Home
ಸುದ್ದಿಜಾಲ

vivo: ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟ ವಿವೋ V30 ಲೈಟ್‌ 5G:..50MP ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ!

ವಿವೋ ಕಂಪೆನಿಯ ಫೋನ್‌ಗಳು ಟೆಕ್‌ ವಲಯದಲ್ಲಿ ಬಿಸಿ ದೋಸೆಯಂತೆ ಮಾರಾಟವವಾಗುತ್ತವೆ. ಇದಕ್ಕೆ ಮುಖ್ಯ ಕಾರಣ ವಿವೋ ಫೋನ್‌ಗಳಲ್ಲಿರುವ ಕ್ಯಾಮೆರಾ ರಚನೆ ಅಂತಾನೇ ಹೇಳಬಹುದು. ಅಷ್ಟರ ಮಟ್ಟಿಗೆ ವಿವೋ ಫೋನ್‌ಗಳು ಸೆಲ್ಫಿ ಪ್ರಿಯರ ಗಮನಸೆಳೆಯುತ್ತಿವೆ. ಇದೇ ಹಾದಿಯಲ್ಲಿ ವಿವೋ ಮತ್ತೊಂದು ಹೊಸ ಫೋನ್‌ ಅನ್ನು ಸೈಲೆಂಟ್‌ ಆಗಿ ಲಾಂಚ್‌ ಮಾಡಿದೆ.

ಹೌದು, ವಿವೋ V30 ಲೈಟ್‌ 5G (vivo v30lite 5g) ಸ್ಮಾರ್ಟ್‌ಫೋನ್‌ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಜೊತೆಗೆ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟ ವಿವೋ V30 ಲೈಟ್‌ 5G:..50MP ಸೆಲ್ಫಿ ಕ್ಯಾಮೆರಾ!

ವಿವೋ V30 ಲೈಟ್‌ 5G ಡಿಸ್‌ಪ್ಲೇ ರಚನೆ
ವಿವೋ V30 ಲೈಟ್‌ 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಕರ್ವ್ಡ್-ಎಡ್ಜ್ ಅಮೋಲೆಡ್‌ E4 ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, 394 ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 1,150 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ.

ವಿವೋ V30 ಲೈಟ್‌ 5G ಪ್ರೊಸೆಸರ್‌ ಯಾವುದು?
ವಿವೋ V30 ಲೈಟ್‌ 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಅಂಡ್ರಾಯ್ಡ್‌ 13 ಮತ್ತು FunTouch OS 13ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12 GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿ 1TBವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಕಲ್ಪಿಸಿದೆ.

ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟ ವಿವೋ V30 ಲೈಟ್‌ 5G:..50MP ಸೆಲ್ಫಿ ಕ್ಯಾಮೆರಾ!

ವಿವೋ V30 ಲೈಟ್‌ 5G ಕ್ಯಾಮೆರಾ ರಚನೆ ಏನಿದೆ?
ವಿವೋ V30 ಲೈಟ್‌ 5G ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಅಥವಾ ಡೆಪ್ತ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು ಅದು ಆಟೋಫೋಕಸ್‌ಗೆ ಬೆಂಬಲದೊಂದಿಗೆ ಬರುತ್ತದೆ.

ವಿವೋ V30 ಲೈಟ್‌ 5G ಬ್ಯಾಟರಿ ಮತ್ತು ಇತರೆ
ವಿವೋ V30 ಲೈಟ್‌ 5G ಸ್ಮಾರ್ಟ್‌ಫೋನ್‌ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 5GHz ವೈ-ಫೈ, ಬ್ಲೂಟೂತ್ 5.1, NFC, GPS, USB-C ಪೋರ್ಟ್ ಮತ್ತು ಇನ್‌ನಂತಹ ಫೀಚರ್ಸ್‌ಗಳೊಂದಿಗೆ ಬರಲಿದೆ. ಇದರೊಂದಿಗೆ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡಲಾಗಿದೆ.

ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟ ವಿವೋ V30 ಲೈಟ್‌ 5G:..50MP ಸೆಲ್ಫಿ ಕ್ಯಾಮೆರಾ!

ವಿವೋ V30 ಲೈಟ್‌ 5G ಬೆಲೆ ಮತ್ತು ಲಭ್ಯತೆ
ವಿವೋ V30 ಲೈಟ್‌ 5G ಸ್ಮಾರ್ಟ್‌ಫೋನ್‌ ಪ್ರಸ್ತುತ ಮೆಕ್ಸಿಕೋದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರಿಂದ ಇದರ ಬೇಸ್‌ ಮಾಡೆಲ್‌ ಬೆಲೆ MXN 8,999 (ಅಂದಾಜು 44,112ರೂ) ಆಗಿದೆ. ಇದು ಫಾರೆಸ್ಟ್ ಬ್ಲ್ಯಾಕ್ ಮತ್ತು ರೋಸ್ ಗೋಲ್ಡ್ ನಂತಹ ಎರಡು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದು ಭಾರತದಲ್ಲಿ ಬಿಡುಗಡೆ ಆಗುವುದರ ಬಗ್ಗೆ ಯಾವುದೇ ವಿಚಾರಗಳು ಬಹಿರಂಗವಾಗಿಲ್ಲ.

Best Mobiles in India

English summary
Vivo V30 Lite 5G With 50-megapixel selfie camera launched: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+