Home
ಸುದ್ದಿಜಾಲ

Vivo: ವಿವೋ X ಫೋಲ್ಡ್ 3 ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಹೊಸ ಕಂಪನ!

ವಿವೋ ಕಂಪೆನಿ ಶೀಘ್ರದಲ್ಲೇ ಮತ್ತೊಂದು ಹೊಸ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಪರಿಚಯಿಸುವ ಸೂಚನೆ ನೀಡಿದೆ. ಇದನ್ನು ವಿವೋ X Fold 3 ಸ್ಮಾರ್ಟ್‌ಫೋನ್‌ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗಬಹುದು ಎಂದು ಆನ್‌ಲೈನ್‌ನಲ್ಲಿ ವರದಿಯಾಗಿದೆ.

ಹೌದು, ವಿವೋ X ಫೋಲ್ಡ್ 3 ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಬಿಡುಗಡೆ ಆಗುವ ಸಾಧ್ಯತೆಯಿದೆ. ಇದಕ್ಕೆ ಸೂಚನೆ ಎಂಬಂತೆ ಆನ್‌ಲೈನ್‌ ವೆಬ್‌ಸೈಟ್‌ಗಳಲ್ಲಿ ವಿವೋ X ಫೋಲ್ಡ್ 3 ಫೋನ್‌ ಫೀಚರ್ಸ್‌ಗಳು ಬಹಿರಂಗವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗಾದ್ರೆ ವಿವೋ X ಫೋಲ್ಡ್ 3 ಫೋನ್‌ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Vivo: ವಿವೋ X ಫೋಲ್ಡ್ 3 ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಹೊಸ ಕಂಪನ!

ವಿವೋ X ಫೋಲ್ಡ್ 3 ಫೀಚರ್ಸ್‌ ನಿರೀಕ್ಷೆ ಏನು?
ವಿವೋ X ಫೋಲ್ಡ್ 3 ಸ್ಮಾರ್ಟ್‌ಫೋನ್‌ 8.2 ಇಂಚಿನ ಮೇನ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದರ ಕವರ್‌ ಡಿಸ್‌ಪ್ಲೇ 6.53 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಬಹುದು ಎಂದು ವರದಿಯಾಗಿದೆ. ಇನ್ನು ಮೇನ್‌ ಡಿಸ್‌ಪ್ಲೇ 1916 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಈ ಡಿಸ್‌ಪ್ಲೇಯು HDR10+ ಬೆಂಬಲಿಸಲಿದ್ದು, 144 Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ.

ವಿವೋ X ಫೋಲ್ಡ್ 3 ಪ್ರೊಸೆಸರ್‌ ಯಾವುದು?
ವಿವೋ X ಫೋಲ್ಡ್ 3 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3 SoC ಪ್ರೊಸೆಸರ್‌ನಲ್ಲಿ ಬರಲಿದೆ ಎಂದು ಡಿಜಿಟಲ್ ಚಾಟ್ ಸ್ಟೇಷನ್ ಖಚಿತಪಡಿಸುತ್ತದೆ. ಈ ಚಿಪ್‌ಸೆಟ್ ಅನ್ನು TSMC ಯ 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಅಲ್ಲದೆ 3.3GHz ನಲ್ಲಿ ಒಂದು ಕಾರ್ಟೆಕ್ಸ್ X4 ಕೋರ್, 3.15GHz ನಲ್ಲಿ ಮೂರು ಕಾರ್ಟೆಕ್ಸ್-A720 ಕೋರ್‌ಗಳು, 2.96GHz ನಲ್ಲಿ ಎರಡು ಕಾರ್ಟೆಕ್ಸ್-A720 ಕೋರ್‌ ಒಳಗೊಂಡಿದೆ ಎನ್ನಲಾಗಿದೆ. ಇದು 24GB RAM ಮತ್ತು 1TB ಇಂಟರ್‌ ಸ್ಟೋರೇಜ್‌ನೊಂದಿಗೆ ಬರುವ ಸಾಧ್ಯತೆಯಿದೆ.

Vivo: ವಿವೋ X ಫೋಲ್ಡ್ 3 ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಹೊಸ ಕಂಪನ!

ವಿವೋ X ಫೋಲ್ಡ್ 3 ಕ್ಯಾಮೆರಾ ಸೆಟಪ್‌ ನಿರೀಕ್ಷೆ?

ವಿವೋ X ಫೋಲ್ಡ್ 3 ಸ್ಮಾರ್ಟ್‌ಫೋನ್‌ ಆಪ್ಟಿಕಲ್ 50MP ಸೆನ್ಸಾರ್‌ ಮೇನ್‌ ಕ್ಯಾಮೆರಾದೊಂದಿಗೆ ಬರಲಿದೆ ಎನ್ನಲಾಗಿದೆ. ಇದರೊಂದಿಗೆ ಅಲ್ಟ್ರಾವೈಡ್ ಲೆನ್ಸ್ ಮತ್ತು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಒಳಗೊಂಡ ಕ್ಯಾಮೆರಾವನ್ನು ಸಹ ಹೊಂದಿರಲಿದೆ. ಇದು ಮಲ್ಟಿಫೇಸ್‌ ಮತ್ತು ಉತ್ತಮ-ಗುಣಮಟ್ಟದ ಛಾಯಾಗ್ರಹಣವನ್ನು ಭರವಸೆ ನೀಡುತ್ತದೆ. ಇದರ ಪ್ರೊ ರೂಪಾಂತರವು ಮುಂಬರುವ ಸೋನಿ LYT 900 ಸೆನ್ಸಾರ್‌ ಅನ್ನು ಸಹ ಹೊಂದಿರಬಹುದು.

Vivo: ವಿವೋ X ಫೋಲ್ಡ್ 3 ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಹೊಸ ಕಂಪನ!

ವಿವೋ X ಫೋಲ್ಡ್ 3 ಬ್ಯಾಟರಿ ಮತ್ತು ಇತರೆ
ವಿವೋ X ಫೋಲ್ಡ್ 3 (Vivo X Fold 3) ಸ್ಮಾರ್ಟ್‌ಫೋನ್‌ 100W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಬೆಂಬಲಿಸುವ 4800 mAh ಬ್ಯಾಟರಿಯನ್ನು ಒಳಗೊಂಡಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ನೊಂದಿಗೆ ಬರಲಿದೆ ಎಂದು ವರದಿಯಾಗಿದೆ.

ಇನ್ನು ಇತ್ತೀಚಿಗೆ ವಿವೋ ಕಂಪೆನಿ ಚೀನಾ ಮಾರುಕಟ್ಟೆಯಲ್ಲಿ ವಿವೋ X100 ಫೋನ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ AMOLED ಮಾದರಿಯ ಸ್ಕ್ರೀನ್‌ ಪಡೆದಿದೆ. ಜೊತೆಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್‌ ಕಾರ್ಯ ವೈಖರಿ ಪಡೆದುಕೊಂಡಿದ್ದು, 12GB + 256GB, 16GB + 256GB, 16GB + 512GB ಮತ್ತು 16GB + 1TB ಸ್ಟೋರೇಜ್‌ ಆಯ್ಕೆ ಪಡೆದಿದೆ.

Best Mobiles in India

English summary
Vivo X Fold 3 Smartphone Chipset and Camera Specifications Revealed online
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+