Home
ಸುದ್ದಿಜಾಲ

ಭಾರತದಲ್ಲಿ ಲಾಂಚ್‌ ಆಯ್ತು ವಿವೋ V29 ಸರಣಿ! ಧೂಳೆಬ್ಬಿಸೋದು ಗ್ಯಾರಂಟಿ!

ಭಾರತದ ಮಾರುಕಟ್ಟೆಯಲ್ಲಿ ವಿವೋ ಸ್ಮಾರ್ಟ್‌ಫೋನ್‌ಗಳ ಆರ್ಭಟ ಜೋರಾಗಿದೆ. ತನ್ನ ಕ್ಯಾಮೆರಾ ಕೇಂದ್ರಿತ ಫಿಚರ್ಸ್‌ಗಳಿಂದಲೇ ಗಮನಸೆಳೆದಿರುವ ವಿವೋ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಸಾಕಷ್ಟು ದಿನಗಳಿಂದ ಸದ್ದು ಮಾಡ್ತಿದ್ದ ಹೊಸ ವಿವೋ V29 ಸರಣಿ ಭಾರತಕ್ಕೆ ಎಂಟ್ರಿ ನೀಡಿದೆ. ಇದರಲ್ಲಿ ವಿವೋ V29 ಪ್ರೊ ಮತ್ತು ವಿವೋ V29 ಫೋನ್‌ಗಳನ್ನು ಪರಿಚಯಿಸಲಾಗಿದೆ.

ಹೌದು, ವಿವೋ V29 ಸರಣಿಯಲ್ಲಿ ವಿವೋ V29 ಪ್ರೊ ಮತ್ತು ವಿವೋ V29 ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇನ್ನು ವಿವೋ V29 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ವಿವೋ V29 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್‌ ಒಳಗೊಂಡಿದೆ. ಇನ್ನು ಈ ಸರಣಿಯ ಫೋನ್‌ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಲಾಂಚ್‌ ಆಯ್ತು ವಿವೋ V29 ಸರಣಿ! ಧೂಳೆಬ್ಬಿಸೋದು ಗ್ಯಾರಂಟಿ!

ವಿವೋ V29 ಪ್ರೊ ಫೀಚರ್ಸ್‌ ಹೇಗಿದೆ?
ವಿವೋ V29 ಪ್ರೊ ಸ್ಮಾರ್ಟ್‌ಫೋನ್‌ 6.78 ಇಂಚಿನ 1.5K 3D ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 1,300 ನೈಟ್ಸ್ ಬ್ರೈಟ್‌ನೆಸ್ ಮತ್ತು ಗರಿಷ್ಠ 1,300 ನೀಟ್ಸ್‌ಗಳನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ PWM ಡಿಮ್ಮಿಂಗ್‌ ಅನ್ನು ಕೂಡ ನೀಡಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ 4nm ಮೀಡಿಯಾಟೆಕ್‌ ಡೈಮೆನ್ಸಿಟಿ 8200 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ FunTouch OS 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಸ್ಮಾರ್ಟ್‌ಫೋನ್‌ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಹೆಚ್ಚುವರಿ ಬಳಕೆಯಾಗದ ಸಂಗ್ರಹಣೆಯೊಂದಿಗೆ ಲಭ್ಯವಿರುವ RAM ಅನ್ನು 20GB ವರೆಗೆ ವಿಸ್ತರಿಸಬಹುದು. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಇದು 80W ವೇಗದ ಚಾರ್ಜಿಂಗ್ ಬೆಂಬಲಿಸುವ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ವಿವೋ V29 ಸ್ಮಾರ್ಟ್‌ಫೋನ್‌ ಫೀಚರ್ಸ್‌ ಹೇಗಿದೆ?
ವಿವೋ V29 ಸ್ಮಾರ್ಟ್‌ಫೋನ್‌ 6.78 ಇಂಚಿನ 1.5K 3D ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,260x2,800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಬರಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ವಿಸ್ತೃತ RAM ವೈಶಿಷ್ಟ್ಯಕ್ಕೆ ಬೆಂಬಲವನ್ನು ಹೊಂದಿದೆ.

ಇನ್ನು ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 80W ವೇಗದ ಚಾರ್ಜಿಂಗ್ ಬೆಂಬಲಿಸುವ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಭಾರತದಲ್ಲಿ ವಿವೋ V29 ಪ್ರೊ ಮತ್ತು ವಿವೋ V29 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ವಿವೋ V29 ಪ್ರೊ ಸ್ಮಾರ್ಟ್‌ಫೋನ್‌ 8GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 39,999ರೂ ಬೆಲೆ ಹೊಂದಿದೆ. ಇದರ 12GB RAM + 256GB ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ಮಾಡೆಲ್ ಬೆಲೆ 42,999ರೂ ಆಗಿದೆ. ಇದನ್ನು ಹಿಮಾಲಯನ್ ಬ್ಲೂ ಮತ್ತು ಸ್ಪೇಸ್ ಬ್ಲ್ಯಾಕ್ ಶೇಡ್‌ಗಳಲ್ಲಿ ನೀಡಲಾಗುತ್ತದೆ.

ಇನ್ನು ವಿವೋ V29 ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB RAM + 128GB ಸ್ಟೋರೇಜ್ ಮಾದರಿಗೆ 32,999ರೂ ಬೆಲೆ ಹೊಂದಿದೆ. ಅಲ್ಲದೆ 12GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಯು 36,999ರೂ ಬೆಲೆಯಲ್ಲಿ ದೊರೆಯಲಿದೆ. ಇದು ಹಿಮಾಲಯನ್ ಬ್ಲೂ, ಮೆಜೆಸ್ಟಿಕ್ ರೆಡ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

Best Mobiles in India

English summary
Vivo V29 Pro, Vivo V29 With 80W Fast Charging Launched in India: Price Details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+