7,200 ಡಿಸ್ಕೌಂಟ್! 200MP ಕ್ಯಾಮೆರಾ.. 6000mAh ಬ್ಯಾಟರಿ.. ಈ ಹೊಸ Vivo ಫೋನ್ ಖರೀದಿಗೆ ಲಭ್ಯ!
ವಿವೋ X200 ಪ್ರೊ (Vivo X200 Pro) ಮೊಬೈಲ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಕಂಪನಿಯು ಇದನ್ನು ತನ್ನ ವಿವೋ X200 (Vivo X200 series) ಸರಣಿಯ ಅಡಿಯಲ್ಲಿ ಪರಿಚಯಿಸಿದೆ. ಅಂದಹಾಗೆ, ಈ ಮೊಬೈಲ್ 7,200 ರೂ.ಗಳ ಡಿಸ್ಕೌಂಟ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಇದು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಇ-ಸ್ಟೋರ್ ಮೂಲಕ ಮಾರಾಟವಾಗುತ್ತಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.
ವಿವೋ X200 ಪ್ರೊ ಮೊಬೈಲ್ ಕೇವಲ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ. ನೀವು, ಟೈಟಾನಿಯಂ ಗ್ರೇ ಮತ್ತು ಕಾಸ್ಮೊಸ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ 200 ಮೆಗಾಪಿಕ್ಸೆಲ್ Zeiss APO ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 512GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿವೋ X200 ಪ್ರೊ ಫೋನಿನ ಬೆಲೆ ಎಷ್ಟು?
ವಿವೋ X200 ಪ್ರೊ ಫೋನಿನ 16GB + 512GB ಸ್ಟೋರೇಜ್ ರೂಪಾಂತರವನ್ನು 94,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನೀವು ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 7,200 ರೂ.ಗಳ ತ್ವರಿತ ರಿಯಾಯಿತಿ ಪಡೆಯಬಹುದು. ಹಾಗೆಯೇ 2,750 ರೂ.ಗಳ ನೋ ಕಾಸ್ಟ್ ಇಎಂಐ ಸೌಲಭ್ಯ ನೀಡಲಾಗುತ್ತಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಜೊತೆಗೆ Vivo TWS 3e ಇಯರ್‌ಬಡ್‌ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ.
ವಿವೋ X200 ಪ್ರೊ: ಟಾಪ್ 5 ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ವಿವೋ X200 ಪ್ರೊ ಮೊಬೈಲ್ 6.78 ಇಂಚಿನ 2K ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಆರ್ಮರ್ ಗ್ಲಾಸ್ ರಕ್ಷಣೆ ಹೊಂದಿದೆ.
ಪ್ರೊಸೆಸರ್ ಯಾವುದು
ವಿವೋ X200 ಪ್ರೊ ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಪ್ರೊಸೆಸರ್ ಹೊಂದಿರುವ ಭಾರತ ಎರಡನೇ ಸ್ಮಾರ್ಟ್‌ಫೋನ್ ಇದಾಗಿದೆ. ಇದು ಆಂಡ್ರಾಯ್ಡ್ 15 ಆಧಾರಿತ FunTouch ಓಎಸ್ 15 ನಲ್ಲಿ ಕೆಲಸ ಮಾಡುತ್ತದೆ.
200 ಮೆಗಾಪಿಕ್ಸೆಲ್ ಕ್ಯಾಮೆರಾ
ವಿವೋ X200 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 200 ಮೆಗಾಪಿಕ್ಸೆಲ್ Zeiss APO ಟೆಲಿಫೋಟೋ ಲೆನ್ಸ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.
6000mAh ದೊಡ್ಡ ಬ್ಯಾಟರಿ
ವಿವೋ X200 ಪ್ರೊ ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 30W ವೈರ್‌ಲೆಸ್ ಚಾರ್ಜಿಂಗ್ ಸಹ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ವಿವೋ X200 ಪ್ರೊ ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68/69 ರೇಟಿಂಗ್ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಎನ್‌ಎಫ್‌ಸಿ ಮತ್ತು ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಸಹ ಹೊಂದಿದೆ.


Click it and Unblock the Notifications








