Home
ಸುದ್ದಿಜಾಲ

ವಿವೋ X100 ಸರಣಿಯಲ್ಲಿ ಇರಲಿದೆ ನೀವು ಹಿಂದೆಂದೂ ನೋಡಿರದ ಕ್ಯಾಮೆರಾ! ಕೇಳಿದ್ರೆ ಅಚ್ಚರಿ ಪಡ್ತೀರಾ?

ಸೆಲ್ಫಿ ಪ್ರಿಯರು ಅತಿ ಹೆಚ್ಚು ಲೈಕ್‌ ಮಾಡುವ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಎಂದರೆ ಅದು ವಿವೋ. ವಿವೋ ಕಂಪೆನಿ ಕೂಡ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಸೆಟ್‌ಅಪ್‌ ಮೇಲೆ ಸಾಕಷ್ಟು ಕಾಳಜಿ ಹಾಗೂ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದೆ. ಅದರಲ್ಲೂ ನೀವು ನಿರೀಕ್ಷೆಗೂ ಮೀರಿದ ಕ್ಯಾಮೆರಾ ಅನುಭವವನ್ನು ವಿವೋ X100 ಸರಣಿಯಲ್ಲಿ ನೋಡಬಹುದು ಎಂದು ವರದಿಯಾಗಿದೆ.

ಹೌದು, ವಿವೋ X100 ಸರಣಿಯು ಹಿಂದೆಂದಿಗಿಂತಲೂ ರೋಮಾಂಚನಕಾರಿಯಾದ ಕ್ಯಾಮೆರಾ ಅನುಭವ ನೀಡಲಿದೆ ಎನ್ನಲಾಗಿದೆ. ಈ ವರ್ಷದ ನವೆಂಬರ್‌ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಬಹುದು ಎಂದು ವರದಿಯಾಗಿದೆ. ಈ ಸರಣಿಯಲ್ಲಿ ವಿವೋ X100 ಪ್ರೊ+ ಸ್ಮಾರ್ಟ್‌ಫೋನ್‌ 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಹೊಂದಿರಲಿದ್ದು, ಇದು ಕಸ್ಟಮ್-ನಿರ್ಮಿತ ಸೆನ್ಸಾರ್‌ ಆಗಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಫೋನ್‌ ಬಗ್ಗೆ ಯಾವೆಲ್ಲಾ ಮಾಹಿತಿ ಬಹಿರಂಗವಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ X100 ಸರಣಿಯಲ್ಲಿ ಇರಲಿದೆ ನೀವು ಹಿಂದೆಂದೂ ನೋಡಿರದ ಕ್ಯಾಮೆರಾ!

ವಿವೋ X100 ಪ್ರೊ+ ಕ್ಯಾಮೆರಾ ವಿಶೇಷತೆ ಏನ್‌ ಗೊತ್ತಾ?
ವಿವೋ X100 ಪ್ರೊ+ ಸ್ಮಾರ್ಟ್‌ಫೋನ್‌ 200MP ಪೆರಿಸ್ಕೋಪ್ ಕ್ಯಾಮೆರಾ ಹೊಂದಿರಲಿದೆ. ಇದು ಕಸ್ಟಮ್‌ ನಿರ್ಮಿತ ಸೆನ್ಸಾರ್‌ ಆಗಿದೆ. ಅಲ್ಲದೆ ಇದನ್ನು IMX890 ಮತ್ತು IMX866 ಮಾದರಿಗಳಂತಹ ಸೋನಿ ಸೆನ್ಸಾರ್‌ಗಳ ಆಪ್ಟಿಕಲ್ ಕಾರ್ಯಕ್ಷಮತೆಯನ್ನು ಮೀರಿಸಲಿದೆ ಎಂದು ವರದಿಯಾಗಿದೆ. ಈ ಕ್ಯಾಮೆರಾವನ್ನು ವಿವೋ ಮತ್ತು ಸ್ಯಾಮ್‌ಸಂಗ್‌ ನಡುವಿನ ಸಹಯೋಗದಿಂದ ತಯಾರಿಸಿರುವುದರಿಂದ ಕ್ಯಾಮರಾ ಸೆನ್ಸಾರ್‌ ಅನ್ನು ತಾತ್ಕಾಲಿಕವಾಗಿ Samsung HPV ಎಂದು ಹೆಸರಿಸಲಾಗಿದೆ.

