ಬರಲಿದೆ ವಿವೋ X30 ಫೋನ್ ಇರಲಿದೆ 60x ಸೂಪರ್ ಜೂಮ್ ಕ್ಯಾಮೆರಾ!

|

ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ದಿನಕ್ಕೊಂದು ಹೊಸ ಬಗೆಯ ಸ್ಮಾರ್ಟ್‌ಪೋನ್‌ ಬಿಡುಗಡೆಯಾಗುತ್ತಲೇ ಇರುತ್ತೆ. ಹೊಸ ಹೊಸ ಬಗೆಯ ಫೀಚರ್‌ಗಳುಳ್ಳ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕುತ್ತಿವೆ. ಇನ್ನು ಸ್ಮಾರ್ಟ್‌ಪೋನ್‌ ಪ್ರಿಯರ ನೆಚ್ಚಿನ ಪೋನ್‌ಗಳ್ಳಲ್ಲಿ ಒಂದಾದ ವಿವೋ ಕೂಡ ಹೊಸ ಹೊಸ ಬಗೆಯ ಫೀಚರ್‌ಗಳ ಪೋನ್‌ ಅನ್ನ ಪರಿಚಯಿಸುತ್ತಲೇ ಇದೆ. ಇದೀಗ ಡಿಸೆಂಬರ್‌ ತಿಂಗಳಲ್ಲಿ ವಿವೋ ತನ್ನ x30ಸರಣಿಯ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು. ಇದರ ಟೀಸರ್‌ ಇದೀಗ ಬಾರಿ ಸೌಂಡ್‌ ಮಾಡ್ತಿದೆ.

ಸ್ಮಾರ್ಟ್‌ಫೋನ್‌

ಹೌದು ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ಹೊಸ ಬಗೆಯ ಪೀಚರ್‌ಗಳಿಗೇನು ಭರವಿಲ್ಲ. ಸಧ್ಯ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಗ್ರಾಹಕರಿಗೆ ಇನ್ನು ಹೆಚ್ಚಿನ ಗುಣಮಟ್ಟದ ಪೀಚರ್‌ಗಳನ್ನ ಪರಿಚಯಿಸೋಕೆ ಎಲ್ಲಾ ಸ್ಮಾರ್ಟ್‌ಪೋನ್‌ ಕಂಪೆನಿಗಳು ಪ್ರಯತ್ನಿಸುತ್ತಲೇ ಇವೆ. ಇದಕ್ಕೆ ತಕ್ಕಂತೆ ಇದೀಗ ವಿವೋ x30 ಸರಣಿ ಬಿಡುಗಡೆಯಾಗಲಿದದ್ದು. ಹೊಸ ಬಗೆಯ ಫೀಚರ್‌ಗಳು ಇದರಲ್ಲಿ ಸಿಗಲಿದೆ ಅಂತಾ ಹೇಳಲಾಗ್ತಿದೆ.

ವಿವೋ x30

ಸಧ್ಯ ವಿವೋ x30 ಸರಣಿಯ ಸ್ಮಾರ್ಟ್‌ಪೋನ್‌ ಟೀಸರ್‌ನಲ್ಲಿ ವಿವೋ X30 ಕ್ಯಾಮೆರಾ, 60X ಸೂಪರ್ ಜೂಮ್ ಟೆಕ್ ಬೆಂಬಲದೊಂದಿಗೆ ಬರಲಿದೆ ಅನ್ನೋದು ಗೊತ್ತಾಗಿದೆ. ವಿವೋ ಎಕ್ಸ್ 30ಯ ಹೊಸ ಟೀಸರ್ ಪ್ರಕಾರ ಬರಿಗಣ್ಣಿಗೆ ಸುಲಭವಾಗಿ ಗೋಚರಿಸದ ವಿಷಯಗಳನ್ನು 60x ಸೂಪರ್‌ ಜೂಮ್ ಮೂಲಕ ಕ್ಲಿಯರ್‌ ಆಗಿ ನೋಡಬಹುದು. ಇನ್ನು ವಿವೋ X30 ಪೆರಿಸ್ಕೋಪ್ ಲೆನ್ಸ್ ಹೊಂದಿದ್ದು ಉತ್ತಮ ಗುಣಮಟ್ಟದ ಪೋಟೋಗ್ರಫಿಯ ಅನುಭವ ನೀಡಲಿದೆ ಅನ್ನೊದನ್ನ ವಿವೋ ತನ್ನ ಟೀಸರ್‌ ನಲ್ಲಿ ಹೇಳಿಕೊಂಡಿದೆ.

ಡಿಸ್‌ಪ್ಲೇ

ವಿವೋ ‍X 30 ಸ್ಮಾರ್ಟ್‌ಪೋನ್‌ ಡಿಸ್‌ಪ್ಲೇಯು 6.59-ಇಂಚಿನ ಅಮೋಲೆಡ್ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹಾಗೂ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ಗಳನ್ನ ಒಳಗೊಂಡಿರಲಿದೆ ಎನ್ನಲಾಗ್ತಿದ್ದು. ವಿವೋ X30 ಪ್ರೊ 6.89 ಇಂಚಿನ ಅಮೋಲೆಡ್ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗ್ತಿದೆ, ಹಾಗೇಯೇ ವಿವೋ X 30 8GB RAM, 128GB ಶೇಖರಣಾ ಸಾಮರ್ಥ್ಯದ ಜೊತೆಗೆ ಡ್ಯುಯಲ್-ಮೋಡ್ ಆಗಿರಲಿದ್ದು 5G ಬೆಂಬಲವನ್ನು ಹೊಂದಿರಲಿದೆ. ಇನ್ನು ವಿವೋX30 ಪ್ರೋ 12GB RAM, 256GB ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ ಎನ್ನಲಾಗ್ತಿದೆ.

X30 ಪ್ರೋ

ವಿವೋX30 ಮತ್ತು X30 ಪ್ರೋ ಎರಡು ಕೂಡ Exynos 980 ಪ್ರೊಸೆಸರ್‌ ಹೊದಿದ್ದು ಅಡ್ರಾಯ್ಡ್ 9OS ಇರಲಿದೆ ಎಂದು ಅಂದಾಜಿಸಲಾಗಿದೆ. ವಿವೋ X30 ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಹೊಂದಿರಲಿದ್ದು, ಕ್ರಮವಾಗಿ 64 ಮೆಗಾಪಿಕ್ಸೆಲ್ + 8 ಮೆಗಾಪಿಕ್ಸೆಲ್ + 13-ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ವಿವೋX30 ಪ್ರೋ ಕೂಡ ಕ್ವಾಡ್ ಕ್ಯಾಮೆರಾ ಹೊಂದಿರಲಿದೆ.

ಆರಂಭಿಕ ಬೆಲೆ

ವಿವೋ X30 ಮತ್ತು ವಿವೋ X30 ಪ್ರೋ ಸ್ಮಾರ್ಟ್‌ಪೋನ್‌ 4,500 ಎಮ್ಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು. X30 ಮತ್ತು X30 ಪ್ರೊ ಚೀನಾದಲ್ಲಿ 3,198 ಯುವಾನ್ (32,463.21 ರೂ. ಎಂದು ಅಂದಾಜಿಸಲಾಗಿದೆ.) ಮತ್ತು 3,998 ಯುವಾನ್ (40,612.46ರೂ. ಎಂದು ಅಂದಾಜಿಸಲಾಗಿದೆ.) ಆರಂಭಿಕ ಬೆಲೆ ಇರಲಿದೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
Vivo will be launching the Vivo X30 series of smartphones in December. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X