ಭಾರತಕ್ಕೆ ಬರ್ತಿದೆ Vivo V50 ಫೋನ್; 50MP + 50MP + 50MP ಕ್ಯಾಮೆರಾಗಳು.. 6000mAh ಬ್ಯಾಟರಿ.. ಕಡಿಮೆ ಬೆಲೆ
ವಿವೋ ಹೊಸ ಸೊಗಸಾದ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಫೋನಿನ ಲಾಂಚ್ ಟೈಮ್‌ಲೈನ್ ಮತ್ತು ಪ್ರಮುಖ ವೈಶಿಷ್ಟ್ಯಗಳು ಬಹಿರಂಗವಾಗಿವೆ. ಹೌದು, ವಿವೋ (Vivo) ಕಳೆದ ವರ್ಷ ಆಗಸ್ಟ್‌ನಲ್ಲಿ ವಿವೋ V40 (Vivo V40) ಸರಣಿಯನ್ನು ಪರಿಚಯಿಸಿತ್ತು. ಇದೀಗ, ಕಂಪನಿಯು ಇದರ ಉತ್ತರಾಧಿಕಾರಿಯಾಗಿ ವಿವೋ V50 (Vivo V50) ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ. ಈಗಾಗಲೇ ಅನೇಕ ಪ್ರಮಾಣೀಕರಣ ಸೈಟ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ. ಬನ್ನಿ, ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ವಿವೋ V50 ಮೊಬೈಲ್ ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನಿನಲ್ಲಿ 50MP + 50MP + 50MP ಮೂರು ಅದ್ಭುತ ಕ್ಯಾಮೆರಾಗಳು ಇರುತ್ತದೆ. ಇದು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡಲಿದೆ. ಈ ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಜೊತೆಗೆ 512GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿವೋ V50 ಬೆಲೆ (ನಿರೀಕ್ಷಿತ)
ಕಂಪನಿಯು ಮುಂಬರುವ ವಿವೋ V50 ಮೊಬೈಲ್ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಈಗಾಗಲೇ ವಿವೋ S20 (Vivo S20) ಫೋನನ್ನು ಚೀನಾದಲ್ಲಿ 27,400 ರೂ.ಗೆ ಬಿಡುಗಡೆ ಮಾಡಿದೆ. ವಿವೋ V40 ಫೋನಿನ ಬೆಲೆ 34,999 ರೂ. ಆಗಿದೆ. ಭಾರತದಲ್ಲಿ ವಿವೋ V50 ಸ್ಮಾರ್ಟ್‌ಫೋನ್ 35,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಮೊಬೈಲ್ ಕೆಂಪು, ಗುಲಾಬಿ, ಬೂದು ಮತ್ತು ನೀಲಿ ಬಣ್ಣಗಳಲ್ಲಿ ಬರುವ ನಿರೀಕ್ಷೆಯಿದೆ.
ವಿವೋ V50 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ವಿವೋ V50 ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರ ಮತ್ತು ಹೆಚ್ಚಿನ ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಪಡೆದಿರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ವಿವೋ V50 ಮೊಬೈಲ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್ ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದು ವಿವೋ V40 ನಂತೆಯೇ ಇರುತ್ತದೆ. ಈ ಫೋನ್ 8GB + 128GB, 8GB + 256GB ಮತ್ತು 12GB + 512GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿರುತ್ತದೆ. ಇದು 12GB + 512GB ಸ್ಟೋರೇಜ್ ಹೊಸ ಆಯ್ಕೆ ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ವಿವೋ V50 ಫೋನ್ ಫೋಟೋಗ್ರಫಿ ಪ್ರಿಯರಿಗೆ ಅದ್ಭುತ ಆಯ್ಕೆಯಾಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.

ಬ್ಯಾಟರಿ ಮತ್ತು ಬ್ಯಾಟರಿ
ವಿವೋ V50 ಸ್ಮಾರ್ಟ್‌ಫೋನ್ 5,870mAh ಅಥವಾ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒಸಗಿಸಲಾಗುವುದು. ವಿವೋ S20 ಮೊಬೈಲ್ 6,500mAh ಬ್ಯಾಟರಿ ಮತ್ತು 80W ಚಾರ್ಜಿಂಗ್ ಅನ್ನು ಹೊಂದಿದೆ. ಆದರೆ, ವಿವೋ V40 ಫೋನ್ 5,500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ವಿವೋ V50 ಮೊಬೈಲ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, 4G VoLTE, ವೈ-ಫೈ 6, ಬ್ಲೂಟೂತ್, ಜಿಪಿಎಸ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.


Click it and Unblock the Notifications








