Vivo: ವಿವೋ ಫೋನ್‌ಗೆ ಬರೋಬ್ಬರಿ 28% ಡಿಸ್ಕೌಂಟ್: 128GB ಸ್ಟೋರೇಜ್ ಆಯ್ಕೆ!
ಸಾಕಷ್ಟು ಸದ್ದು ಮಾಡಿದ್ದ ವಿವೋ Y56 5G ಸ್ಮಾರ್ಟ್‌ಫೋನ್ ಇದೀಗ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಬಿಡುಗಡೆ ಆದ ದಿನದಿಂದ ಇಲ್ಲಿಯವರೆಗೆ ಡಿಮ್ಯಾಂಡ್ ಕ್ರಿಯೆಟ್ ಮಾಡಿರುವ ಈ ಫೋನ್ ಇದೀಗ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ವಿವೋ Y56 5G ಫೋನ್ ಮೇಲೆ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.
ಹೌದು, ವಿವೋ Y56 5G ಸ್ಮಾರ್ಟ್‌ಫೋನ್ ಅಮೆಜಾನ್ ತಾಣದಲ್ಲಿ ಬರೋಬ್ಬರಿ 28% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್ ಇದೀಗ ಬಿಸಿ ದೋಸೆಯಂತೆ ಮಾರಾಟವಾಗುತ್ತಿದ್ದು, ನೀವು ಕೂಡ ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 700SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ವಿವೋ Y56 5G ಡಿಸ್ಕೌಂಟ್ ನಂತರ ಬೆಲೆ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ವಿವೋ Y56 5G ಬೆಲೆ ಎಷ್ಟು?
ವಿವೋ Y56 5G ಸ್ಮಾರ್ಟ್‌ಫೋನಿನ 8GB+128GB ಸ್ಟೋರೇಜ್ ಆಯ್ಕೆಗೆ ಅಮೆಜಾನ್ ತಾಣದಲ್ಲಿ 24,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್‌ಫೋನ್ ಮೇಲೆ 28% ಡಿಸ್ಕೌಂಟ್ ನೀಡಲಾಗುತ್ತಿರುವುದರಿಂದ 17,999ರೂ ಬೆಲೆಗೆ ಖರೀದಿಸಬಹುದಾಗಿದೆ. ಇದಲ್ಲದೆ ಆಸಕ್ತ ಖರೀದಿದಾರರು IDFC ಫಸ್ಟ್ ಬ್ಯಾಂಕ್, ಒನ್ ಕಾರ್ಡ್, IndusInd, ಯೆಸ್ ಬ್ಯಾಂಕ್ ಮತ್ತು DBS ಮೂಲಕ ಮಾಡಿದ ವಹಿವಾಟುಗಳನ್ನು ನಡೆಸಿದರೆ ಹೆಚ್ಚುವರಿ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದು.
ವಿವೋ Y56 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ವಿವೋ Y56 5G ಸ್ಮಾರ್ಟ್‌ಫೋನ್ 6.58 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಇನ್ನು ಡಿಸ್‌ಪ್ಲೇ 2408 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತದಲ್ಲಿದ್ದು, 60Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 90.6% ಸ್ಕ್ರೀನ್-ಟು-ಬಾಡಿ ನಡುವಿನ ಅನುಪಾತವನ್ನು ಪಡೆದಿದೆ.

ವಿವೋ Y56 5G ಪ್ರೊಸೆಸರ್ ಕಾರ್ಯವೈಖರಿ ಏನು?
ವಿವೋ Y56 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 700SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು FunTouch OS 13 ಓವರ್‌ಲೇ ಜೊತೆಗೆ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೇ 4GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್ ಸ್ಟೋರೇಜ್ ವೇರಿಯೆಂಟ್ ಆಯ್ಕೆಯನ್ನು ಹೊಂದಿದೆ. ಪ್ರಸ್ತುತ 8GB RAM ಮತ್ತು 128GB ಆಯ್ಕೆಯು ಡಿಸ್ಕೌಂಟ್‌ನಲ್ಲಿ ದೊರೆಯುತ್ತಿದೆ.
ವಿವೋ Y56 5G ಕ್ಯಾಮೆರಾ ಸೆಟ್‌ಅಪ್ ಏನಿದೆ?
ವಿವೋ Y56 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ವಿವೋ Y56 5G ಸ್ಮಾರ್ಟ್‌ಫೋನ್ ಬ್ಯಾಟರಿ
ವಿವೋ Y56 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಸಾಮರ್ಥ್ಯ, 5G ಸಂಪರ್ಕ, Wi-Fi 802.11ac, ಬ್ಲೂಟೂತ್ 5.1, GPS, USB-C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ. ಇದಲ್ಲದೆ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಒಳಗೊಂಡಿದೆ.


Click it and Unblock the Notifications