ಈ ಕ್ಯಾಮೆರಾ ಸ್ಯಾಮ್‌ಸಂಗ್ HP3 ಅನ್ನು ಆಧರಿಸಿದೆ ಹೇಳಲಾಗಿದ್ದು, ಕ್ಯಾಮೆರಾ ಸೆನ್ಸಾರ್‌ 1/1.4-ಇಂಚಿನ ಗಾತ್ರವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಸ್ಥಳೀಯ 3x ಅಥವಾ 5x ಆಪ್ಟಿಕಲ್ ಜೂಮ್ ಸಾಮರ್ಥ್ಯಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ ಸುಧಾರಿತ AI ಅಲ್ಗಾರಿದಮ್‌ಗಳು ಬಳಕೆದಾರರಿಗೆ 10x ಆಪ್ಟಿಕಲ್ ಜೂಮ್ ಅನುಭವವನ್ನು ನೀಡಲಿದೆ ಎಂದು ಆನ್‌ಲೈನ್‌ನಲ್ಲಿ ಮಾಹಿತಿ ಸೋರಿಕೆಯಾಗಿದೆ.

ವಿವೋ X100 ಸರಣಿಯಲ್ಲಿ ಇರಲಿದೆ ನೀವು ಹಿಂದೆಂದೂ ನೋಡಿರದ ಕ್ಯಾಮೆರಾ!

ಇನ್ನು ವಿವೋ X100 ಸರಣಿಯು ವಿವೋ X100 ಮತ್ತು ವಿವೋ X100 ಪ್ರೊ ಸ್ಮಾರ್ಟ್‌ಫೋನ್‌ಗಳು ಮುಂಬರುವ ಡೈಮೆನ್ಸಿಟಿ 9300 ಚಿಪ್‌ಸೆಟ್‌ನೊಂದಿಗೆ ಬರಲಿದೆ ಎನ್ನಲಾಗಿದೆ. ಅಂದರೆ ಈ ಹೊಸ ಪ್ರೊಸೆಸರ್‌ ಇನ್ನು ಕೂಡ ಮಾರುಕಟ್ಟಗೆ ಬಂದಿಲ್ಲ ಅನ್ನೊದು ಗಮನಿಸಬೇಕಾದ ಸಂಗತಿ. ಅಲ್ಲದೆ ಈ ಪ್ರೊಸೆಸರ್‌ ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ. ಆದರೆ ವಿವೋ X100 Pro+ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 8 Gen 3 ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ ಚೀನಾದ ಹೊರಗಡೆಯು ಕೂಡ ಬಿಡುಗಡೆಯಾಗಲಿದೆಯಾ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಇನ್ನು ಇತ್ತೀಚಿನ ವಿವೋ ಸುದ್ದಿಗಳನ್ನು ಗಮನಿಸುವುದಾದರೆ ವಿವೋ ಕಂಪೆನಿಯು ತನ್ನ ವಿವೋ X80 ಪ್ರೊ ಬೆಲೆ ಕಡಿವನ್ನು ಕಂಡಿದೆ. ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಬರೋಬ್ಬರಿ 31% ಡಿಸ್ಕೌಂಟ್‌ ನೀಡಲಾಗಿದೆ. ಇನ್ನು ಈ ಫೋನ್ 6.56 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ.ಇದು ಆಕ್ಟಾ-ಕೋರ್ ಡೈಮೆನ್ಸಿಟಿ 1200 CPU ಬಲ ಹೊಂದಿದ್ದು, ಮಾಲಿ G77 MC9 GPU ಗ್ರಾಫಿಕ್ಸ್ ಆಯ್ಕೆ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯೊಂದಿಗೆ ಕಾಣಿಸಿಕೊಂಡಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, ಎರಡು 12 ಮೆಗಾಪಿಕ್ಸೆಲ್‌ ಸೆನ್ಸರ್‌ ಹಾಗೂ 8 ಮೆಗಾಪಿಕ್ಸೆಲ್‌ ಲೆನ್ಸ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

Best Mobiles in India

English summary
Vivo X100 Pro+ Smartphone come with custom-made 200MP periscope camera: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+