Home
ಸುದ್ದಿಜಾಲ

ಸುಂಟರಗಾಳಿಯಂತೆ ಎಂಟ್ರಿ ಕೊಟ್ಟ ವಿವೋ ವಾಚ್‌3! ಎದುರಾಳಿಗಳಿಗೆ ನಡುಕ ಶುರು!

ಟೆಕ್‌ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಿವೋ ವಾಚ್ 3 ಅಧಿಕೃತವಾಗಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್‌ ವಿವೋ ವಾಚ್ 2 ರ ಉತ್ತರಾಧಿಕಾರಿಯಾಗಿ ಎಂಟ್ರಿ ನೀಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಸ್ಟೇನ್ಲೆಸ್ ಸ್ಟೀಲ್ ತಿರುಗುವ ಕಿರೀಟ ಮತ್ತು ಕೆಳಭಾಗದಲ್ಲಿ ಭೌತಿಕ ಬಟನ್ ಇದೆ. ಜೊತೆಗೆ ಸ್ಲಿಮ್ಮರ್ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದೆ.

ಹೌದು, ವಿವೋ ವಾಚ್‌ 3 ಸ್ಮಾರ್ಟ್‌ವಾಚ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್‌ 505mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ 3D ಕರ್ವ್ಡ್‌ ಗ್ಲಾಸ್‌ ಹೊಂದಿರುವ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಶ್ರವಣ ರಕ್ಷಣೆಗಾಗಿ ಸ್ಮಾರ್ಟ್‌ವಾಚ್‌ ಹೆಚ್ಚಿನ ನಾಯ್ಸ್‌ ಲೆವೆಲ್ ಅನ್ನು ಸಹ ಪತ್ತೆ ಮಾಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸುಂಟರಗಾಳಿಯಂತೆ ಎಂಟ್ರಿ ಕೊಟ್ಟ ವಿವೋ ವಾಚ್‌3! ಎದುರಾಳಿಗಳಿಗೆ ನಡುಕ ಶುರು!

ವಿವೋ ವಾಚ್ 3 ಫೀಚರ್ಸ್‌ ಹೇಗಿದೆ?
ವಿವೋ ವಾಚ್ 3 ಸ್ಮಾರ್ಟ್‌ವಾಚ್‌ 1.43 ಇಂಚಿನ ವೃತ್ತಾಕಾರದ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಮೇಲ್ಭಾಗದಲ್ಲಿ 3D ಕರ್ವ್ಡ್‌ ಗ್ಲಾಸ್‌ ಅನ್ನು ಹೊಂದಿದ್ದು, 466 x 466 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್‌ AOD ಮೋಡ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ 5 ಮೀಟರ್ ವರೆಗೆ ನೀರು ನಿರೋಧಕ ವ್ಯವಸ್ಥೆಯನ್ನು ಪಡೆದಿದೆ.

ವಿವೋ ವಾಚ್ 3 ಇಂಟರ್‌ಫೇಸ್, ಫಂಕ್ಷನ್‌ಗಳನ್ನು ನ್ಯಾವಿಗೇಟ್ ಮಾಡಲು ಡಿವೈಸ್‌ನ ಬಲಭಾಗದಲ್ಲಿ ಮೇಲ್ಭಾಗದಲ್ಲಿ ಸ್ಟೇನ್ಲೆಸ್ ಸ್ಟೀಲ್ ತಿರುಗುವ ಕಿರೀಟವನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಕೆಳಭಾಗದಲ್ಲಿ ಫಿಸಿಕಲ್‌ ಬಟನ್ ಪಡೆದಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಹೆಲ್ತ್‌ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌ ಪಡೆದಿದೆ. ಇದಲ್ಲದೆ ಅಸಹಜ ಏರಿಳಿತಗಳು ಕಂಡುಬಂದಾಗ ಬಳಕೆದಾರರಿಗೆ ಎಚ್ಚರಿಕೆ ನೀಡುವ ಫೀಚರ್ಸ್‌ ಕೂಡ ನೀಡಲಾಗಿದೆ.

ಸುಂಟರಗಾಳಿಯಂತೆ ಎಂಟ್ರಿ ಕೊಟ್ಟ ವಿವೋ ವಾಚ್‌3! ಎದುರಾಳಿಗಳಿಗೆ ನಡುಕ ಶುರು!

