Home
ಸುದ್ದಿಜಾಲ

Vivo X200 FE: ಭಾರತದಲ್ಲಿ ಬಿಡುಗಡೆ ದಿನಾಂಕ ಸೋರಿಕೆ!

ಭಾರತದಲ್ಲಿ ಬಹು ನಿರೀಕ್ಷಿತ Vivo X200 FE ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವುದಾಗಿ Vivo ಈಗಾಗಲೇ ಅಧಿಕೃತವಾಗಿ ಘೋಷಿಸಿದೆ. ಆದರೆ, ಅಧಿಕೃತ ಬಿಡುಗಡೆ ದಿನಾಂಕದ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ. ಜನಪ್ರಿಯ ಟಿಪ್‌ಸ್ಟಾರ್‌ಗಳು ಈ ತಿಂಗಳ ಮಧ್ಯಭಾಗದಲ್ಲಿ Vivo X200 FE ಅನ್ನು ಅನಾವರಣಗೊಳಿಸಲಾಗುವುದು ಎಂದು ಸೂಚಿಸಿದ್ದಾರೆ. ಈ ಫೋನ್ ಭಾರತದಲ್ಲಿ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯು ಕೆಳಕಂಡಂತಿದೆ.

PassionateGeekz.com ವರದಿಯ ಪ್ರಕಾರ, Vivo X200 FE ಜುಲೈ 14 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ. Vivo ತನ್ನ ವೆಬ್‌ಸೈಟ್‌ನಲ್ಲಿ X200 FE ಗಾಗಿ ಈಗಾಗಲೇ ವಿಶೇಷ ಮೈಕ್ರೋಸೈಟ್ ಅನ್ನು ಸಿದ್ಧಪಡಿಸಿದ್ದು, ಇದು ಸಾಧನದ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತದೆ. Vivo ಈಗಾಗಲೇ ಫೋನ್‌ಗಾಗಿ ಆಂಬರ್ ಹಳದಿ ಮತ್ತು ಲಕ್ಸ್ ಕಪ್ಪು ಬಣ್ಣಗಳನ್ನು ಟೀಸರ್ ಮಾಡಿದ್ದರೂ, ಮೂರನೇ ಫ್ರಾಸ್ಟ್ ಬ್ಲೂ ಛಾಯೆಯಲ್ಲಿಯೂ ಸಹ ಫೋನ್ ಈ ಲಭ್ಯವಿರುತ್ತದೆ ಎಂದು ಈ ವರದಿಯು ಹೇಳಿದೆ.

Vivo X200 FE ಸ್ಮಾರ್ಟ್‌ಫೋನ್ ಪ್ರಸ್ತುತ ತೈವಾನ್ (ಕಳೆದ ವಾರ ಬಿಡುಗಡೆಯಾಗಿದೆ) ಮತ್ತು ಮಲೇಷ್ಯಾದಲ್ಲಿ ಕಪ್ಪು, ನೀಲಿ, ಗುಲಾಬಿ ಮತ್ತು ಹಳದಿ ಛಾಯೆಗಳಲ್ಲಿ ಲಭ್ಯವಿದೆ ಎಂಬುದನ್ನು ನಾವು ಗಮನಿಸಬಹುದು. ಇನ್ನು ತೈವಾನ್‌ನಲ್ಲಿ ಈಗಾಗಲೇ ಬಿಡುಗಡೆಯಾಗಿರುವುದರಿಂದ ಈ Vivo X200 FE ಫೋನಿನ ವಿನ್ಯಾಸ ಮತ್ತು ಪ್ರಮುಖ ಫೀಚರ್ಸ್ ದೊರೆತಿವೆಯಾದರೂ, ಭಾರತೀಯ ರೂಪಾಂತರದ Vivo X200 FE ಫೋನಿನ ಕೆಲವು ವೈಶಿಷ್ಟ್ಯಗಳನ್ನು Vivo ಕಂಪೆನಿಯು ಇತ್ತೀಚಿಗಷ್ಟೇ ಬಹಿರಂಗಪಡಿಸಿದೆ. ಅದರಂತೆ,

