Home
ಸುದ್ದಿಜಾಲ

ಭಾರತದಲ್ಲಿ Vivo X Fold 5 ಫೋನ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ!

ವಿವೋ ಕಂಪೆನಿಯ ಪುಸ್ತಕ ಶೈಲಿಯ ಹೊಸ ಫ್ಲಾಗ್‌ಶಿಪ್ ಫೋಲ್ಡಬಲ್ ಫೋನ್ 'Vivo X Fold 5' ದೇಶದಲ್ಲಿಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಆಕ್ಟಾ-ಕೋರ್ Snapdragon 8 Gen 3 ಪ್ರೊಸೆಸರ್, 8.03-ಇಂಚಿನ ಫ್ಲೆಕ್ಸಿಬಲ್ ಮತ್ತು 6.53-ಇಂಚಿನ ಡಿಸ್‌ಪ್ಲೇಗಳನ್ನು ಒಳಗೊಂಡಿರುವ ಈ ಫೋನ್, 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, AI Image Studio ದಂತಹ ಹಲವು ಇತ್ತೀಚಿನ ಫೀಚರ್ಸ್‌ಗಳೊಂದಿಗೆ ಪರಿಚಯಗೊಂಡಿದೆ. ಹಾಗಾದರೆ, ಹೊಸ Vivo X Fold 5 ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Vivo X Fold 5 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು:
ಪುಸ್ತಕ ಶೈಲಿಯ ಹೊಸ Vivo X Fold 5 ಫೋನ್ 8.03-ಇಂಚಿನ ಫ್ಲೆಕ್ಸಿಬಲ್ AMOLED ಆಂತರಿಕ ಡಿಸ್‌ಪ್ಲೇ ಮತ್ತು 6.53-ಇಂಚಿನ AMOLED ಕವರ್ ಡಿಸ್‌ಪ್ಲೇ ಹೊಂದಿದೆ. ಈ ಎರಡೂ ಡಿಸ್‌ಪ್ಲೇಗಳು 120Hz ರಿಫ್ರೆಶ್ ರೇಟ್ ಮತ್ತು 4,500 NITS ಗರಿಷ್ಠ ಹೊಳಪನ್ನು ಹೊಂದಿದ್ದು, ತೀಕ್ಷ್ಣತೆ, ಸ್ಪಷ್ಟತೆ ಮತ್ತು ಪ್ರತಿಕ್ರಿಯೆಗಿಂತಲೂ ಉತ್ತಮ ವೀಕ್ಷಣಾ ಅನುಭವವನ್ನು ನೀಡುತ್ತವೆ ಎಂದು ಕಂಪೆನಿಯು ಹೇಳಿಕೊಂಡಿದೆ. ಇಷ್ಟೇ ಅಲ್ಲದೆ, ಈ ಎರಡೂ ಡಿಸ್‌ಪ್ಲೇಗಳು Tüv Rheinland Global Eye Protection 3.0 ಪ್ರಮಾಣೀಕರಣ ಮತ್ತು ವೈವಿದ್ಯಮಯ ಬಣ್ಣ ಪ್ರಮಾಣೀಕರಣವನ್ನೂ ಹೊಂದಿವೆ.

ಕಾರ್ಯಕ್ಷಮತೆಗಾಗಿ, Vivo X Fold 5 ಫೋನ್ ಶಕ್ತಿಯುತವಾದ Snapdragon 8 Gen 3 ಚಿಪ್‌ಸೆಟ್‌ ಹೊಂದಿದೆ. ಇದನ್ನು 16GB LPDDR5X RAM ಮತ್ತು 512GB UFS 4.1 ಸ್ಟೋರೇಜ್ನೊಂದಿಗೆ ಜೋಡಿಸಲಾಗಿದೆ. ಇದು ಗೇಮಿಂಗ್, ಮಲ್ಟಿಟಾಸ್ಕಿಂಗ್, ಮತ್ತು ಭಾರಿ ಆಪ್‌ಗಳ ನಿರ್ವಹಣೆಯಲ್ಲಿ ಉತ್ತಮ ಸಾಮರ್ಥ್ಯ ನೀಡುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, Android 15 ಆಧಾರಿತ FunTouchOS 15 ನಲ್ಲಿ ಕಾರ್ಯನಿರ್ವಹಿಸಲಿದೆ.

ಭಾರತದಲ್ಲಿ Vivo X Fold 5 ಫೋನ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ!

