ಏ.10ಕ್ಕೆ ಗ್ರ್ಯಾಂಡ್ ಲಾಂಚ್! ಎರಡು 50MP ಕ್ಯಾಮೆರಾಗಳು.. 5600mAh ಬ್ಯಾಟರಿ.. ಕಡಿಮೆ ಬೆಲೆ, ಯಾವ ಫೋನ್?
ವಿವೋ ಕಂಪನಿಯು ಭಾರತದಲ್ಲಿ ವಿವೋ V50 (Vivo V50) ಫೋನನ್ನು ಬಿಡುಗಡೆ ಮಾಡಿದೆ. ಇದು ಮೊಬೈಲ್ ಪ್ರಿಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ, ಕಂಪನಿಯು ಇದೇ ಸರಣಿಯಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಬಹುನಿರೀಕ್ಷಿತ ವಿವೋ V50e 5G (Vivo V50e 5G) ಮಾರುಕಟ್ಟೆಗೆ ಬರಲು ರೆಡಿಯಾಗಿದೆ. ಕಳೆದ ಕೆಲವು ದಿನಗಳಿಂದ ಈ ಫೋನಿನ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೀಗ, ಕಂಪನಿಯು ಮುಂಬರುವ ಈ ಫೋನ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.
ವಿವೋ V50e ಮೊಬೈಲ್ ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಇದು ಅನೇಕ ಅದ್ಭುತ ಕ್ಯಾಮೆರಾ ಫಿಲ್ಟರ್‌ಗಳನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ 5600mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಜೊತೆಗೆ ಸ್ಮಾರ್ಟ್ ಎಐ ವೈಶಿಷ್ಟ್ಯಗಳು ಲಭ್ಯವಿದೆ. ಈ ಮೊಬೈಲ್ ಅಮೆಜಾನ್, ವಿವೋ ಇಂಡಿಯಾದ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟವಾಗಲಿದೆ.

ವಿವೋ V50e ಬಿಡುಗಡೆ ದಿನಾಂಕ
ವಿವೋ ಇದೇ ಏಪ್ರಿಲ್ 10 ರಂದು ಲಾಂಚ್ ಈವೆಂಟ್ ಆಯೋಜಿಸಿದೆ. ಈ ಸಮಾರಂಭದಲ್ಲಿ ವಿವೋ V50e 5G ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಅಧಿಕೃತವಾಗಿ ಘೋಷಿಸಿದೆ. ಈ ಬಿಡುಗಡೆ ಕಾರ್ಯಕ್ರಮವು ಏಪ್ರಿಲ್ 10 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಇದನ್ನು ಕಂಪನಿಯ ವೆಬ್‌ಸೈಟ್ ಮತ್ತು ವಿವೋ ಇಂಡಿಯಾದ ಎಲ್ಲಾ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಇದೇ ದಿನ ಈ ವಿವೋ ಫೋನಿನ ಬೆಲೆ ಮತ್ತು ಮಾರಾಟ ದಿನಾಂಕ ಬಹಿರಂಗವಾಗಲಿದೆ. ಈ ಫೋನಿನ ಇನ್ನಿತರ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
ವಿವೋ V50e ವೈಶಿಷ್ಟ್ಯಗಳು (ನಿರೀಕ್ಷಿತ)
ವಿವೋ V50e ಫೋನ್ 6.77 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರದ ಬೆಂಬಲ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನ ಡಿಸ್ಪ್ಲೇ ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆ ಪಡೆದಿದೆ. ಇದು SGS ಫೈವ್ ಸ್ಟಾರ್ ಡ್ರಾಪ್ ರೆಸಿಸ್ಟೆನ್ಸ್ ಪ್ರಮಾಣೀಕರಣದೊಂದಿಗೆ ಬರಲಿದೆ. ಈ ಮೊಬೈಲ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿರುವ ಸಾಧ್ಯತೆಯಿದೆ. ಇದು ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ವಿವೋ V50e ಸ್ಮಾರ್ಟ್‌ಫೋನ್ ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಐ ಆಟೋಫೋಕಸ್ ಸೆಲ್ಫಿ ಕ್ಯಾಮೆರಾ ಇರುತ್ತದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಇದು ಅಲ್ಟ್ರಾವೈಡ್ ಕ್ಯಾಮೆರಾ ಬೆಂಬಲದೊಂದಿಗೆ ಬರುತ್ತದೆ. ವಿಶೇಷವೆಂದರೆ 4K ವಿಡಿಯೋ ರೆಕಾರ್ಡಿಂಗ್ ಆಯ್ಕೆಯು ಫೋನಿನ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಲ್ಲಿ ಲಭ್ಯವಿರುತ್ತದೆ. ಈ ಫೋನ್ 8GB RAM + 8GB ವರ್ಚುವಲ್ RAM ಹೊಂದಿರುತ್ತದೆ.
ವಿವೋ V50e ಫೋನ್ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿ 5600mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗುವುದು. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ನೀವು ಕೆಲವೇ ನಿಮಿಷಗಳಲ್ಲಿ ಫೋನನ್ನು ಚಾರ್ಜ್ ಮಾಡಬಹುದು. ಈ ಮೊಬೈಲ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದಿದೆ. ಇದಲ್ಲದೆ, ಈ ಮೊಬೈಲ್ ಅಂಡರ್ ವಾಟರ್ ಫೋಟೋಗ್ರಫಿಯನ್ನು ಸಹ ಬೆಂಬಲಿಸುತ್ತದೆ. ಇದು ಸ್ಮಾರ್ಟ್ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಎಐ ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್, ವಿವೋ ಲೈವ್ ಕಾಲ್ ಟ್ರಾನ್ಸ್‌ಲೇಷನ್, ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ಉತ್ತಮ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.


Click it and Unblock the Notifications








