Home
ಸುದ್ದಿಜಾಲ

ಫ್ಲಿಪ್ ಕಾರ್ಟ್‌ನಲ್ಲಿ ವಿವೋ ಎಕ್ಸ್ 21 ಲಭ್ಯ..ಎಕ್ಸ್ ಚೇಂಜ್ ಆಫರ್ ಮತ್ತು ಹೆಚ್ಚಿನ ಮಾಹಿತಿ!!

By Sushma Charhra

ಇತ್ತೀಚೆಗೆ ವಿವೋ ಫೋನ್ ಗಳು ಹೆಡ್ ಲೈನ್ ಸುದ್ದಿಯಾಗುತ್ತಿವೆ., ಮೊದಲು ಫೋಲ್ಡ್ ಮಾಡುವ ಸ್ಮಾರ್ಟ್ ಫೋನ್ ಗಳಿಂದ ಸುದ್ದಿಯಾಗಿದ್ದ ವಿವೋ ಈಗ ಇನ್- ಸ್ಕ್ರೀನ್ ಬೆರಳಚ್ಚು ತಂತ್ರಜ್ಞಾನದ ಸ್ಮಾರ್ಟ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಸುದ್ದಿಯಾಗುತ್ತಿದೆ.

ಫ್ಲಿಪ್ ಕಾರ್ಟ್‌ನಲ್ಲಿ ವಿವೋ ಎಕ್ಸ್ 21 ಲಭ್ಯ!!


ಇದರ ಹೆಸರು ವಿವೋ ಎಕ್ಸ್ 21. ಈಗಾಗಲೇ ಟೀಸರ್ ಮತ್ತು ಟಿವಿ ಜಾಹೀರಾತುಗಳಲ್ಲಿ ಇದನ್ನು ನೋಡಿಯಾಗಿದೆ. ಈಗಾಗಲೇ ಚೀನಾದಲ್ಲಿ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ, ಯಾವೆಲ್ಲ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದೆ. ಆದರೆ ಈಗ ಬಂದಿರುವ ಮಾಹಿತಿ ಏನು ಅಂದರೆ ಈ ಡಿವೈಸ್ ನ ಲಭ್ಯತೆ ಎಲ್ಲಿ ಮತ್ತು ಹೇಗೆ ಎಂಬುದು...

ಭಾರತೀಯ ಮಾರುಕಟ್ಟೆಯಲ್ಲಿ ಇನ್ ಸ್ಕ್ರೀನ್ ಫಿಂಗರ್ ಪ್ರಿಂಟ್ ಇರುವ ಮೊದಲ ಸ್ಮಾರ್ಟ್ ಫೋನ್ ಇದಾಗಿದ್ದು,ವಿವೋ ಎಕ್ಸ್ 21 ಎಕ್ಸ್ ಕ್ಲೂಸೀವ್ ಆಗಿ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಲಭ್ಯವಿದೆ. ವಾಣಿಜ್ಯ ವೆಬ್ ಸೈಟ್ ಫ್ಲಿಫ್ ಕಾರ್ಟ್ ಮತ್ತೊಮ್ಮೆ ಬಿಡುಗಡೆಯ ಸಮಯ ಮತ್ತು ದಿನಾಂಕವನ್ನು ಖಚಿತಪಡಿಸಿದೆ. ಮೇ 29 ನೇ ತಾರೀಕು, ನವದೆಹಲಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾರತೀಯ ಸಮಯ ಮಧ್ಯಾಹ್ನ 12.30ಕ್ಕೆ ಈ ಸ್ಮಾರ್ಟ್ ಫೋನ್ ಬಿಡುಗಡೆಗೊಳ್ಳಲಿದ್ದು , ಅಂದೇ ಮಾರಾಟ ಕೂಡ ಪ್ರಾರಂಭವಾಗಲಿದೆ.

