Home
ಸುದ್ದಿಜಾಲ

ಭಾರತದಲ್ಲಿ Vivo X Fold 5 ಮತ್ತು Vivo X200 FE ಫೋನ್‌ಗಳ ಬೆಲೆ ಸೋರಿಕೆ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ವಿವೋ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಾದ Vivo X Fold 5 ಮತ್ತು Vivo X200 FE ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ದೇಶದಲ್ಲಿಇದೇ ಜುಲೈ 14 ರಂದು ಮಧ್ಯಾಹ್ನ 12 ಗಂಟೆಗೆ Vivo X Fold 5 ಮತ್ತು Vivo X200 FE ಎರಡು ಫೋನ್‌ಗಳು ಬಿಡುಗಡೆಯಾಗಲಿವೆ ಮತ್ತು ಖರೀದಿಗೆ Vivo ಇಂಡಿಯಾ ಇ-ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿರುತ್ತವೆ ಎಂದು ವಿವೋ ಕಂಪೆನಿ ತಿಳಿಸಿದೆ. ಇದೀಗ ಈ ಎರಡೂ ಫೋನ್‌ಗಳ ಬೆಲೆ ಮಾಹಿತಿಯು ಜನಪ್ರಿಯ ಟಿಪ್‌ಸ್ಟಾರ್ ಓರ್ವರಿಂದ ಸೋರಿಕೆಯಾಗಿದೆ.

ಹೌದು, ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು ಭಾರತದಲ್ಲಿ ಮುಂಬರುವ Vivo ಹ್ಯಾಂಡ್‌ಸೆಟ್‌ಗಳ ನಿರೀಕ್ಷಿತ ಬೆಲೆಗಳನ್ನು ಹಂಚಿಕೊಂಡಿದ್ದಾರೆ. Vivo X200 FE ಫೋನಿನ 12GB+256GB ರೂಪಾಂತರವು ದೇಶದಲ್ಲಿ ರೂ. 54,999 ಕ್ಕೆ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಆದರೆ 16GB+512GB ಕಾನ್ಫಿಗರೇಶನ್ ರೂ. 59,999 ಕ್ಕೆ ಮಾರಾಟವಾಗಬಹುದು ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ, Vivo X Fold 5 16GB+512GB ಆಯ್ಕೆಯಲ್ಲಿ ಲಭ್ಯವಿರಲಿದೆ ಮತ್ತು ಇದರ ಬೆಲೆ ಭಾರತದಲ್ಲಿ ರೂ. 1,49,999 ಆಗಿರಬಹುದು ಎಂದು ಅಭಿಷೇಕ್ ಯಾದವ್ ಅವರು ಹೇಳಿದ್ದಾರೆ

ಪುಸ್ತಕದ ರೀತಿ ಮಡಿಸಬಹುದಾದ ವಿನ್ಯಾಸವನ್ನು ಹೊಂದಿರುವ Vivo X Fold 5 ಫೋನ್ ಅನ್ನು ಕಳೆದ ಜೂನ್‌ನಲ್ಲಿ ಚೀನಾದಲ್ಲಿ ಅನಾವರಣಗೊಳಿಸಲಾಗಿದ್ದರೆ, ಇತ್ತ ಮಧ್ಯಮ ಬೆಲೆಯಲ್ಲಿ ಬರಬಹುದಾದ Vivo X200 FE ಫೋನ್ ಕೂಡ ಜೂನ್‌ ಅಂತ್ಯದ ವೇಳೆಗೆ ತೈವಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಈ ಎರಡು ಪೋನ್‌ಗಳು ತನ್ನ ಅತ್ಯಾಕರ್ಷಕ ಫೀಚರ್ಸ್ ಮತ್ತು ವೈಶಿಷ್ಟ್ಯಗಳಿಂದ ಗಮನಸೆಳೆದಿವೆ. ಹಾಗಾದರೆ, ಭಾರತದ ಮಾರುಕಟ್ಟೆಗೆ ಶೀಘ್ರವೇ ಆಗಮಿಸುತ್ತಿರುವ Vivo X Fold 5 ಮತ್ತು Vivo X200 FE ಫೋನ್‌ಗಳ ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಭಾರತದಲ್ಲಿ Vivo X Fold 5 ಮತ್ತು Vivo X200 FE ಫೋನ್‌ಗಳ ಬೆಲೆ ಸೋರಿಕೆ!