Vivo X200 FE: ಸಂಪೂರ್ಣ ವೈಶಿಷ್ಟ್ಯಗಳು
ಮುಂಬರುವ Vivo X200 FE ಫೋನಿನ ಭಾರತೀಯ ಆವೃತ್ತಿಯು Android 15 ಆಧಾರಿತ Funtouch 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಲಿದೆ. ಇದು 6.31-ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಚಿಪ್‌ಸೆಟ್ ವೇಗದ ಮತ್ತು ಸುಗಮ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68+IP69 ರೇಟಿಂಗ್‌ಗಳನ್ನು ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ, Vivo X200 FE ಅತ್ಯಾಧುನಿಕ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ Zeiss-ಬ್ರಾಂಡೆಡ್ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವಿದೆ. 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಒಳಗೊಂಡಿದೆ, ಇದು ವಿವಿಧ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ.

ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, Vivo X200 FE ಫೋನ್ 6,500mAh ಬ್ಯಾಟರಿಯನ್ನು ಹೊಂದಿದ್ದು, ಇದು ದೀರ್ಘಕಾಲದ ಬಳಕೆಯನ್ನು ಖಾತ್ರಿಪಡಿಸುತ್ತದೆ. 90W ವೇಗದ ಚಾರ್ಜಿಂಗ್ ಬೆಂಬಲವಿದೆ, ಇದು ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಲು ಅನುಕೂಲವಾಗುತ್ತದೆ. ಕಂಪನಿಯ ಪ್ರಕಾರ, ಈ ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ 25.44 ಗಂಟೆಗಳ YouTube ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ. ಹಾಗೂ ಈ Vivo X200 FE ಫೋನ್ 12GB RAM ಮತ್ತು 512GB ವರೆಗೆ ಆನ್‌ಬೋರ್ಡ್ ಮೆಮೊರಿಯೊಂದಿಗೆ ಬರುತ್ತದೆ.

Vivo X200 FE: ಭಾರತದಲ್ಲಿ ಬಿಡುಗಡೆ ದಿನಾಂಕ ಸೋರಿಕೆ!

Vivo X200 FE: ಸಂಭಾವ್ಯ ಬೆಲೆ
ಕೆಲವು ವರದಿಗಳ ಪ್ರಕಾರ, Vivo X200 FE ಜಾಗತಿಕ ಮಾರುಕಟ್ಟೆಗಳಿಗೆ ಪರಿಷ್ಕೃತ Vivo S30 Pro ಮಿನಿಯಾಗಿ ಪರಿಚಯಿಸಲಾಗಬಹುದು ಎನ್ನಲಾಗಿದೆ. Vivo S30 Pro ಫೋನ್ ಕಳೆದ ತಿಂಗಳು ಚೀನಾದಲ್ಲಿ ಪರಿಚಯಿಸಲಾಯಿತು, ಇದರ 12GB RAM + 256GB ಸ್ಟೋರೇಜ್ ಆವೃತ್ತಿಯು CNY 3,499 (ಸುಮಾರು ₹ 40,000) ಆರಂಭಿಕ ಬೆಲೆಯಲ್ಲಿ ಲಭ್ಯವಿತ್ತು. ಈ ಮಾಹಿತಿಯು ಭಾರತದಲ್ಲಿ X200 FE ನ ಬೆಲೆ ಶ್ರೇಣಿಯ ಬಗ್ಗೆ ಸ್ವಲ್ಪ ಸುಳಿವು ನೀಡಬಹುದು.

ಇನ್ನು Vivo X200 FE ಭಾರತದಲ್ಲಿ ಯಾವ ನಿಖರ ದಿನಾಂಕದಲ್ಲಿ ಬಿಡುಗಡೆಯಾಗಲಿದೆ ಮತ್ತು ಅದರ ಬೆಲೆ ಎಷ್ಟು ಇರಲಿದೆ ಎಂಬುದನ್ನು ಕಾದು ನೋಡಬೇಕು. ನೀವು ಭಾರತದಲ್ಲಿ ಈ Vivo X200 FE ಫೋನ್ ಯಾವ ಬೆಲೆಯಲ್ಲಿ ಬಿಡುಗಡೆಯಾಗಬೇಕೆಂದು ಆಶಿಸುತ್ತೀರಿ? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
According to a report from PassionateGeekz.com, the Vivo X200 FE is set to launch in India on July 14 at 12 PM IST.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+