ಕ್ಯಾಮೆರಾ ವಿಭಾಗದಲ್ಲಿ, Vivo X Fold 5 ಫೋನ್ ಒಟ್ಟು ಮೂರು ಸಂವೇದಕಗಳಿರುವ ಶಕ್ತಿಶಾಲಿ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ, OIS (Optical Image Stabilization) ಬೆಂಬಲದ 50MP Sony IMX921 ಪ್ರಾಥಮಿಕ ಸೆನ್ಸಾರ್, 50MP ಟೆಲಿಫೋಟೋ ಕ್ಯಾಮೆರಾ (3x ಆಪ್ಟಿಕಲ್ ಮತ್ತು 100x ಡಿಜಿಟಲ್ ಜೂಮ್), ಮತ್ತು 50MP ಅಲ್ಟ್ರಾ-ವೈಡ್ ಲೆನ್ಸ್ ಸಹ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, Vivo X Fold 5 ಎರಡು 20MP ಫ್ರಂಟ್ ಕ್ಯಾಮೆರಾಗಳಿವೆ. ಇದಲ್ಲದೆ, ಈ ಫೋನ್‌ AI Image Studio ಎಡಿಟಿಂಗ್ ವೈಶಿಷ್ಟ್ಯವನ್ನೂ ಬೆಂಬಲಿಸುತ್ತದೆ.

ಬ್ಯಾಟರಿ ವಿಭಾಗದಲ್ಲಿ, Vivo X Fold 5 ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದ್ದು, ಇದು 80W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ, ಡ್ಯುಯಲ್ ನ್ಯಾನೋ ಸಿಮ್, Wi-Fi, Bluetooth 5.4, GPS, OTG, NFC ಮತ್ತು USB Type-C ಪೋರ್ಟ್ ವೈಶಿಷ್ಟ್ಯಗಳಿವೆ. ನೀರು ಮತ್ತು ಧೂಳು ನಿರೋಧಕ ಸುರಕ್ಷತೆಗೆ IPX8, IPX9, ಮತ್ತು IP5X ಪ್ರಮಾಣೀಕರಣ ಹೊಂದಿರುವ ಈ ಫೋನ್ ಮಡಿಸಿದಾಗ 9.2 ಮಿಮೀ ಮತ್ತು ತೆರೆದಾಗ ಕೇವಲ 4.3 ಮಿಮೀ ದಪ್ಪವಿದೆ. ಮತ್ತು ಇದರ ತೂಕ 217 ಗ್ರಾಂ. ಆಗಿದೆ.

Vivo X Fold 5 ಸ್ಮಾರ್ಟ್‌ಫೋನ್ ಬೆಲೆ:
ಭಾರತದಲ್ಲಿ Vivo X Fold 5 ಸ್ಮಾರ್ಟ್‌ಫೋನ್ ಏಕೈಕ 16GB RAM ಮತ್ತು 512GB ಸ್ಟೋರೇಜ್ ಮಾದರಿಯಲ್ಲಿ ₹1,49,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಟೈಟಾನಿಯಂ ಗ್ರೇ ಬಣ್ಣದಲ್ಲಿ ಲಭ್ಯವಿರಲಿರುವ ಈ ಫೋನ್ ಪ್ರಸ್ತುತ ಪ್ರೀ-ಬುಕ್ಕಿಂಗ್ ಮಾಡಲು ಲಭ್ಯವಿದ್ದು, ಇದೇ ಜುಲೈ 30 ರಿಂದ ಫ್ಲಿಪ್‌ಕಾರ್ಟ್ ಮತ್ತು Vivo ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಬರಲಿದೆ. ಒಟ್ಟಾರೆಯಾಗಿ, Vivo X Fold 5 ಫೋನ್ಹೆಚ್ಚು ವೈಶಿಷ್ಟ್ಯಪೂರ್ಣವಾದ ಮತ್ತು ಪ್ರೀಮಿಯಂ ಮಡಿಸಬಹುದಾದ ಸ್ಮಾರ್ಟ್‌ಫೋನ್ ಆಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉನ್ನತ ವಿನ್ಯಾಸದ ಸಂಯೋಜನೆಯಾಗಿದೆ.

Best Mobiles in India

English summary
Vivo's X Fold 5 features a 6,000mAh battery, complemented by 80W wired and 40W wireless charging capabilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+