Home
ಸುದ್ದಿಜಾಲ

Vivo: ಇತ್ತೀಚೆಗೆ ಬಿಡುಗಡೆ; ಭರ್ಜರಿ ಆಫರ್‌ನೊಂದಿಗೆ ಸೇಲ್ ಶುರು.. 50MP + 50MP ಕ್ಯಾಮೆರಾಗಳು.. ಬೆಲೆ ಎಷ್ಟು?

ವಿವೋ ಕಳೆದ ವಾರ ಭಾರತದಲ್ಲಿ ವಿವೋ V50e (Vivo V50e) ಫೋನನ್ನು ಬಿಡುಗಡೆ ಮಾಡಿತು. ನಿರೀಕ್ಷೆಯಂತೆಯೇ, ಈ ಫೋನ್ ಲಾಂಚ್ ಆಫರ್‌ಗಳೊಂದಿಗೆ ಮಾರಾಟ ಪ್ರಾರಂಭಿಸಿದೆ. ಹೌದು, ಎಲ್ಲರೂ ಕಾತುರದಿಂದ ಎದುರು ನೋಡುತ್ತಿದ್ದ ವಿವೋ V50e ಅಧಿಕೃತವಾಗಿ ಮೊಬೈಲ್ ಪ್ರಿಯರ ಕೈ ಸೇರಿದೆ. ಈ ಸ್ಮಾರ್ಟ್‌ಫೋನ್ ಫೋಟೋಗ್ರಫಿ ಇಷ್ಟಪಡುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಹೊಸ ವಿವೋ V50e 5G ಫೋನಿಗೆ ಯಾವೆಲ್ಲಾ ಆಫರ್ ಲಭ್ಯವಿದೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಿವೋ V50e ಅನ್ನು ಈ ಹಿಂದೆ ಬಿಡುಗಡೆಯಾಗಿದ್ದ ವಿವೋ V50 ಮೊಬೈಲ್‌ನ ಉತ್ತರಾಧಿಕಾರಿಯಾಗಿ ಪರಿಚಯಿಸಲಾಗಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು 6.77 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50MP + 50MP ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 5600mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್, ಸ್ಮಾರ್ಟ್ ಎಐ ವೈಶಿಷ್ಟ್ಯಗಳು ಲಭ್ಯವಿದೆ. ಈ ಫೋನಿನ ಬೆಲೆ ಮತ್ತು ಮಾರಾಟದ ವಿವರಗಳ ಬಗ್ಗೆ ತಿಳಿಯಲು ಓದಿ.

ಹೊಸ Vivo V50e ಸೇಲ್ ಶುರು; 50MP + 50MP ಕ್ಯಾಮೆರಾಗಳು.. ಭರ್ಜರಿ ಆಫರ್‌ ಘೋಷಣೆ

ವಿವೋ V50e 5G ರಿಯಾಯಿತಿ

ವಿವೋ V50e 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವು 28,999 ರೂ.ಗೆ ಮಾರಾಟವಾಗುತ್ತಿದೆ. 8GB RAM + 256GB ಸ್ಟೋರೇಜ್ ಬೆಲೆ 30,999 ರೂ. ಆಗಿದೆ. ಈ ಮೊಬೈಲ್ ವಿವೋ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ನೀಲಿ ಮತ್ತು ಪರ್ಲ್ ವೈಟ್ ಬಣ್ಣಗಳಲ್ಲಿ ಬರುತ್ತದೆ. ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್ ವಹಿವಾಟುಗಳಿಗೆ ಶೇ.10 ರಷ್ಟು ತ್ವರಿತ ರಿಯಾಯಿತಿ ನೀಡುತ್ತಿದೆ. ಜೊತೆಗೆ ಶೇ.10 ರಷ್ಟು ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ. ನೀವು 6 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಈ ಫೋನ್ ಕೊಳ್ಳಬಹುದು. ಇದರೊಂದಿಗೆ ಕೇವಲ 1,499 ರೂ.ಗಳ ವಿಶೇಷ ಬಂಡಲ್ ಬೆಲೆಯಲ್ಲಿ vivo TWS ಇಯರ್‌ಬಡ್‌ ನಿಮ್ಮದಾಗಿಸಿಕೊಳ್ಳಬಹುದು.

ವಿವೋ V50e 5G ವೈಶಿಷ್ಟ್ಯಗಳು

ವಿವೋ V50e 5G ಸ್ಮಾರ್ಟ್‌ಫೋನ್ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,392 × 1,080 ಪಿಕ್ಸೆಲ್ ರೆಸಲ್ಯೂಶನ್‌ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಡಿಸ್ಪ್ಲೇ ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆ ಪಡೆದಿದೆ. ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಹೊಂದಿದೆ. ಈ ಮೊಬೈಲ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 7300 ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಮಾಲಿ G615 ಜಿಪಿಯು ಹೊಂದಿದೆ.

ವಿವೋ V50e ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಎಐ (AI) ಸ್ಟುಡಿಯೋ ಲೈಟ್ ಪೋರ್ಟ್ರೇಟ್ 2.0 ಔರಾ ಲೈಟ್ ವೈಶಿಷ್ಟ್ಯ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 5600mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಹೊಸ Vivo V50e ಸೇಲ್ ಶುರು; 50MP + 50MP ಕ್ಯಾಮೆರಾಗಳು.. ಭರ್ಜರಿ ಆಫರ್‌ ಘೋಷಣೆ

ಸ್ಮಾರ್ಟ್ ಎಐ ವೈಶಿಷ್ಟ್ಯಗಳು

ವಿವೋ V50e ಮೊಬೈಲ್ ಅಂಡರ್ ವಾಟರ್ ಫೋಟೋಗ್ರಫಿ ಹೊಂದಿದೆ. ಇದು ಸ್ಮಾರ್ಟ್ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಎಐ ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್, ವಿವೋ ಲೈವ್ ಕಾಲ್ ಟ್ರಾನ್ಸ್‌ಲೇಷನ್, ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ಉತ್ತಮ ಎಐ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದಿದೆ. ಈ ಮೊಬೈಲ್ 8GB RAM ಹೊಂದಿದೆ. ಹಾಗೆಯೇ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿದೆ.

Best Mobiles in India

English summary
vivo V50e With 50MP Selfie Camera goes on sale in India with launch offers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+