ V29 5G ಸರಣಿಯನ್ನು ಪರಿಚಯಿಸಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್ ಸರಣಿ ಇದೇ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಫೀಚರ್ಸ್ ಸೋರಿಕೆಯಿಂದ ಸಾಕಷ್ಟು ಗಮನಸೆಳೆದಿರುವ V29 5G ಸರಣಿಯ ಬೆಲೆ ವಿವರಗಳು ಇದೀಗ ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿದೆ.
ಹೌದು, ವಿವೋ V29 5G ಸರಣಿಯು ಸೆಪ್ಟೆಂಬರ್ 2023ರ ಅಂತ್ಯದ ವೇಳೆಗೆ ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ. ಇದೀಗ ವಿವೋ V29 5G ಸರಣಿ ಕ್ಯಾಮೆರಾ ವಿವರಗಳು ಹಾಗೂ ಬೆಲೆ ವಿವರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅದರಂತೆ ವಿವೋ V29 5G ಸರಣಿಯ ಬೆಲೆ ಹಾಗೂ ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ V29 5G ಸರಣಿಯ ಬೆಲೆ ಮತ್ತು ಕ್ಯಾಮೆರಾ ನಿರೀಕ್ಷೆ ಏನು?
ಭಾರತದಲ್ಲಿ ವಿವೋ V29 5G ಸರಣಿಯ ಬೆಲೆಯು 40,000ರೂ ಅಡಿಯಲ್ಲಿ ಬರಲಿದೆ ಎನ್ನಲಾಗಿದೆ. ಇನ್ನು ವಿವೋ V29 5G ಸ್ಮಾರ್ಟ್‌ಫೋನ್ 'ಮೆಜೆಸ್ಟಿಕ್ ರೆಡ್' ಬಣ್ಣದ ರೂಪಾಂತರದೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ವಿವೋ V29 5G ಸರಣಿಯ ವಿವೋ V29 5G ಪ್ರೊ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಸೋನಿಯ IMX663 ಸೆನ್ಸಾರ್ ಹೊಂದಿರುವ ಪ್ರೈಮೆರಿ ಕ್ಯಾಮೆರಾ ಹೊಂದಿರಲಿದೆ.
ವಿವೋ 29 5G ಫೀಚರ್ಸ್ ಹೇಗಿರಲಿದೆ?
ವಿವೋ 29 5G ಸ್ಮಾರ್ಟ್‌ಫೋನ್ 6.78 ಇಂಚಿನ 1.5K AMOLED ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1260 x 2800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ. ಇನ್ನು ಡಿಸ್‌ಪ್ಲೇ 120Hz ನ ಹೆಚ್ಚಿನ ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ವೇಗದೊಂದಿಗೆ ಬರಲಿದೆ. ಇದು ಆಂಡ್ರಾಯ್ಡ್ 13-ಆಧಾರಿತ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ವಿವೋ 29 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ ಎಂದು ವರದಿಯಾಗಿದೆ. ಇನ್ನು ಸ್ಮಾರ್ಟ್‌ಫೋನ್ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ವಿವೋ 29 ಪ್ರೊ 5G
ವಿವೋ 29 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 8200SoC ಪ್ರೊಸೆಸರ್ ವೇಗವನ್ನು ಹೊಂದಿರಲಿದ್ದು, ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ ಎನ್ನಲಾಗಿದೆ. ಇದಲ್ಲದೆ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಜೊತೆಗೆ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








