Home
ಸುದ್ದಿಜಾಲ

ವಿವೋ X ಫೋಲ್ಡ್‌ 3 ಸ್ಮಾರ್ಟ್‌ಫೋನ್‌ ಕ್ಯಾಮೆರಾ ಡಿಸೈನ್‌ ಬಹಿರಂಗ: ನಿರೀಕ್ಷೆ ಏನು?

ಭಾರತದ ಮೊಬೈಲ್‌ ಮಾರುಕಟ್ಟೆಯಯಲ್ಲಿ ವಿವೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಸಾಕಷ್ಟು ಬೇಡಿಕೆಯಿದೆ. ಭಾರತದ ಮಾರುಕಟ್ಟೆಯಲ್ಲಿ ಸೆಲ್ಫಿ ಪ್ರಿಯರ ನೆಚ್ಚಿನ ಮೊಬೈಲ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ಇದೀಗ ತನ್ನ ಮುಂದಿನ ಪೀಳಿಗೆಯ ಹೈ ಎಂಡ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು Vivo X Fold 3 ಎಂದು ಗುರುತಿಸಲಾಗಿದೆ.

ಹೌದು, ವಿವೋ ಕಂಪೆನಿ ವಿವೋ X ಫೋಲ್ಡ್‌ 3 ಸ್ಮಾರ್ಟ್‌ಫೋನ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಈ ಸ್ಮಾರ್ಟ್‌ಫೋನ್‌ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದ್ದು, ಇದರ ಕ್ಯಾಮೆರಾ ಮಾಡ್ಯೂಲ್‌ ಬಹಿರಂಗವಾಗಿದೆ. ಈ ಮೂಲಕ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಶುರುವಾಗಿದೆ. ಹಾಗಾದ್ರೆ ವಿವೋ X ಫೋಲ್ಡ್‌ 3 ಫೋನ್‌ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ X ಫೋಲ್ಡ್‌ 3 ಸ್ಮಾರ್ಟ್‌ಫೋನ್‌ ಕ್ಯಾಮೆರಾ ಡಿಸೈನ್‌ ಬಹಿರಂಗ: ನಿರೀಕ್ಷೆ ಏನು?

Vivo X ಫೋಲ್ಡ್ 3 ಕ್ಯಾಮೆರಾ ಡಿಸೈನ್‌
ವಿವೋ X ಫೋಲ್ಡ್‌ 3 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಹೊಂದಿದೆ. ಶೂಟರ್ ಜೊತೆಗೆ 2x ಆಪ್ಟಿಕಲ್ ಜೂಮ್ ಮತ್ತು 40x ಡಿಜಿಟಲ್ ಜೂಮ್ ಅನ್ನು ನೀಡುತ್ತದೆ.

Vivo X ಫೋಲ್ಡ್ 3 ಡಿಸ್‌ಪ್ಲೇ ನಿರೀಕ್ಷೆ?
Vivo X ಫೋಲ್ಡ್ 3 ಸ್ಮಾರ್ಟ್‌ಫೋನ್‌ 8.2 ಇಂಚಿನ ಮೇನ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1916 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇಯು 360 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿದೆ. ಜೊತೆಗೆ ಡಿಸ್‌ಪ್ಲೇ HDR10+ ನೊಂದಿಗೆ 1800 ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ನಲ್ಲಿರಲಿದೆ. 144 Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 240 Hz ಟಚ್ ಸ್ಯಾಂಪ್ಲಿಂಗ್ ರೇಟ್‌ನಲ್ಲಿದೆ.

Vivo X ಫೋಲ್ಡ್ 3 ಪ್ರೊಸೆಸರ್‌ ಸಾಮರ್ಥ್ಯ
ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಜೊತೆಗೆ 3.2 GHz ಸಪೋರ್ಟ್‌ ಪಡೆದಿದ್ದು, ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12 GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. ಇದು ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಪಡೆದುಕೊಂಡಿದೆ.

Vivo X ಫೋಲ್ಡ್ 3 ಬ್ಯಾಟರಿ ಮತ್ತು ಇತರೆ
Vivo X ಫೋಲ್ಡ್ 3 ಸ್ಮಾರ್ಟ್‌ಫೋನ್‌ 4800 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 120W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, 50W ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದ್ದು, 10W ರಿವರ್ಸ್ ಚಾರ್ಜಿಂಗ್ ಬೆಂಬಲವನ್ನು ಕೂಡ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, 5G, VoLTE, ಬ್ಲೂಟೂತ್ v5.3, ವೈಫೈ, NFC, USB-C v2.0 ಬೆಂಬಲಿಸಲಿದೆ.

ವಿವೋ X ಫೋಲ್ಡ್‌ 3 ಸ್ಮಾರ್ಟ್‌ಫೋನ್‌ ಕ್ಯಾಮೆರಾ ಡಿಸೈನ್‌ ಬಹಿರಂಗ: ನಿರೀಕ್ಷೆ ಏನು?

Vivo X ಫೋಲ್ಡ್ 3 ಬೆಲೆ ಮತ್ತು ಲಭ್ಯತೆ
Vivo X ಫೋಲ್ಡ್ 3 ಸ್ಮಾರ್ಟ್‌ಫೋನ್‌ ಯಾವ ಬೆಲೆಯಲ್ಲಿ ಬರಲಿದೆ ಅನ್ನೊದು ಇನ್ನು ಸಹ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಪ್ರೀಮಿಯಂ ಬೆಲೆಯಲ್ಲಿ ಬರುವ ಸಾಧ್ಯತೆಯಿದೆ. ಇದು ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿದೆ ಎಂಬುದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಬಹಿರಂಗವಾಗಿಲ್ಲ. ಈ ಸ್ಮಾರ್ಟ್‌ಫೋನ್‌ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದ್ದು, ಇದರ ಕ್ಯಾಮೆರಾ ಮಾಡ್ಯೂಲ್‌ ಬಹಿರಂಗವಾಗಿದೆ.

Best Mobiles in India

English summary
Vivo X Fold 3 Smartphone camera specs Revealed: Expected Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+