ಆನ್ ಲೈನ್ ವ್ಯವಹಾರದ ಎಕ್ಸ್ ಕ್ಲೂಸಿವ್ ಪಾಲುದಾರರಾಗಿರುವ ಫ್ಲಿಪ್ ಕಾರ್ಟ್ ವಿವೋ ಎಕ್ಸ್21 ಖರೀದಿದಾರರಿಗೆ ಉತ್ತಮ ಆಫರ್ ನೀಡಿದೆ. ಎಕ್ಸ್ ಚೇಂಜ್ ಆಫರ್ ಇದ್ದು 3000 ರುಪಾಯಿಯ ಎಕ್ಸ್ ಚೇಂಜ್ ಸೌಲಭ್ಯವನ್ನು ಒದಗಿಸಿದೆ. ಇನ್ನು ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಶೇಕಡಾ 5 ರಷ್ಟು ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ಇತರೆ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 12 ತಿಂಗಳ ಇಎಂಐ ಸೌಲಭ್ಯವಿದೆ.

ವಿವೋ ಸ್ವಂತ ವೆಬ್ ಸೈಟ್ ನಲ್ಲಿ ಪ್ರೀ ಬುಕ್ ಮಾಡಲು ಅವಕಾಶವಿದ್ದು, 2000 ರುಪಾಯಿಯ ಅಡ್ವಾನ್ಸ್ ನೀಡಬೇಕಾಗುತ್ತದೆ. ಫ್ಲಿಪ್ ಕಾರ್ಟ್ ಪೇಜ್ ನಲ್ಲ ವಿವೋ ಎಕ್ಸ್ 21 ನ ವೈಶಿಷ್ಟ್ಯಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ಲಭ್ಯವಿದೆ. ಈ ಫೋನಿನ ಹೈಲೆಟ್ ಎಂದರೆ ಇನ್ ಸ್ಕ್ರೀನ್ ಫಿಂಗರ್ ಪ್ರಿಂಟ್ ಸೆನ್ಸರ್, ಡಿವೈಸ್ ನ್ನು ಅನ್ ಲಾಕ್ ಮಾಡಲು ಬಳಕೆದಾರ ಕೇವಲ ಸ್ಕೀನಿನ ಕೆಳಭಾಗವನ್ನು ಸ್ಪರ್ಷಿಸಿದರೆ ಸಾಕಾಗುತ್ತದೆ.

6.28-ಇಂಚಿನ ಸೂಪರ್ AMOLED ಫುಲ್ HD+ ಡಿಸ್ಪ್ಲೇ ಇದ್ದು,1.66ಎಂಎಂ ಅಲ್ಟ್ರಾ ಸ್ಲಿಮ್ ಬೆಝಲ್ ಇದೆ ಮತ್ತು ಮೇಲ್ಬಾಗದಲ್ಲಿ ನಾಚ್ ಇದೆ. Qualcomm Snapdragon ಪ್ರೊಸೆಸರ್ ಹೊಂದಿದೆ.6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಅವಕಾಶವಿದೆ. ಅಷ್ಟೇ ಅಲ್ಲ ವೇಗವಾಗಿ ಚಾರ್ಜ್ ಆಗುವ ಸಾಮರ್ಥ್ಯ ಹೊಂದಿದೆ.

24MP ಸೆನ್ಸರ್ ಜೊತೆಗೆ 1.28um ಪಿಕ್ಸಲ್ ಸೈಜಿನ ಕ್ಯಾಮರಾವಿದೆ ಎಂದು ಫ್ಲಿಪ್ ಕಾರ್ಟ್ ತಿಳಿಸುತ್ತಿದೆ. ಕ್ಯಾಮರಾ ಸಾಫ್ಟ್ ವೇರ್ ನಲ್ಲಿ AIಫೇಸ್ ಬ್ಯೂಟಿ, HDR ಮೋಡ್, Shot Re-Focus ಮತ್ತು 4K ವೀಡಿಯೋ ರೆಕಾರ್ಡಿಂಗ್ ಅವಕಾಶವು ಲಭ್ಯವಿರಲಿದೆ.

Best Mobiles in India

English summary
Vivo X21 India release, availability, exchange offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+