Vivo X200 FE: ವೈಶಿಷ್ಟ್ಯಗಳು

  1. Vivo X200 FE ಸ್ಮಾರ್ಟ್‌ಫೋನ್ ಪ್ರಸ್ತುತ ತೈವಾನ್ ಮತ್ತು ಮಲೇಷ್ಯಾದಲ್ಲಿ ಕಪ್ಪು, ನೀಲಿ, ಗುಲಾಬಿ ಮತ್ತು ಹಳದಿ ಬಣ್ಣಗಳಲ್ಲಿ ಲಭ್ಯವಿದೆ. ಭಾರತೀಯ ಆವೃತ್ತಿಯ ಕೆಲವು ವೈಶಿಷ್ಟ್ಯಗಳನ್ನು Vivo ಕಂಪನಿಯು ಇತ್ತೀಚೆಗೆ ಬಹಿರಂಗಪಡಿಸಿದೆ. Vivo X200 FE ಫೋನ್ Android 15 ಆಧಾರಿತ Funtouch 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದರಲ್ಲಿ 6.31-ಇಂಚಿನ ಡಿಸ್‌ಪ್ಲೇ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್ ಇದೆ.
  2. ಕ್ಯಾಮೆರಾ ವಿಭಾಗದಲ್ಲಿ, Vivo X200 FE ಅತ್ಯಾಧುನಿಕ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ Zeiss-ಬ್ರಾಂಡೆಡ್ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವಿದೆ: 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ. ಈ ಸೆಟಪ್ ವಿವಿಧ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ.
  3. ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, Vivo X200 FE 6,500mAh ಬ್ಯಾಟರಿಯನ್ನು ಹೊಂದಿದ್ದು, ಇದು ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ. 90W ವೇಗದ ಚಾರ್ಜಿಂಗ್ ಬೆಂಬಲವು ಇದನ್ನು ವೇಗವಾಗಿ ಚಾರ್ಜ್ ಮಾಡಲು ಅನುಕೂಲವಾಗಿಸುತ್ತದೆ. ಕಂಪನಿಯ ಪ್ರಕಾರ, ಈ ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ 25.44 ಗಂಟೆಗಳ YouTube ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ. ಈ ಫೋನ್ 12GB RAM ಮತ್ತು 512GB ವರೆಗೆ ಆನ್‌ಬೋರ್ಡ್ ಮೆಮೊರಿಯೊಂದಿಗೆ ಬರುತ್ತದೆ.

Vivo X Fold 5: ವೈಶಿಷ್ಟ್ಯಗಳು
Vivo X Fold 5, ಮಡಿಸಬಹುದಾದ ಈ ಸ್ಮಾರ್ಟ್‌ಫೋನಿನ ಭಾರತೀಯ ಮಾದರಿಯು ಚೀನೀ ರೂಪಾಂತರದಂತೆಯೇ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

