Home
ಸುದ್ದಿಜಾಲ

ವಿವೋ X20 ಕ್ರಿಸ್ ಮಸ್ ಎಡಿಷನ್: ವಿಶೇಷ ವಿನ್ಯಾಸ.!

By Lekhaka

ಚೀನಾ ಮೂಲದ ವಿವೋ ಕಂಪನಿ ಪ್ರತಿ ವಿಶೇಷ ಸಂದರ್ಭದಲ್ಲಿಯೂ ಅದಕ್ಕೆ ಸಂಬಂಧಿಸಿದಂತೆ ಲಿಮಿಟೆಡ್ ಆಡಿಷನ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುವುದನ್ನು ರೂಡಿಸಿಕೊಂಡಿದೆ. ಇದೇ ಮಾದರಿಯಲ್ಲಿ ಈ ಬಾರಿ ಕ್ರಿಸ್ ಮಸ್ ಅಂಗವಾಗಿ ವಿವೋ X20 ಕ್ರಿಸ್ ಮಸ್ ಎಡಿಷನ್ ಅನ್ನು ಬಿಡುಗಡೆ ಮಾಡಿದ ಎನ್ನಲಾಗಿದೆ. ಹಬ್ಬದ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಹೊಸ ಆವೃತ್ತಿಯನ್ನು ನೀಡಲಿದೆ.

ವಿವೋ X20 ಕ್ರಿಸ್ ಮಸ್ ಎಡಿಷನ್: ವಿಶೇಷ ವಿನ್ಯಾಸ.!

ಈಗಾಗಲೇ ಮಾರುಕಟ್ಟೆಯಲ್ಲಿ ವಿವೋ X20 ಒಟ್ಟು 7 ವಿವಿಧ ಆವೃತ್ತಿಯಲ್ಲಿ ದೊರೆಯುತ್ತಿದೆ ಎನ್ನಲಾಗಿದೆ. ಇದರೊಂದಿಗೆ ಈಗ ಮತ್ತೊಂದು ಹೊಸ ಆವೃತ್ತಿಯೂ ಕಾಣಿಸಿಕೊಂಡಿದೆ. ಇದಕ್ಕಾಗಿಯೇ ಫೋನಿನ ಹೊರ ವಿನ್ಯಾಸದಲ್ಲಿ ಕೊಂಚ ಬದಲಾವಣೆಯನ್ನು ಮಾಡಿದೆ. ಹೊಸ ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಈ ಸ್ಮಾರ್ಟ್ ಫೋನ್ ಬಾಕ್ಸ್ ಸಹ ಹೊಸ ವಿನ್ಯಾಸದಿಂದ ಕೂಡಿರಲಿದೆ. ಇದಕ್ಕಾಗಿಯೇ ರೆಡ್ ಬಣ್ಣದಲ್ಲಿ ಮೊಬೈಲ್ ಬ್ಯಾಕ್ ಕವರ್ ವಿನ್ಯಾಸ ಮಾಡಲಾಗಿದೆ. ಕ್ರಿಸ್ ಮಸ್ ಗಾಗಿಯೇ ಈ ಹೊಸ ವಿನ್ಯಾಸವನ್ನು ಮಾಡಲಾಗಿದೆ ಎನ್ನಲಾಗಿದೆ. ರೂ.31,124ರ ಅಸುಪಾಸಿನಲ್ಲಿ ಈ ಫೋನ್ ದೊರೆಯಲಿದೆ.

ವಿವೋ X20 ಕ್ರಿಸ್ ಮಸ್ ಎಡಿಷನ್: ವಿಶೇಷ ವಿನ್ಯಾಸ.!

ವಿವೋ X20 ಕ್ರಿಸ್ ಮಸ್ ಎಡಿಷನ್ ಸ್ಮಾರ್ಟ್ ಫೋನಿನಲ್ಲಿ 4GB RAM ಮತ್ತು 64GB/128GB ಇಂಟರ್ನಲ್ ಮಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ 6,01 ಇಂಚಿನ 18:9 ಅನುಪಾತದ ಡಿಸ್ ಪ್ಲೇಯನ್ನು ಈ ಫೋನಿನಲ್ಲಿ ನೀಡಲಾಗಿದೆ. ಇದಲ್ಲದೇ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಇದರಲ್ಲಿ ಕಾಣಬಹುದಾಗಿದೆ.

ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, 12 MP + 5MP ಎರಡು ಲೈನ್ಸ್ ಗಳನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 12 MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ ಎನ್ನಲಾಗಿದೆ. ಇದಲ್ಲದೇ 3245mAh ಬ್ಯಾಟರಿಯನ್ನು ಈ ಫೋನಿನಲ್ಲಿ ನೀಡಲಾಗಿದೆ.

Best Mobiles in India

English summary
Vivo has yet again unveiled another special edition of Vivo X20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+