ಭಾರತಕ್ಕೆ Vivo X200 FE ಫೋನ್ ಎಂಟ್ರಿ: ಕಂಪೆನಿಯಿಂದ ಅಧಿಕೃತ ಮಾಹಿತಿ!
Vivo X200 FE ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವುದನ್ನು Vivo ಕಂಪೆನಿ ಅಧಿಕೃತವಾಗಿ ಘೋಷಿಸಿದೆ. ಈ ಫೋನ್ ಕಳೆದ ವಾರ ತೈವಾನ್‌ನಲ್ಲಿ ಬಿಡುಗಡೆಯಾಗಿದ್ದು, ಮುಂದಿನ ವಾರ ಜಾಗತಿಕವಾಗಿ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಯಿದೆ. ಇದರ ಬೆನ್ನಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಎಂದು ಕಂಪನಿ ದೃಢಪಡಿಸಿದೆ. Vivo ತನ್ನ ವೆಬ್‌ಸೈಟ್‌ನಲ್ಲಿ X200 FE ಗಾಗಿ ವಿಶೇಷ ಮೈಕ್ರೋಸೈಟ್ ಅನ್ನು ಸಹ ಸಿದ್ಧಪಡಿಸಿದ್ದು, ಇದು ಸಾಧನದ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Vivo X200 FE: ಸಂಪೂರ್ಣ ವೈಶಿಷ್ಟ್ಯಗಳು,
Vivo X200 FE ಫೋನ್ ಭಾರತೀಯ ಆವೃತ್ತಿಯು Android 15-ಆಧಾರಿತ Funtouch 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಲಿದೆ. ಇದು 6.31-ಇಂಚಿನ ಡಿಸ್‌ಪ್ಲೇ ಹೊಂದಿದೆ. ಕಾರ್ಯಕ್ಷಮತೆಗೆ, ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಳಿಸಲಾಗಿದೆ. ಈ ಚಿಪ್‌ಸೆಟ್ ವೇಗದ ಮತ್ತು ಸುಗಮ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೆ, ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68+IP69 ರೇಟಿಂಗ್‌ಗಳನ್ನು ಪೂರೈಸಿದೆ.
ಕ್ಯಾಮೆರಾ ವಿಬಾಗದಲ್ಲಿ, Vivo X200 FE ಅತ್ಯಾಧುನಿಕ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು Zeiss-ಬ್ರಾಂಡೆಡ್ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಒಳಗೊಂಡಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಸೇರಿವೆ. ಈ ಕಾಂಬಿನೇಷನ್ ವಿವಿಧ ರೀತಿಯ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ.

ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, Vivo X200 FE ಫೋನ್ 6,500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದು ದೀರ್ಘಕಾಲದ ಬಳಕೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೆ, ಇದು 90W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ, ಇದು ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಕಂಪನಿಯ ಪ್ರಕಾರ, ಈ ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ 25.44 ಗಂಟೆಗಳವರೆಗೆ YouTube ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ.
Vivo X200 FE: ಜಾಗತಿಕ ಲಭ್ಯತೆ ಮತ್ತು ಸಂಭಾವ್ಯ ಬೆಲೆ
ಕೆಲವು ವರದಿಗಳ ಪ್ರಕಾರ, Vivo X200 FEಫೋನ್ ಜಾಗತಿಕ ಮಾರುಕಟ್ಟೆಗಳಿಗೆ ಪರಿಷ್ಕೃತ Vivo S30 Pro ಮಿನಿ ಆಗಿರಬಹುದು ಎಂದನಂಬಲಾಗಿದೆ. Vivo S30 Pro ಫೋನ್ ಅನ್ನು ಕಳೆದ ತಿಂಗಳು ಚೀನಾದಲ್ಲಿ ಪರಿಚಯಿಸಲಾಯಿತು, ಅದರ 12GB RAM + 256GB ಸ್ಟೋರೇಜ್ ಆವೃತ್ತಿಯು CNY 3,499 (ಸುಮಾರು ₹ 40,000) ಆರಂಭಿಕ ಬೆಲೆಯಲ್ಲಿ ಲಭ್ಯವಿತ್ತು. ಈ ಮಾಹಿತಿಯು ಭಾರತದಲ್ಲಿ X200 FE ನ ಬೆಲೆ ಶ್ರೇಣಿಯ ಬಗ್ಗೆ ನಮಗೆ ಸ್ವಲ್ಪ ಸುಳಿವು ನೀಡಬಹುದು.
Vivo X200 FE ಈಗಾಗಲೇ ಕಳೆದ ವಾರ ತೈವಾನ್‌ನಲ್ಲಿ ಬಿಡುಗಡೆಯಾಗಿದೆ. ಇದು ಫ್ಯಾಷನ್ ಪಿಂಕ್, ಲೈಟ್ ಹನಿ ಹಳದಿ, ಮಿನಿಮಲಿಸ್ಟ್ ಕಪ್ಪು ಮತ್ತು ಮಾಡರ್ನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಅಲ್ಲದೆ, ಇದು 12GB RAM ಮತ್ತು 512GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ. ಜುಲೈ 3 ರಂದು ಥೈಲ್ಯಾಂಡ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಪ್ರಸ್ತುತ ಮಲೇಷ್ಯಾದಲ್ಲಿ ಕಾಯ್ದಿರಿಸುವಿಕೆಗೆ ಲಭ್ಯವಿದೆ. Vivo X200 FE ಭಾರತದಲ್ಲಿ ಯಾವ ನಿಖರ ದಿನಾಂಕದಂದು ಬಿಡುಗಡೆಯಾಗಲಿದೆ ಮತ್ತು ಅದರ ಬೆಲೆ ಎಷ್ಟು ಇರಲಿದೆ ಎಂಬುದನ್ನು ಕಾದು ನೋಡಬೇಕು. ಭಾರತದಲ್ಲಿ ಈ Vivo X200 FE ಫೋನ್ ಯಾವ ಬೆಲೆಯಲ್ಲಿ ಬಿಡುಗಡೆಯಾಗಲು ಇಚ್ಚಿಸುತ್ತೀರಾ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








