Home
ಸುದ್ದಿಜಾಲ

ಭಾರತದಲ್ಲಿ Vivo X200 FE ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಮತ್ತು ಎಲ್ಲವೂ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ಕಂಪೆನಿಯ ಬಹುನಿರೀಕ್ಷಿತ Vivo X200 FE ಸ್ಮಾರ್ಟ್‌ಫೋನ್ ದೇಶದಲ್ಲಿಂದು (ಜುಲೈ 14) ಭರ್ಜರಿಯಾಗಿ ಬಿಡುಗಡೆಯಾಗಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ Vivo X200 FE ಫೋನ್‌ಗಳ ಸಾಲಿಗೆ ಇದು ಹೊಸ ಸೇರ್ಪಡೆಯಾಗಿದ್ದು, AMOLED ಡಿಸ್‌ಪ್ಲೇ, MediaTek Dimensity ಚಿಪ್‌ಸೆಟ್, 16GB of RAM ಮತ್ತು 90W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಬ್ಯಾಟರಿ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ಈ ಹೊಸ Vivo X200 FE ಫೋನಿನ ಸಂಪೂರ್ಣ ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Vivo X200 FE: ಪ್ರಮುಖ ವೈಶಿಷ್ಟ್ಯಗಳು ಹೀಗಿವೆ,
ಹೊಸ Vivo X200 FE ಫೋನ್ 6.31-ಇಂಚಿನ 1.5ಕk (1,216x2,640 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ 120Hz ರಿಫ್ರೆಶ್ ರೇಟ್ ಮತ್ತು 1,800 ನಿಟ್ಸ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ. ಕಾರ್ಯಕ್ಷಮತೆಗಾಗಿ, MediaTek Dimensity 9300+ ಚಿಪ್‌ಸೆಟ್ ಇದ್ದು, ಇದು 16GB LPDDR5X RAM ನೊಂದಿಗೆ ಮತ್ತು ಯುಎಫ್‌ಎಸ್ 3.1 ಆನ್‌ಬೋರ್ಡ್ ಸಂಗ್ರಹಣೆಯ 512 GB ವರೆಗೆ ಜೋಡಿಸಲಾಗಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಫೋನ್ ಆಂಡ್ರಾಯ್ಡ್ 15 ಆಧಾರಿತ ಫನ್‌ಟೌಚೋಸ್ 15 ರೊಂದಿಗೆ ಕಾರ್ಯನಿರ್ವಹಿಸಲಿದೆ

ಕ್ಯಾಮೆರಾ ವಿಭಾಗದಲ್ಲಿ, Vivo X200 FE ಫೋನ್ Zeiss ಬೆಂಬಲಿತ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಬೆಂಬಲವರುವ, 50 ಮೆಗಾಪಿಕ್ಸೆಲ್ Sony IMX921 ಪ್ರಾಥಮಿಕ ಸಂವೇದಕ , 120-ಡಿಗ್ರಿ ವೈಡ್-ಆಂಗಲ್ ಲೆನ್ಸ್‌ನೊಂದಿಗೆ 8 ಮೆಗಾಪಿಕ್ಸೆಲ್ ಸಂವೇದಕ ಹಾಗೂ ಟೆಲಿಫೊಪೊಟೊ ಶೂಟ್ ಮಾಡುವ 50 ಮೆಗಾಪಿಕ್ಸೆಲ್ Sony IMX882 ಪೆರಿಸ್ಕೋಪೋಪ್ ಮೂರು ಸಂವೇದಕಗಳಿವೆ. ಮುಂಭಾಗದಲ್ಲಿ, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, 50 ಮೆಗಾಪಿಕ್ಸೆಲ್ ಸಂವೇದಕವನ್ನು ಅಳವಡಿಸಲಾಗಿದೆ.

ಭಾರತದಲ್ಲಿ Vivo X200 FE ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಮತ್ತು ಎಲ್ಲವೂ!

ಬ್ಯಾಟರಿ ವಿಬಾಗದಲ್ಲಿ, Vivo X200 FE ಫೋನ್ 0W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಬ್ಯಾಟರಿ ಹೊಂದಿದೆ. ಸುರಕ್ಷತೆಗಾಗಿ, ಇದು ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68+IP69 ರೇಟಿಂಗ್‌ಗಳನ್ನು ಪೂರೈಸುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಈ ಫೋನ್ ಡ್ಯುಯಲ್ ನ್ಯಾನೊ ಸಿಮ್, 5 5G, 4G, Wi-Fi, Bluetooth 5.4, GPS, OTG, NFC ಮತ್ತು USB Type-C ಸಂಪರ್ಕವನ್ನು ಬೆಂಬಲಿಸುತ್ತದೆ. 150.83x71.76x7.99 ಮಿಮೀ ಗಾತ್ರದಲ್ಲಿ ಅಳೆಯುವ ಈ ಪೋನ್ 186 ಗ್ರಾಂ ತೂಗುತ್ತದೆ.

ಭಾರತದಲ್ಲಿ Vivo X200 FE ಬೆಲೆ
ಭಾರತದಲ್ಲಿ Vivo X200 FE ಫೋನ್ ಬೆಲೆ 54,999 ರೂ.ಗಳಿಂದ ಆರಭವಾಗಿದ್ದು, ಈ ಆರಂಭಿಕ ಮಾದರಿಯು 12 GB + 256 GB ಮೆಮೊರಿಯನ್ನು ಹೊಂದಿದೆ. ಇದರ 16 GB + 512 GB ಮಾದರಿಯ ಫೋನ್ ಬೆಲೆ 59,999 ರೂ.ಗಳಾಗಿವೆ. ದೇಶದಲ್ಲಿ ಈ ಅಂಬರ್ ಹಳದಿ, ಫ್ರಾಸ್ಟ್ ನೀಲಿ ಮತ್ತು ಐಷಾರಾಮಿ ಬೂದು ಬಣ್ಣ ಆಯ್ಕೆಗಳಲ್ಲಿ ಈ ಫೋನ್ ಲಭ್ಯವಿರಲಿದ್ದು, ಗ್ರಾಹಕರುವ ಜುಲೈ 23 ರಿಂದ ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಇ-ಸ್ಟೋರ್ ಮೂಲಕ ಖರೀದಿಸಲು ಅವಕಾಶವಿರಲಿದೆ. ಇನ್ನು ಪ್ರಸ್ತುತ ಇಂದಿನಿಂದಲೇ ಫೋನನ್ನು ಪ್ರೀ-ಬುಕ್ ಕೂಡ ಮಾಡಬಹುದು. ಆದರೆ, ಈ ಫೋನ್ ಮೇಲಿನ ಆರಮಭಿಕ ಕೊಡುಗೆಯ ಕುರಿತಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
In India, the Vivo X200 FE is priced at Rs. 54,999 for the model with 12GB RAM and 256GB storage, whereas the version offering 16GB RAM and 512GB storage is available for Rs. 59,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+