ಎದುರಾಳಿಗಳಿಗೆ ನಡುಕ! 50MP + 50MP + 50MP ಕ್ಯಾಮೆರಾಗಳು.. 6000mAh ಬಿಗ್ ಬ್ಯಾಟರಿ.. ಬರಲಿದೆ Vivo V50 ಫೋನ್
ವಿವೋ ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದನ್ನು ವಿವೋ V50 (Vivo V50) ಸರಣಿಯ ಅಡಿಯಲ್ಲಿ ಪರಿಚಯಿಸಲಿದೆ. ಹೌದು, ವಿವೋ V50 5G (Vivo V50 5G) ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ಈಗಾಗಲೇ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಮುಂಬರುವ ಈ ವಿವೋ ಫೋನಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ, ಬಿಡುಗಡೆಯಾಗುವ ಮೊದಲೇ ವಿನ್ಯಾಸ, ಕ್ಯಾಮೆರಾ ಮತ್ತು ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ವರದಿಯ ಪ್ರಕಾರ, ವಿವೋ V50 ಫೋನ್ ಫೆಬ್ರವರಿ 18 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ, ಕಂಪನಿಯು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಇರುತ್ತವೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿವೋ V50 5G ಬೆಲೆ
ಕಂಪನಿಯು ವಿವೋ V50 5G ಫೋನಿನ ಬೆಲೆ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ವಿವೋ V40 5G ಮೊಬೈಲ್ ಭಾರತದಲ್ಲಿ 34,999 ರೂ.ಗೆ ಬಿಡುಗಡೆಯಾಗಿದೆ. ಅದರಂತೆ ವಿವೋ V50 5G ಫೋನಿನ ಬೆಲೆ ಇದೇ ರೀತಿ ಇರಬಹುದು. Vivo S20 ಫೋನನ್ನು ಚೀನಾದಲ್ಲಿ 27,500 ರೂ.ಗೆ ಪರಿಚಯಿಸಲಾಗಿದೆ. ಹೀಗಾಗಿ, ವಿವೋ V50 5G ಸ್ಮಾರ್ಟ್‌ಫೋನ್ ಭಾರತದಲ್ಲಿ 30,000 ರೂ. ಮತ್ತು 35,000 ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ವಿವೋ V50 5G ಫೋನ್ ರೋಸ್ ರೆಡ್ ಬಣ್ಣದಲ್ಲಿ ಬರುತ್ತದೆ. ಈ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಬೂದು, ನೀಲಿ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಫೋನ್ ಪಂಚ್ ಹೋಲ್ ಶೈಲಿಯ ಕ್ವಾಡ್ ಕರ್ವ್ಡ್ ಡಿಸ್ಪ್ಲೇ ಹೊಂದಿರುತ್ತದೆ. ಜೊತೆಗೆ 3D ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ವೈಶಿಷ್ಟ್ಯ ಸಹ ಲಭ್ಯವಿರುತ್ತದೆ. ಈ ಫೋನಿನ ಇನ್ನಿತರೆ ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.
ಡಿಸ್ಪ್ಲೇ ವಿವರ
ವಿವೋ V50 5G ಸ್ಮಾರ್ಟ್‌ಫೋನ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 2800 × 1260 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ವಿವೋ X200 ಪ್ರೊ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಫೋನಿನ ಡಿಸ್ಪ್ಲೇಯು Vivo X200 Pro ರೀತಿಯೇ ಇದೆ.
ಪ್ರೊಸೆಸರ್ ಸಾಮರ್ಥ್ಯ
ವಿವೋ V50 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿರುತ್ತದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ.
ಕ್ಯಾಮೆರಾ ಸೆಟಪ್
ವಿವೋ V50 5G ಮೊಬೈಲ್ ಫೋಟೋಗ್ರಫಿ ಪ್ರಿಯರಿಗೆ ಹಬ್ಬವೇ ಸರಿ. ಮಾಹಿತಿಯ ಪ್ರಕಾರ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುತ್ತದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಒಳಗೊಂಡಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ V50 5G ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ದೊಡ್ಡ ಬ್ಯಾಟರಿಯನ್ನು ಹೊಂದಿರುವ ವಿಭಾಗದಲ್ಲಿ ಇದು ಅತ್ಯಂತ ತೆಳ್ಳಗಿನ ಮೊಬೈಲ್ ಎಂದು ಹೇಳಲಾಗಿದೆ. Vivo V40 5G ಸ್ಮಾರ್ಟ್‌ಫೋನ್ 5500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.


Click it and Unblock the Notifications








