Home
ಸುದ್ದಿಜಾಲ

Vivo: ಬರಲಿದೆ ಹೊಸ ಫೋನ್; ಒಂದಲ್ಲ.. ಮೂರು! 200MP ಕ್ಯಾಮೆರಾ.. ಹೇಗಿವೆ ಫೀಚರ್ಸ್‌

ವಿವೋ (Vivo) ಕಂಪನಿಯು ಭಾರತದಲ್ಲಿ ವಿವೋ X200 (Vivo X200) ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ Vivo X200, Vivo X200 Pro ಮತ್ತು Vivo X200 Pro Mini ಎಂಬ ಮೂರು ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈಗಾಗಲೇ, ಕಳೆದ ವಾರ ಚೀನಾದಲ್ಲಿ ವಿವೋ X200 ಸರಣಿಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಭಾರತೀಯ ಗ್ರಾಹಕರು ಈ ಫೋನ್‌ಗಳು ಯಾವಾಗ ಬರುತ್ತವೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ನಿಮ್ಮ ಈ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಕಂಪನಿಯು ಕಳೆದ ಡಿಸೆಂಬರ್‌ನಲ್ಲಿ Vivo X100 ಸರಣಿಯನ್ನು ಬಿಡುಗಡೆ ಮಾಡಿತ್ತು. ಇದು ಮೊದಲು ಚೀನಾದಲ್ಲಿ ಲಾಂಚ್ ಆಗಿತ್ತು. ಬಳಿಕ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ವಿವೋ X200 ಸರಣಿಯ ಫೋನ್‌ಗಳು ನವೆಂಬರ್ ಅಂತ್ಯದ ವೇಳೆಗೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇತ್ತೀಚೆಗೆ, ವಿವೋ X200 ಪ್ರೊ (Vivo X200 Pro) ಮಾಡೆಲ್ ನಂಬರ್ V2413 ನೊಂದಿಗೆ ಪ್ರಮಾಣೀಕರಣ ವೆಬ್‌ಸೈಟ್‌ ಎನ್‌ಸಿಸಿಯಲ್ಲಿ ಗುರುತಿಸಿದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ.

Vivo: ಬರಲಿದೆ ಹೊಸ ಫೋನ್; ಒಂದಲ್ಲ.. ಮೂರು! 200MP ಕ್ಯಾಮೆರಾ.. ಹೇಗಿವೆ ಫೀಚರ್ಸ್‌

ವಿವೋ X200 ಸರಣಿಯ ಬೆಲೆ ಎಷ್ಟು?

ವಿವೋ X200 ಸರಣಿಯನ್ನು ಚೀನಾದಲ್ಲಿ 50,800 ರೂ.ಗಳ (CNY 4,299) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ವಿವೋ X200 ಪ್ರೊ ಮಿನಿ ಫೋನಿನ ಬೆಲೆ 55,600 ರೂ. (CNY 4,699) ಇದೆ. ಇನ್ನೂ ವಿವೋ X200 ಪ್ರೊನ ಆರಂಭಿಕ ಬೆಲೆ 62,600 ರೂ. (CNY 5,299) ಆಗಿದೆ.

ಕಂಪನಿಯು ಭಾರತದಲ್ಲಿ ವಿವೋ X200 ಸರಣಿ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ವಿವೋ X200 ಪ್ರೊ ಮೊಬೈಲ್ ತೈವಾನ್‌ನ ಎನ್‌ಸಿಸಿ ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಮಲೇಷ್ಯಾದ SIRIM ನಲ್ಲಿನ ಇತ್ತೀಚಿನ ಪಟ್ಟಿಯು ವಿವೋ X200 ಸರಣಿಯ ಜಾಗತಿಕ ಬಿಡುಗಡೆಯ ಬಗ್ಗೆ ಸುಳಿವು ನೀಡಿದೆ. ಮೂರು ಸ್ಮಾರ್ಟ್‌ಫೋನ್‌ಗಳು ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ. ಬನ್ನಿ, ಈ ಸರಣಿಯು ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ತಿಳಿಯೋಣ.

ವಿವೋ X200 ಪ್ರೊ ಫೋನಿನ ವೈಶಿಷ್ಟ್ಯಗಳು

ಕಂಪನಿಯು ವಿವೋ X200 ಪ್ರೊ ವಿನ್ಯಾಸವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿದೆ. ಇದು ಈಗ ಫ್ಲಾಟ್ ಡಿಸ್ಪ್ಲೇ ಮತ್ತು ಬಾಕ್ಸ್ ವಿನ್ಯಾಸದೊಂದಿಗೆ ಬರುತ್ತದೆ. ಹಿಂಭಾಗದಲ್ಲಿರುವ ಕ್ಯಾಮೆರಾ ಮಾಡ್ಯೂಲ್ ನಾವು ವಿವೋ X100 ಸರಣಿಯ ಫೋನ್‌ಗಳಂತೆಯೇ ಇರುತ್ತದೆ.

ಡಿಸ್ಪ್ಲೇ ವಿವರ

ವಿವೋ X200 ಪ್ರೊ ಮೊಬೈಲ್ 6.78 ಇಂಚಿನ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ವಿವೋ X200 ಪ್ರೊ ಮೊಬೈಲ್‌ ಅನ್ನು ಮೀಡಿಯಾ ಟೆಕ್ ಡೈಮೆನ್ಶನ್ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಈ ಫೋನ್ 16GB RAM ಮತ್ತು 1TB ಸ್ಟೋರೇಜ್‌ ಆಯ್ಕೆಯನ್ನು ಹೊಂದಿರಲಿದೆ.

ಕ್ಯಾಮೆರಾ ಸೆಟಪ್

ವಿವೋ ಮುಂಬರುವ ಫೋನಿನ ಕ್ಯಾಮೆರಾ ಬಗ್ಗೆ ಹೆಚ್ಚು ಗಮನಹರಿಸಿದೆ. ಅದರಂತೆ ವಿವೋ X200 ಪ್ರೊ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ LYT 818 ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 200 ಮೆಗಾಪಿಕ್ಸೆಲ್ ಝೈಸ್ (Zeiss) APO ಟೆಲಿಫೋಟೋ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಇದು 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ X200 ಪ್ರೊ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 90W ವೇಗದ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ.

Best Mobiles in India

English summary
Vivo X200 Pro India launch soon: Expected price, camera details, chipset, features and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+