ಇದಲ್ಲದೆ ವಿವೋ ವಾಚ್‌ 3 ಸ್ಮಾರ್ಟ್‌ವಾಚ್‌ ಪ್ಯಾಕ್ ಕಸ್ಟಮೈಸ್ ಮಾಡಿದ 100 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳಿಗೆ ಬೆಂಬಲವನ್ನು ನೀಡುತ್ತದೆ. ಇದರೊಂದಿಗೆ ರಸ್ಟ್ ಪ್ರೋಗ್ರಾಮಿಂಗ್ ಭಾಷೆಯ ಆಧಾರದ ಮೇಲೆ ಬ್ಲೂಓಎಸ್ ಆಪರೇಟಿಂಗ್ ಸಿಸ್ಟಂನಲ್ಲಿ ಎನ್‌ಎಫ್‌ಸಿ ಕಾರ್ ಕೀಗಳು, ಕ್ಯಾಮೆರಾ ನಿಯಂತ್ರಣದಂತಹ ಫೀಚರ್ಸ್‌ಗಳೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್ ವಾಚ್ ಕಾರ್ಡ್‌ಗಳನ್ನು ಸಹ ಸ್ಟೋರೇಜ್‌ ಮಾಡುವುದಕ್ಕೆ ಅವಕಾಶವನ್ನು ಸಹ ಪಡೆದಿದೆ.

ಇನ್ನು ಬಳಕೆದಾರರು ತಮ್ಮ ಮಣಿಕಟ್ಟನ್ನು ಎತ್ತುವ ಮೂಲಕ ಅದನ್ನು ಸ್ವೈಪ್ ಮಾಡಬಹುದು. ಪಾವತಿಯನ್ನು ಸ್ವೀಕರಿಸಲು ಇದು QR ಕೋಡ್ ಅನ್ನು ಸಹ ಪ್ರದರ್ಶಿಸಲಿದೆ. ಇನ್ನು ಸ್ಮಾರ್ಟ್ ವಾಚ್ ಹ್ಯಾಂಡ್ಸ್-ಫ್ರೀ ಧ್ವನಿ ಕರೆಗಾಗಿ eSIM ಬೆಂಬಲಿಸಲಿದೆ. ಜೊತೆಗೆ ಸ್ಮಾರ್ಟ್‌ವಾಚ್‌ 3 ಮ್ಯೂಸಿಕ್‌ ಸಂಗ್ರಹಣೆಗಾಗಿ 64MB RAM ಮತ್ತು 4GB ಲೋಕಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದು TWS ಇಯರ್‌ಬಡ್‌ಗಳಿಗೆ ಸಹ ಕನೆಕ್ಟ್‌ ಮಾಡುವ ಅವಕಾಶವನ್ನು ಸಹ ಪಡೆದುಕೊಂಡಿದೆ.

ಸುಂಟರಗಾಳಿಯಂತೆ ಎಂಟ್ರಿ ಕೊಟ್ಟ ವಿವೋ ವಾಚ್‌3! ಎದುರಾಳಿಗಳಿಗೆ ನಡುಕ ಶುರು!

ಈ ಸ್ಮಾರ್ಟ್‌ವಾಚ್‌ 505mAh ಸಾಮರ್ಥ್ಯದ ಬ್ಯಾಟರಿ ಬೆಂಬಲಿಸಲಿದೆ. ಇನ್ನು ಸಿಂಗಲ್‌ ಚಾರ್ಜ್‌ನಲ್ಲಿ 16 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಆದರಿಂದ ಇದನ್ನು ಚೀನಾದಲ್ಲಿ eSIM ಆವೃತ್ತಿಗೆ CNY 1,399 (ಅಂದಾಜು 15,972ರೂ) ಹಾಗೂ ರಬ್ಬರ್ ಪಟ್ಟಿ ಆಯ್ಕೆಗೆ CNY 1,299 (ಅಂದಾಜು 14,830ರೂ) ಬೆಲೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ವಾಚ್‌ ಚೆನ್ ಯೆಹೆ, ಮೂನ್‌ಲೈಟ್ ವೈಟ್, ಸ್ಟಾರ್‌ಲೈಟ್ ಮತ್ತು ಬ್ರೈಟ್ ಮೂನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Vivo Watch 3 With 16-Day Battery Life Launched: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+