  1. Vivo X Fold 5 6.53-ಇಂಚಿನ ಕವರ್ ಡಿಸ್ಪ್ಲೇ ಮತ್ತು 8.03-ಇಂಚಿನ ಒಳಗಿನ ಡಿಸ್ಪ್ಲೇ ಹೊಂದಿದೆ. ಎರಡೂ ಡಿಸ್ಪ್ಲೇಗಳು 8T LTPO ಪ್ಯಾನೆಲ್‌ಗಳನ್ನು ಬಳಸುತ್ತವೆ, 4,500 ನಿಟ್ಸ್ ಸ್ಥಳೀಯ ಪೀಕ್ ಬ್ರೈಟ್‌ನೆಸ್, 120Hz ರಿಫ್ರೆಶ್ ದರ, ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್, TÜV ರೈನ್‌ಲ್ಯಾಂಡ್ ಗ್ಲೋಬಲ್ ಐ ಪ್ರೊಟೆಕ್ಷನ್ 3.0 ಮತ್ತು ಝೈಸ್ ಮಾಸ್ಟರ್ ಕಲರ್ ಸರ್ಟಿಫಿಕೇಶನ್‌ಗಳನ್ನು ಬೆಂಬಲಿಸುತ್ತವೆ.
  2. ಈ ಫೋನ್ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ, ಇದು 16GB ವರೆಗೆ LPDDR5X RAM ಮತ್ತು 1TB ವರೆಗೆ UFS4.1 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಒದಗಿಸುತ್ತದೆ. ಇದು ಆಂಡ್ರಾಯ್ಡ್ 15 ಆಧಾರಿತ OriginOS 5 ನೊಂದಿಗೆ ಬರುತ್ತದೆ.
  3. ಕ್ಯಾಮೆರಾ ವಿಭಾಗದಲ್ಲಿ, Vivo X Fold 5 ಝೈಸ್ ಟಿ ಲೆನ್ಸ್ ಲೇಪನದೊಂದಿಗೆ ಶಕ್ತಿಶಾಲಿ ಟ್ರಿಪಲ್ ರಿಯರ್ ಕ್ಯಾಮೆರಾ ಯುನಿಟ್ ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 3x ಆಪ್ಟಿಕಲ್ ಜೂಮ್ ಬೆಂಬಲದ 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಸೇರಿವೆ. ಈ ಕ್ಯಾಮೆರಾ ವ್ಯವಸ್ಥೆ ಟೆಲಿಫೋಟೋ ಮ್ಯಾಕ್ರೋ ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ, ಒಳ ಮತ್ತು ಹೊರ ಪರದೆಗಳಲ್ಲಿ 20-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾಗಳು ಇವೆ.
  4. Vivo X Fold 5 ಫೋನ್ 6,000mAh ಬ್ಯಾಟರಿಯನ್ನು ಹೊಂದಿದ್ದು, 80W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 217 ಗ್ರಾಂ ತೂಕದ ಈ ಸಾಧನವು ವಿಶ್ವದ ಅತ್ಯಂತ ಹಗುರವಾದ ಮಡಿಸಬಹುದಾದ ಫೋನ್ ಆಗಿದೆ.
  5. ಈ ಫೋನ್ IP5X ಧೂಳು ನಿರೋಧಕತೆ ಮತ್ತು IPX8+IPX9+ ನೀರಿನ ಪ್ರತಿರೋಧಕತೆ ಹೊಂದಿದೆ. ಇದು -20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಹ ಕಾರ್ಯನಿರ್ವಹಿಸುತ್ತದೆ ಎಂದು Vivo ಖಚಿತಪಡಿಸಿದೆ. ಭದ್ರತೆಗೆ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ. ಗಮನಾರ್ಹವಾಗಿ, Vivo X Fold 5, ಐಫೋನ್, ಏರ್‌ಪಾಡ್‌ಗಳು, ಮ್ಯಾಕ್‌ಬುಕ್, ಆಪಲ್ ವಾಚ್ ಮತ್ತು ಐಕ್ಲೌಡ್ ಸೇರಿದಂತೆ Apple ನ ಪರಿಸರ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳುತ್ತದೆ.
  6. ಕಳೆದ Vivo X Fold 3 Pro ಗೆ ಹೋಲಿಸಿದರೆ, ಇದು ಹಗುರ ಮತ್ತು ತೆಳ್ಳಗಾಗಿದ್ದು, ಸಾಗಿಸಲು ಸುಲಭವಾಗಿದೆ. ಮಡಿಸಿದಾಗ 9.2 ಮಿಮೀ ದಪ್ಪ ಮತ್ತು ಬಿಚ್ಚಿದಾಗ 4.3 ಮಿಮೀ ಅಳತೆಯ ಈ ಸ್ಮಾರ್ಟ್‌ಫೋನ್ 217 ಗ್ರಾಂ ತೂಕ ಹೊಂದಿದೆ.
Best Mobiles in India

English summary
Tipster Abhishek Yadav (@yabhishekhd) has revealed the potential prices for the upcoming Vivo X Fold 5 and Vivo X200 FE in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+