Home
ಸುದ್ದಿಜಾಲ

ಎಂಟ್ರಿ ಕೊಡಲಿದೆ 'ವಿವೋ X100 5G' ಫೋನ್‌: ಮಾರುಕಟ್ಟೆ ಪಕ್ಕಾ ಶೇಕ್‌ ಆಗಲಿದೆ!?

ವಿವೋ ಸಂಸ್ಥೆಯು ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ವಿವೋ ಸಂಸ್ಥೆಯು ಮತ್ತೆ ಹೊಸದಾಗಿ ಮೊಬೈಲ್‌ ಲಾಂಚ್ ಮಾಡಲು ಸಜ್ಜಾಗಿದ್ದು, ಬರಲಿರುವ ನೂತನ ಫೋನ್‌ ವಿವೋ X100 5G ಆಗಿದೆ.

ಹೌದು, ವಿವೋ ಮೊಬೈಲ್‌ ಕಂಪನಿಯು ಈಗ X ಸರಣಿಯಲ್ಲಿ ನೂತನವಾಗಿ ವಿವೋ X100 5G ಮೊಬೈಲ್‌ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದು, ಆದರೆ ಅದರ ಲೀಕ್ ಫೀಚರ್ಸ್‌ ಗ್ರಾಹಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಬಿಡುಗಡೆ ಆಗಲಿರುವ ವಿವೋ X100 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಪ್ರೊಸೆಸರ್‌ ಹೊಂದಿರಲಿದೆ.

ಎಂಟ್ರಿ ಕೊಡಲಿದೆ 'ವಿವೋ X100 5G' ಫೋನ್‌: ಮಾರುಕಟ್ಟೆ ಪಕ್ಕಾ ಶೇಕ್‌ ಆಗಲಿದೆ!?

ಬರಲಿರುವ ನೂತನ ವಿವೋ X100 5G ಫೋನ್‌ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಬಹುತೇಕ ಖಚಿತವಾಗಿದ್ದು, ಇದರೊಂದಿಗೆ ಇನ್ನೊಂದು ವೇರಿಯಂಟ್‌ ಆಯ್ಕೆ ಅನ್ನು ಪಡೆದಿರುವ ನಿರೀಕ್ಷೆಗಳಿವೆ. ಇನ್ನುಳಿದಂತೆ ವಿವೋದ ಮುಂಬರುವ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ X100 5G ಡಿಸ್‌ಪ್ಲೇ ಮತ್ತು ಪ್ರೊಸೆಸರ್‌ ಮಾಹಿತಿ : ವಿವೋ X100 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಪ್ರೊಸೆಸರ್‌ ಅನ್ನು ಒಳಗೊಂಡಿರುವುದು ಬಹುತೇಕ ಖಚಿತ ಆಗಿದೆ. ಇದರೊಂದಿಗೆ ಆಂಡ್ರಾಯ್ಡ್‌ 14 (Android 14) ಓಎಸ್ ಸಪೋರ್ಟ್‌ ಸಹ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್‌ 6.78 ಇಂಚಿನ ಡಿಸ್‌ಪ್ಲೇ ಪಡೆದಿರಲಿದ್ದು, 120Hz ರಿಫ್ರೆಶ್ ರೇಟ್‌ ಒಳಗೊಂಡಿರಲಿದೆ. ಹಾಗೆಯೇ ಅಮೋಲೆಡ್‌ ಮಾದರಿಯ ಡಿಸ್‌ಪ್ಲೇ ಇರಲಿದೆ.

ವಿವೋ X100 5G ಫೋನಿನ ಇತರೆ ಫೀಚರ್ಸ್ ಮಾಹಿತಿ : ಕೆಲವು ಲೀಕ್ ಮಾಹಿತಿ ಪ್ರಕಾರ ವಿವೋ X100 5G ಫೋನ್‌ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿರಲಿದೆ. ಹಾಗೆಯೇ ಇದರೊಂದಿಗೆ ಗ್ರಾಹಕರಿಗೆ ಇನ್ನೊಂದು ವೇರಿಯಂಟ್‌ ಆಯ್ಕೆ ನೀಡಲಿದೆ ಎನ್ನಲಾಗಿದೆ.

ವಿವೋ X100 5G ಫೋನ್ ಮೂರು ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುವ ಸಾಧ್ಯತೆಗಳು ಇವೆ. ಅವುಗಳು ಕ್ರಮವಾಗಿ ಕಪ್ಪು, ಪರ್ಪಲ್ ಮತ್ತು ವೈಟ್‌ ಕಲರ್ ಆಗಿವೆ. ಹಾಗೆಯೇ ಈ ಫೋನ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೇ ವಿವೋ X100 ಫೋನ್‌ 100W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ನೀಡುತ್ತದೆ ಎಂದು ಹೇಳಲಾಗುತ್ತಿದ್ದು, ಈ ಹಿಂದಿನ ವಿವೋ X90 ಸರಣಿಗಿಂತ ಹೆಚ್ಚು ವೇಗ ಇರಲಿದೆ.

ಲೀಕ್ ಮಾಹಿತಿಯಂತೆ ವಿವೋ X100 5G ಫೋನ್ ವಿವೋ ಸಂಸ್ಥೆಯ 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾದಲ್ಲಿ ಲಾಂಚ್ ಆಗಲಿದೆ ಎಂದು ವದಂತಿಗಳಿವೆ. ಈ ಮೊಬೈಲ್‌ ಮುಂದಿನ 2024 ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ವಿವೋ Y53t ಮೊಬೈಲ್‌ ಫೀಚರ್ಸ್‌ : ವಿವೋ ಸಂಸ್ಥೆಯ ವಿವೋ Y53t ಮೊಬೈಲ್‌ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ ಪವರ್‌ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕೆಲಸ ಮಾಡಲಿದೆ. ಇನ್ನು ಈ ಮೊಬೈಲ್‌ 4GB + 128GB ಮತ್ತು 6GB + 128GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.

Best Mobiles in India

English summary
Vivo X100 5G Specifications and Launch Timeline Leaked. all details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+