Home
ಸುದ್ದಿಜಾಲ

ಭಾರತೀಯ ಮಾರುಕಟ್ಟೆಗೆ Vivo X200 FE: ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ಬೆಲೆ!

ಚೀನಾದ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ಸಂಸ್ಥೆಯು ಭಾರತದಲ್ಲಿ ತನ್ನ ಪ್ರೀಮಿಯಂ ಫ್ಲ್ಯಾಗ್‌ಶಿಪ್ X200 (Vivo X200 FE) ಸ್ಮಾರ್ಟ್‌ಫೋನ್ ಸರಣಿಗೆ ಹೊಸ ಸೇರ್ಪಡೆಯನ್ನು ಸೇರಿಸಲು ಸಜ್ಜಾಗಿದೆ. ವರದಿಗಳ ಪ್ರಕಾರ, Vivo ಕಂಪೆನಿಯ ಬಹುನಿರೀಕ್ಷಿತ Vivo X200 FE ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರ ಮಾಹಿತಿಯನ್ನು ಉಲ್ಲೇಖಿಸಿ ಸ್ಮಾರ್ಟ್‌ಪ್ರಿಕ್ಸ್ ವರದಿ ಮಾಡಿರುವ ಪ್ರಕಾರ, ಭಾರತದಲ್ಲಿ Vivo X200 FE ಸ್ಮಾರ್ಟ್‌ಫೋನ್ ಇದೇ ಜುಲೈ ನಲ್ಲಿ ಬಿಡುಗಡೆಯಾಗಲಿದ್ದು, ಇದರ ಬೆಲೆಯು ಸುಮಾರು 50,000 ರಿಂದ 60,000 ರೂಪಾಯಿಗಳವರೆಗೆ ಇರಬಹುದು. ಮತ್ತು ಈ ಫೋನ್ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನಿನಲ್ಲಿನ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯೊಂದಿಗೆ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ವರದಿಗಳ ಪ್ರಕಾರ, ಹೊಸ Vivo X200 FE 120Hz ರಿಫ್ರೆಶ್ ದರದೊಂದಿಗೆ 1.5K OLED ಡಿಸ್ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದು ಉತ್ತಮ ದೃಶ್ಯ ಅನುಭವವನ್ನು ನೀಡುತ್ತದೆ. ಪ್ರೊಸೆಸರ್ ಕುರಿತ ಅಧಿಕೃತ ಮಾಹಿತಿಯು ಇನ್ನೂ ಬಹಿರಂಗವಾಗಿಲ್ಲದಿದ್ದರೂ, ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್‌ನ ವಿಶೇಷ ಆವೃತ್ತಿಯನ್ನು ಬಳಸುವ ಸಾಧ್ಯತೆಯಿದೆ. ಕೆಲವು ಮೂಲಗಳ ಪ್ರಕಾರ, ಇದನ್ನು ಡೈಮೆನ್ಸಿಟಿ 9400e ಎಂದು ಕರೆಯಬಹುದು. Vivo X200 FE ಎರಡು ವಿಭಿನ್ನ ಮಾದರಿಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಮತ್ತು ಇದು ಜುಲೈ ತಿಂಗಳಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳು ತಿಳಿಸಿವೆ.ಭದ್ರತೆಗಾಗಿ, ಫೋನ್ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿರಬಹುದು, ಇದು ಅನುಕೂಲಕರ ಮತ್ತು ಸುರಕ್ಷಿತ ಅನ್‌ಲಾಕಿಂಗ್ ಅನ್ನು ಖಚಿತಪಡಿಸುತ್ತದೆ.

ಭಾರತೀಯ ಮಾರುಕಟ್ಟೆಗೆ Vivo X200 FE: ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ಬೆಲೆ!

ಕ್ಯಾಮೆರಾ ವಿಭಾಗದಲ್ಲಿ, Vivo X200 FE ಸ್ಮಾರ್ಟ್‌ಫೋನ್ Zeiss ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ IMX921 ಪ್ರಾಥಮಿಕ ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಸೋನಿ IMX882 3x ಟೆಲಿಫೋಟೋ ಲೆನ್ಸ್ ಇರಬಹುದು. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸುವ ಸಾಧ್ಯತೆಯಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್‌ನಿಂದ ಚಾಲಿತವಾಗಿರಲಿರುವ ಈ Vivo X200 FE ಸ್ಮಾರ್ಟ್‌ಫೋನ್ AI ಸೀಸನಲ್ ಭಾವಚಿತ್ರಗಳಂತಹ ಕೃತಕ ಬುದ್ಧಿಮತ್ತೆ (AI) ವೈಶಿಷ್ಟ್ಯಗಳನ್ನು ಬೆಂಬಲಿಸುವ ಸಾಧ್ಯತೆಯಿದೆ, ಈ ವೈಶಿಷ್ಟ್ಯವು ಈವರೆಗೆ ಚೀನಾಕ್ಕೆ ಮಾತ್ರ ಸೀಮಿತವಾಗಿತ್ತು ಎಂಬುದನ್ನು ಗಮನಿಸಬೇಕಾದ ಸಂಗತಿ.

ಇನ್ನುಳಿದಂತೆ, ಈ Vivo X200 FE ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.31-ಇಂಚಿನ LTPO OLED ಪರದೆಯನ್ನು ಹೊಂದಿದೆ ಎಂದು ವರದಿಯಾಗಿದೆ. ಫೋನ್ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಧೂಳು ಮತ್ತು ನೀರಿನ ಒಳಹರಿವಿನ ವಿರುದ್ಧ IP68 + IP69 ರೇಟಿಂಗ್‌ನೊಂದಿಗೆ ಬರಬಹುದು. ಇದು 200 ಗ್ರಾಂ ತೂಗಬಹುದು. ಇಷ್ಟೇ ಅಲ್ಲದೆ, Vivo ತನ್ನ ಈ ಹೊಸ ಸ್ಮಾರ್ಟ್‌ಫೋನ್‌ನೊಂದಿಗೆ ಮೂರು ವರ್ಷಗಳ OS ಅಪ್‌ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ನೀಡುವ ಸಾಧ್ಯತೆಯಿದೆ.ಒಟ್ಟಾರೆಯಾಗಿ, Vivo X200 FE ಭಾರತೀಯ ಮಾರುಕಟ್ಟೆಯಲ್ಲಿ ಒಂದು ಪ್ರಬಲವಾದ ಸ್ಪರ್ಧಿಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಅತ್ಯಾಧುನಿಕ ಡಿಸ್ಪ್ಲೇ, ಶಕ್ತಿಯುತ ಪ್ರೊಸೆಸರ್ ಮತ್ತು ಉತ್ತಮ ಕ್ಯಾಮೆರಾದೊಂದಿಗೆ ಈ ಸ್ಮಾರ್ಟ್‌ಫೋನ್, ಪ್ರೀಮಿಯಂ ಸ್ಮಾರ್ಟ್‌ಫೋನ್ ಬಯಸುವ ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಬಹುದು.

Best Mobiles in India

English summary
According to tipster Yogesh Brar, SmartPrix reports that the rumored Vivo X200 FE could be priced in India between Rs. 50,000 and Rs. 60,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+